July 2021

ಅಶ್ಲೀಲ ವಿಡಿಯೋ ಚಿತ್ರೀಕರಣವೂ ಕೂಡ ಉದ್ಯೋಗವೇ… ಲೈಂಗಿಕ ವಿಚಾರ ಬಚ್ಚಿಟ್ಟಷ್ಟು ಅದರ ಕುತೂಹಲಗಳು ಹೆಚ್ಚಾಗುತ್ತೆ- ನಟಿ ಸೋಮಿ ಅಲಿ

ಮುಂಬೈ: ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸುವುದು ಕೂಡ ಒಂದು ಉದ್ಯೋಗ ಅದು ಅಪರಾಧವಲ್ಲ ಎಂದು ಬಾಲಿವುಡ್ ನಟಿ ಸೋಮಿ ಅಲಿ ಹೇಳಿಕೆ ನೀಡಿದ್ದಾರೆ. ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಮತ್ತು ಅಂತಹ ವಿಡಿಯೋ ನಿರ್ದೇಶನ ಮಾಡುವುದು, ನಿರ್ಮಿಸುವುದು ತಪ್ಪಲ್ಲ. ಅದು ಕೂಡ ಒಂದು ಉದ್ಯಮರಂಗ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೋರ್ನ್ ಉದ್ಯಮ ಎಲ್ಲ ಉದ್ಯಮಗಳಂತೆಯೇ ಒಂದು ಉದ್ಯಮವಾಗಿದೆ. ಹಾಗಾಗಿ, ಅದನ್ನು ಉದ್ಯೋಗವಾಗಿ ಸ್ವೀಕರಿಸುವ ವ್ಯಕ್ತಿಯನ್ನು ನಾನು ಕೆಟ್ಟವನು ಎಂದು ಭಾವಿಸುವುದಿಲ್ಲ. ಲೈಂಗಿಕ ದೌರ್ಜನ್ಯ, ಮೋಸ ಮಾಡುವುದು ಅಪರಾಧವಾಗಿದೆ ಎಂದು ಬಾಲಿವುಡ್ ಬಡೇಮಿಯಾ […]

ಅಶ್ಲೀಲ ವಿಡಿಯೋ ಚಿತ್ರೀಕರಣವೂ ಕೂಡ ಉದ್ಯೋಗವೇ… ಲೈಂಗಿಕ ವಿಚಾರ ಬಚ್ಚಿಟ್ಟಷ್ಟು ಅದರ ಕುತೂಹಲಗಳು ಹೆಚ್ಚಾಗುತ್ತೆ- ನಟಿ ಸೋಮಿ ಅಲಿ Read More »

ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರ್ ಢಿಕ್ಕಿ

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಗೆ ಪ್ರವಾಹ ಪರಿಸ್ಥಿತಿ ಪರಿಶೀಲನೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಿಂದ ಕಾರವಾರಕ್ಕೆ ತೆರಳುವ ಸಂದರ್ಭದಲ್ಲಿ ಈ ಅಪಘಾತವಾಗಿದೆ. ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪ್ರಯಾಣಿಸುತ್ತಿದ್ದ ವಾಹನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಢಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಇದ್ದ ಕಾರು ಹಿಂಬದಿಯಿಂದ ಢಿಕ್ಕಿಯಾಗಿದೆ. ಶಿವರಾಮ್ ಹೆಬ್ಬಾರ್ ಹಾಗೂ ಕಾರಿನಲ್ಲಿದ್ದ

ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರ್ ಢಿಕ್ಕಿ Read More »

ಹೆಡ್‌ಲೈಟ್ ಡಿಮ್‌ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಾಮಾರಿ

ಚಿಕ್ಕಮಗಳೂರು: ಬೈಕಿನ ಹೆಡ್‌ಲೈಟ್ ಡಿಮ್ ಅಂಡ್ ಡಿಪ್ ಮಾಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಸೇರಿ ನಾಲ್ವರ ತಂಡ ಬಜರಂಗದಳದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದ ಹೊರಹೊಲಯದಲ್ಲಿ ನಡೆದಿದೆ. ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಹಾಗೂ ನಿತಿನ್ ಎಂಬ ಯುವಕರು ಕೊಪ್ಪ ತಾಲೂಕಿನ ಗುಣವಂತೆ ಸಮೀಪ ವಾಷಿಂಗ್ ಮೆಷಿನ್ ರಿಪೇರಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮಕ್ಕಿಮನೆ ಮಾರ್ಗವಾಗಿ ವಾಪಸ್ ಬರುತ್ತಿದ್ದಾಗÀ ಕೊಪ್ಪ ಪಟ್ಟಣದಲ್ಲಿ ಈ ಘಟನೆ

ಹೆಡ್‌ಲೈಟ್ ಡಿಮ್‌ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಾಮಾರಿ Read More »

