July 2021

ಗರ್ಭಿಣಿಯರಿಗೆ ಕೋವಿಡ್ ಲಸಿಕೆ | ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಗು ಮತ್ತು ತಾಯಿ ಆರೋಗ್ಯ ದೃಷ್ಟಿಯಿಂದ ಲಸಿಕೆ ಕಡ್ಡಾಯ ಎಂದು ಹೇಳಲಾಗಿದೆ. ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಗರ್ಭಿಣಿಯರು ಕೋವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಬಹುದು ಅಥವಾ ನೇರ ಲಸಿಕೆ ಕೇಂದ್ರಗಳಿಗೆ ಹೋಗಿ ಅಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದು ಎಂದು ಹೇಳಿದೆ. ಬಹುತೇಕ ಗರ್ಭಿಣಿಯರಲ್ಲಿ ಲಕ್ಷಣರಹಿತ ಸೋಂಕು ಕಾಣಿಸಿಕೊಳ್ಳಬಹುದು ಅಥವಾ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು […]

ಗರ್ಭಿಣಿಯರಿಗೆ ಕೋವಿಡ್ ಲಸಿಕೆ | ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ Read More »

ಜಗ್ಗೇಶ್ ಪುತ್ರ ಗುರುರಾಜ್ ಕಾರು ಅಪಘಾತ

ಬೆಂಗಳೂರು : ನಟ ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಅವರ ಕಾರು ಅಪಘಾತವಾಗಿರುವ ಘಟನೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ನಡೆದಿದೆ.ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಜಗ್ಗೇಶ್ ಪುತ್ರ ಗುರುರಾಜ್ ಅವರ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು ಆಗಿದೆ.ಗುರು ಅವರ ತಲೆ ಮತ್ತು ಕಾಲಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ತೀವ್ರತೆಗೆ ಮುಂಭಾಗದ ಟೈರು

ಜಗ್ಗೇಶ್ ಪುತ್ರ ಗುರುರಾಜ್ ಕಾರು ಅಪಘಾತ Read More »

ಹೆಂಡತಿ ಮೇಲೆ ಕೋಪಕ್ಕೆ ಮಕ್ಕಳಿಗೆ ವಿಷ ಕೊಟ್ಟ ತಂದೆ

ಮುಂಬೈ: ಹೆಂಡತಿ ಮೇಲೆ ಕೋಪಕ್ಕೆ ತಂದೆಯೊಬ್ಬ ಮಕ್ಕಳಿಗೆ ಐಸ್‌ಕ್ರೀಮ್‌ನಲ್ಲಿ ವಿಷ ಬೆರೆಸಿ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದ್ದು ಓರ್ವ ಸಾವನಪ್ಪಿ, ಇನ್ನಿಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮುಹಮ್ಮದ್ ಅಲಿ ನೌಶಾದ್ ವಿಷ ಬೆರಸಿಕೊಟ್ಟ ಆರೋಪಿ. ಅಲಿಷನ್ ಅಲಿ(5) ಸಾವನ್ನಪ್ಪಿದ ಮಗು. ಅಲಿನ(7), ಅರ್ಮಾನ್(2) ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಮಕ್ಕಳು. ಇವರಿಬ್ಬರ ಸ್ಥಿತಿ ಗಂಭೀರ ವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಮಕ್ಕಳಿಗೆ ತಂದೆ ಐಸ್‌ಕ್ರೀಮ್‌ನಲ್ಲಿ ವಿಷಬೆರೆಸಿ ಕೊಟ್ಟಿದ್ದಾನೆ. ಮನ್‌ಖುರ್ದ್ ಪ್ರಾಂತ್ಯದ ನಿವಾಸಿ ಮೊಹಮ್ಮದ್

ಹೆಂಡತಿ ಮೇಲೆ ಕೋಪಕ್ಕೆ ಮಕ್ಕಳಿಗೆ ವಿಷ ಕೊಟ್ಟ ತಂದೆ Read More »