‘ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ’ ಹಿರಿಯರ ಅಸಮಾಧಾನವೇ ಮೂಲ ಕಾರಣವಂತೆ! ಸಿಎಂ ಬೊಮ್ಮಾಯಿ ಹೆಸರಿಂದ ಸಿಡಿ ತನಿಖೆ ವಿಳಂಬ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ಕಾರಣಕ್ಕೆ ಸಚಿವಾಕಾಂಕ್ಷಿಗಳು ನಿತ್ಯ ಸಿಎಂ ಮನೆಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನೇರವಾಗಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಕೋಪದ ಕಟ್ಟೆ ಒಡೆಯಲಿದೆ ಎನ್ನುವ ಅನುಮಾನ ಹೈಕಮಾಂಡ್‌ಗೆ ಇದೆ. ಇದೆಕ್ಕೆಲ್ಲ ಮಾಜಿ ಸಚಿವರಲ್ಲಿರುವ ಅಸಮಾಧಾನವೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಹಾಗಾಗಿ ಎಲ್ಲರ ಸಮಾಧಾನವಾದ ಬಳಿಕ ಸಚಿವ ಸಂಪುಟ ವಿಸ್ತರೆಣೆ ಮಾಡುವ ಬಗ್ಗೆ ಸಿಎಂ ನಿರ್ದರಿಸಿದ್ದಾರೆ.ಇನ್ನೂ ಕೆಲವು ಶಾಸಕರು ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್ ನಾಯಕರನ್ನು

‘ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ’ ಹಿರಿಯರ ಅಸಮಾಧಾನವೇ ಮೂಲ ಕಾರಣವಂತೆ! ಸಿಎಂ ಬೊಮ್ಮಾಯಿ ಹೆಸರಿಂದ ಸಿಡಿ ತನಿಖೆ ವಿಳಂಬ Read More »

ಬೆಳ್ತಂಗಡಿ: ಮದುವೆ ನಿಶ್ಚಯವಾದ ಯುವಕನ ಕೊಲೆಗೈದ ಪ್ರಕರಣ:6 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಬೆಳ್ತಂಗಡಿ: ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದ ಸಂಬಂಧಿಸಿದ ಆರು ಮಂದಿ ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ತಾಲೂಕಿನ ಆನಂದ ನಾಯ್ಕ(39), ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ(39), ಚಾರ್ಮಾಡಿ ನಿವಾಸಿ ವಿನಯ್ ಕುಮಾರ್(34) , ಮೂಡುಕೋಡಿ ನಿವಾಸಿ ಪ್ರಕಾಶ್(35), ಬಂಟ್ವಾಳ ಪುದು ನಿವಾಸಿ ಲೋಕೇಶ್(38), ಮೇಲಂತಬೆಟ್ಟು ನಿವಾಸಿ ನಾಗರಾಜ್(42) ಶಿಕ್ಷೆಗೆ ಅಪರಾಧಿಗಳು. ಇವರು ಬೆಳ್ತಂಗಡಿ

ಬೆಳ್ತಂಗಡಿ: ಮದುವೆ ನಿಶ್ಚಯವಾದ ಯುವಕನ ಕೊಲೆಗೈದ ಪ್ರಕರಣ:6 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ Read More »

ಪಾಣೆಮಂಗಳೂರು: ಸೇತುವೆ ಬಳಿ ಬೈಕ್ ಇಟ್ಟು ಸವಾರ ನಿಗೂಡ ನಾಪತ್ತೆ

ಬಂಟ್ವಾಳ: ಪಾಣೆಮಂಗಳೂರು ಹೊಸ ಸೇತುವೆ ಸಮೀಪ ಮಧ್ಯರಾತ್ರಿ ಬೈಕ್ ಚಾಲನೆಯಲ್ಲಿಟ್ಟು ಸವಾರ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾಗಿರು ಬೈಕ್ ಸವಾರನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಾಪತ್ತೆಯಾಗಿರುವ ಬೈಕ್ ಸವಾರನನ್ನು ಮೂಲತ ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ 15ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಆಗಮಿಸಿದ್ದ. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ಬಳಿಕ ಬಂಟ್ವಾಳ ನಗರ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ

ಪಾಣೆಮಂಗಳೂರು: ಸೇತುವೆ ಬಳಿ ಬೈಕ್ ಇಟ್ಟು ಸವಾರ ನಿಗೂಡ ನಾಪತ್ತೆ Read More »

ಒಲಿಂಪಿಕ್: ಕ್ವಾರ್ಟರ್ ಫೈನಲ್ ತಲುಪಿದ ಸಿಂಧು

ಟೋಕಿಯೊ: ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಟೋಕಿಯೊ ಒಲಿಂಪಿಕ್ಸ್ ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಕ್ ಫೆಲ್ಟ್ ಅವರನ್ನು ಮಣಿಸಿದರು. ‘ಐ’ ವಿಭಾಗದ ಅಗ್ರಸ್ಥಾನಿಯಾಗಿದ್ದ ಮಿಯಾ ಬ್ಲಿಕ್ ಫೆಲ್ಟ್ ಅವರನ್ನು 21-15, 21-13 ಸೆಟ್ ಗಳ ಅಂತರದಿಂದ ಸೋಲಿಸಿದರು. ಇದರೊಂದಿಗೆ ಥಾಯ್ಲೆಂಡ್ ಓಪನ್ ನಲ್ಲಿನ ಬ್ಲಿಕ್ ಫೆಲ್ಟ್ ವಿರುದ್ಧದ ಸೋಲಿಗೆ ಸಿಂಧು ಒಲಿಂಪಿಕ್ಸ್ ನಲ್ಲಿ ತಿರುಗೇಟು ನೀಡಿದರು. ಜಪಾನ್‌ನ ಅಕಾನೆ ಯಮಗುಚಿ ಮತ್ತು ಕೊರಿಯಾದ ಕಿಮ್ ಗೇನ್

ಒಲಿಂಪಿಕ್: ಕ್ವಾರ್ಟರ್ ಫೈನಲ್ ತಲುಪಿದ ಸಿಂಧು Read More »

ಕ್ರಿಕೆಟ್ :ದಾಖಲೆ ನಿರ್ಮಿಸಿದ ಪಡಿಕಲ್

ಕೊಲಂಬೋ: ಕರ್ನಾಟಕದ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕಲ್ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಆಡುವ ಮೂಲಕ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಕರ್ನಾಟಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮನ್ ಆಗಿರುವ ದೇವದತ್ ಪಡಿಕಲ್ ಭಾರತ ತಂಡ ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 21 ವರ್ಷದ ದೇವದತ್ ಪಡಿಕಲ್ ಭಾರತ ತಂಡವನ್ನು ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎಂ ದಾಖಲೆಗೆ ಪಾತ್ರರಾದರು. ಪಡಿಕಲ್ 23 ಎಸೆತಗಳಲ್ಲಿ 29 ರನ್

ಕ್ರಿಕೆಟ್ :ದಾಖಲೆ ನಿರ್ಮಿಸಿದ ಪಡಿಕಲ್ Read More »

ಮೂರು ವರ್ಷದ ಮಗುವನ್ನು ಅತ್ಯಾಚಾರವೆಸಗಿದ ಪಾಪಿ- ಆರೋಪಿ ಅಂದರ್

ಬೆಳಗಾವಿ: ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂದಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಈ ದುಷ್ಕೃತ್ಯಕ್ಕೆ ಸಂಬಂಧಿಸಿ ಮುಂಬೈ ಮೂಲದ ಯುವಕ ಸೇರಿದಂತೆ ಇಬ್ಬರ ಬಂಧನವಾಗಿದೆ. ಒಂದು ವಾರದ ಹಿಂದೆ ಬೆಳಗಾವಿಯಲ್ಲಿ ದುಷ್ಕೃತ್ಯ ನಡೆದಿತ್ತು ಎಂದು ತಿಳಿದುಬಂದಿದೆ. ವಾರದ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದ ಯುವಕ, ನೆರೆಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಕೇಳಿಬಂದಿದೆ. ಆದರೆ, ಮರ್ಯಾದೆಗೆ ಹೆದರಿ

ಮೂರು ವರ್ಷದ ಮಗುವನ್ನು ಅತ್ಯಾಚಾರವೆಸಗಿದ ಪಾಪಿ- ಆರೋಪಿ ಅಂದರ್ Read More »

ಸೌತಡ್ಕ‌ ಗಣಪನ ಸನ್ನಿದಿಯಿಂದ ಮಣ್ಣು ತೆಗೆದುಕೊಂಡು ಹೋದ ಮುಸ್ಲಿಂ ಯುವಕ – ಶಂಕಾಸ್ಪದ ಘಟನೆ ಸಿಸಿ ಟಿವಿಯಲ್ಲಿ ಸೆರೆ- ದೂರು ದಾಖಲು

ಧರ್ಮಸ್ಥಳ: ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ, ಬಯಲು ಆಲಯವೆಂದೇ ಪ್ರಸಿದ್ಧಿ ಪಡೆದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವಠಾರದಿಂದ ಮುಸ್ಲಿಂ ಯುವಕನೊಬ್ಬ ಮಣ್ಣು ಅಗೆದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಹೋಗಿ ಸಂಶಯಾಸ್ಪದವಾಗಿ ವರ್ತಿಸಿದ ದೃಶ್ಯ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಾವಳಿಯಿಂದ ಯುವಕನ ಚಹರೆ ಪತ್ತೆಯಾಗಿದ್ದು, ಈತ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ಕಲಂದರ್ ಎಂದು ಗುರುತಿಸಲಾಗಿದೆ. ಈತ ಸೌತಡ್ಕ ಕ್ಷೇತ್ರದ ಆವರಣದಿಂದ ಮಣ್ಣು ಅಗೆದು ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದ್ದು, ಜು.24

ಸೌತಡ್ಕ‌ ಗಣಪನ ಸನ್ನಿದಿಯಿಂದ ಮಣ್ಣು ತೆಗೆದುಕೊಂಡು ಹೋದ ಮುಸ್ಲಿಂ ಯುವಕ – ಶಂಕಾಸ್ಪದ ಘಟನೆ ಸಿಸಿ ಟಿವಿಯಲ್ಲಿ ಸೆರೆ- ದೂರು ದಾಖಲು Read More »