ಹೊಸ ಫೀಚರ್ ಪರಿಚಯಿಸಿದ ವಾಟ್ಸ್’ಆಪ್ | ಮಾಹಿತಿ ತಿಳಿದು ಇಂದೇ ಅಪ್‌ಡೇಟ್ ಮಾಡಿಕೊಳ್ಳಿ

ವಾಟ್ಸಪ್ ತನ್ನ ಬಳಕೆದಾರರಿಗೆ ಅನುಕೂಲವಾಗುವಂತಹ ಹೊಸ ಫೀಚರ್ಸ್ ಅನ್ನು ಶೀಘ್ರದಲ್ಲೇ ಪರಿಚಯಿಸಲಿದೆ. ಕಳೆದ ಎರಡು ವರ್ಷಗಳಿಂದ ಒಂದಷ್ಟು ಹೊಸ ಅಪ್‌ಡೇಟ್ ನೀಡುವ ಮೂಲಕ ಬಳಕೆದಾರರನ್ನು ಹೆಚ್ಚಿಸಿಕೊಂಡ ವಾಟ್ಸಪ್ಪ್ಈ ಬಾರಿ ತುಸು ನೆಮ್ಮದಿ ನೀಡುವ ಆಯ್ಕೆಯನ್ನು ನೀಡಲಿದೆ. ಹೌದು, ವಾಟ್ಸಪ್ ತನ್ನ ನೂತನ ಅಪ್‌ಡೇಟ್‌ನಲ್ಲಿ ಪ್ಲೇಬ್ಯಾಕ್ ಫೀಚರ್ ನೀಡಲಿದ್ದು, ಇದು ವೇವ್ ಆಡಿಯೋ ರೆಕಾರ್ಡ್ಸ ನ್ನು ಪೋರ್ಟ್ ಮಾಡಲಿದೆ. ಅಂದರೆ ಇದುವರೆಗೆ ನೀವು ವಾಟ್ಸಪ್ಪ್ ವಾಯ್ಸ್ ಮೆಸೇಜ್‌ನಲ್ಲಿ ನೇರವಾದ ರೇಖೆಯನ್ನು ನೋಡಿರುತ್ತೀರಿ. ಆದರೆ ಇನ್ಮುಂದೆ ಆಡಿಯೋ ವೇವ್ ಇರಲಿದ್ದು,

ಹೊಸ ಫೀಚರ್ ಪರಿಚಯಿಸಿದ ವಾಟ್ಸ್’ಆಪ್ | ಮಾಹಿತಿ ತಿಳಿದು ಇಂದೇ ಅಪ್‌ಡೇಟ್ ಮಾಡಿಕೊಳ್ಳಿ Read More »

ಪೆಟ್ರೋಲ್ ಡೀಸೆಲ್ ಜೊತೆ ಪೈಪೋಟಿಗೆ ಬಿದ್ದ ಅಡುಗೆ ಅನಿಲ | ಗಗನಕ್ಕೇರುತ್ತಿದೆ ಎಲ್‌ಪಿಜಿ ಬೆಲೆ | ಇಂದಿನಿಂದ ಹಾಲು ಕೂಡ 2 ರೂ ತುಟ್ಟಿ

ನವದೆಹಲಿ: ದೇಶದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಯಾಗುತ್ತಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಜನರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೀಗ ಇದರ ಜೊತೆ ಜೊತೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಸುವ ಮುಕಾಂತರ ತರ ಜನರಿಗೆ ಸರಕಾರ ಶಾಕ್ ಕೊಟ್ಟಿದೆ. ಪೆಟ್ರೋಲ್-ಡೀಸೆಲ್ ಬೆಲೆ ಈಗಾಗಲೇ 100 ರೂ.ದಾಟಿದ್ದು, ಇಂದಿನಿಂದ ದೇಶಾದ್ಯಂತ ಲೀಟರ್ ಅಮುಲ್ ಹಾಲಿಗೆ 2 ರೂಪಾಯಿ ಏರಿಸಲಾಗಿದೆ. ಹೀಗೆ ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಒಂದಾದ ನಂತರ ಒಂದು ಬೆಲೆ ಏರಿಕೆ

ಪೆಟ್ರೋಲ್ ಡೀಸೆಲ್ ಜೊತೆ ಪೈಪೋಟಿಗೆ ಬಿದ್ದ ಅಡುಗೆ ಅನಿಲ | ಗಗನಕ್ಕೇರುತ್ತಿದೆ ಎಲ್‌ಪಿಜಿ ಬೆಲೆ | ಇಂದಿನಿಂದ ಹಾಲು ಕೂಡ 2 ರೂ ತುಟ್ಟಿ Read More »

ಮಂಗಳೂರು: ಹುಕ್ಕಾ ಕೆಫೆಗೆ ದಾಳಿ | ಇಬ್ಬರ ಬಂಧನ

ಮಂಗಳೂರು: ನಿಯಮ ಉಲ್ಲಂಘಿಸಿ ಹುಕ್ಕಾ ಕೆಫೆಯನ್ನು ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ನಗರದ ವೆಲೆನ್ಸಿಯಾದಲ್ಲಿ ಘಟನೆ ನಡೆದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಒಳಗೆ ಕುಳಿತು ಪಾರ್ಟಿ ಮಾಡುವಂತಿಲ್ಲ. ಅಲ್ಲದೆ ಕೋಲ್ಡ್ ಡ್ರಿಂಕ್ಸ್ ಆಗಲೀ, ಹುಕ್ಕಾವನ್ನಾಗಲೀ ಸರ್ವ್ ಮಾಡುವಂತಿಲ್ಲ. ಹುಕ್ಕಾ ಕೆಫೆಯಲ್ಲಿ ಗ್ರಾಹಕರು ಕುಳಿತು ಹುಕ್ಕಾ ಸೇವಿಸುತ್ತಿದ್ದರು. ಕೋಲ್ಡ್ ಡ್ರಿಂಕ್ಸ್ ಇನ್ನಿತರ ಸ್ನಾಕ್ಸ್ ಸೇವನೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪಾಂಡೇಶ್ವರ ಪೊಲೀಸರು ದಾಳಿ ನಡೆಸಿದ್ದು ೧೭ ಮಂದಿಯ ವಿರುದ್ಧ ಲಾಕ್‌ಡೌನ್ ನಿಯಮ

ಮಂಗಳೂರು: ಹುಕ್ಕಾ ಕೆಫೆಗೆ ದಾಳಿ | ಇಬ್ಬರ ಬಂಧನ Read More »

UAPA ಕಾಯ್ದೆಯಡಿ ಬಂಧಿಯಾಗಿದ್ದಾತ 12 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು | ಗೂಡು ಸೇರಿದ ಜೈಲು ಹಕ್ಕಿ

ಶ್ರೀನಗರ; ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ UAPA ಕಾಯ್ದೆಯ ಅಡಿಯಲ್ಲಿ ಪೊಲೀಸರು ಯಾರನ್ನೂ ಪ್ರಶ್ನೆ ಮಾಡದೆ ಪೊಲೀಸರು ಆರೋಪಿಯನ್ನು ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಹಕ್ಕನ್ನು ಹೊಂದಿರುತ್ತಾರೆ. ಹೀಗೆ ಭಯೋತ್ಪಾದನೆ ಪ್ರಕರಣದ ಆರೋಪ ಹೊತ್ತು ಗುಜರಾತ್​ನ ಜೈಲಿನಲ್ಲಿದ್ದ ಕಾಶ್ಮೀರ ಮೂಲದ ಬಶೀರ್ ಅಹ್ಮದ್ ಬಾಬಾ (44) ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 12 ವರ್ಷಗಳ ಬಳಿಕ ಈಗ ಗುಜರಾತ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ

UAPA ಕಾಯ್ದೆಯಡಿ ಬಂಧಿಯಾಗಿದ್ದಾತ 12 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು | ಗೂಡು ಸೇರಿದ ಜೈಲು ಹಕ್ಕಿ Read More »

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ | ಈ ಬಹುಮಾನದ ರಿಜಿಸ್ಟರ್ ಪೋಸ್ಟ್ ನಿಮ್ಮ ಮನೆಗೂ ಬರಬಹುದು ಎಚ್ಚರ…..!!

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಅಂಚೆ ಮೂಲಕ ಸ್ಕ್ರ‍್ಯಾಚ್ ಕಾರ್ಡ್ ಕಳುಹಿಸಿ 12 ಲಕ್ಷ. ರೂ ಬಂದಿದೆ ಎಂದು ಹೇಳಿ ಲಕ್ಷ ಲಕ್ಷ ರೂ. ಪಡೆದು ವಂಚನೆ ಎಸಗಿರುವ ಘಟನೆ ನಡೆದಿದೆ. ಮಂಗಳೂರು ಮೂಲದ ವ್ಯಕ್ತಿಯೋರ್ವರಿಗೆ ನ್ಯಾಪ್ಟಾಲ್ ಸಂಸ್ಥೆಯಿಂದದ ರಿಜಿಸ್ಟರ್ ಪೋಸ್ಟ್ ಬಂದಿತ್ತು. ಅದನ್ನು ತೆರೆದು ನೋಡಿದ ವೇಳೆ ಅದರಲ್ಲಿ ಸ್ಕ್ರ‍್ಯಾಚ್ ಕಾರ್ಡ್ ಹಾಗೂ ಪತ್ರ ಇತ್ತು. ಅಲ್ಲದೇ, 12 ಲಕ್ಷ ರೂ. ಬಹುಮಾನ ಬಂದಿರುವುದಾಗಿ ನಮೂದಿಸಲಾಗಿತ್ತು. ರಿಜಿಸ್ಟರ್ ಪೋಸ್ಟ್ನಲ್ಲಿದ್ದ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ | ಈ ಬಹುಮಾನದ ರಿಜಿಸ್ಟರ್ ಪೋಸ್ಟ್ ನಿಮ್ಮ ಮನೆಗೂ ಬರಬಹುದು ಎಚ್ಚರ…..!! Read More »

ಸುಳ್ಯ: ಜೋಕಾಲಿ ಬಿಗಿದು ಬಾಲಕ ಸಾವು

ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಮೃತಪಟ್ಟ ಘಟನೆ ಚೆಂಬು ಗ್ರಾಮದ ಪನೇಡ್ಕದಿಂದ ವರದಿಯಾಗಿದೆ. ಪನೇಡ್ಕ ತಾರಾಕುಮಾರ ಎಂಬವರ ಮಗ ಭರತ್ ಮೃತಪಟ್ಟ ಬಾಲಕ. 4 ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕ ಭರತ್ ಮನೆಯಲ್ಲಿ ಜೋಕಾಲಿ ಆಡುತ್ತಿರುವಾಗ ಈ ಘಟನೆ ನಡೆದಿದ್ದು , ಬಾಲಕನ ಮೃತದೇಹವನ್ನು ಸುಳ್ಯದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ ಎಂದು ತಿಳಿದು ಬಂದಿದೆ

ಸುಳ್ಯ: ಜೋಕಾಲಿ ಬಿಗಿದು ಬಾಲಕ ಸಾವು Read More »

“ವೈದ್ಯೋ ನಾರಾಯಣೋ ಹರಿ”, ಜೀವ ರಕ್ಷಕರೇ ನಿಮಗೊಂದು ಸಲಾಂ

ಈ ಮಾತಿನ ನಿಜವಾದ ಅರ್ಥ ಕಳೆದೆರಡು ವರ್ಷಗಳಿಂದ ಜಗತ್ತು ಎದುರಿಸುತ್ತಿರುವ ಸಾಂಕ್ರಾಮಿಕದಿಂದ ಅರಿವಿಗೆ ಬರುತ್ತಿದೆ ಎಂದರೆ ತಪ್ಪಾಗಲ್ಲ. ವೈದ್ಯರಿಲ್ಲದೇ ಈ ಕೊರೊನಾ ಮಹಾಮಾರಿಯನ್ನು ಎದುರಿಸುವ ವಿಚಾರ ಊಹಿಸಿಕೊಳ್ಳಲು ಅಸಾಧ್ಯ. ಅದೇ ರೀತಿ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಡಾಕ್ಟರ್ ಗಳ ಪಾತ್ರ ಮಾತಿಗೆ ನಿಲುಕದ್ದು. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ, ಜನಸೇವೆ ಮಾಡುವ ವೈದ್ಯರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ತಮ್ಮ ಅನುಕೂಲತೆಯನ್ನು ಗಣನೆಗೆ ತೆಗೆದುಕೊಳ್ಳದೆ ರೋಗಿಯ ಆರೈಕೆಗೆ ಹೆಚ್ಚು ಕಾಲವನ್ನು ವಿನಿಯೋಗಿಸುವ ವೈದ್ಯರುಗಳು ಸದಾ ದೇವತೆಗಳಿಗೆ ಸಮನಾಗಿರುತ್ತಾರೆ.

“ವೈದ್ಯೋ ನಾರಾಯಣೋ ಹರಿ”, ಜೀವ ರಕ್ಷಕರೇ ನಿಮಗೊಂದು ಸಲಾಂ Read More »