July 2021

ಸರ್ಕಾರಿ ಕೆಲಸಗಳು ವಿಳಂಬ ಆಗ್ತಿದೆಯಾ? ಮೋದಿಗೆ ಪತ್ರ ಬರೆಯಿರಿ. ಹೇಗೆ ಗೊತ್ತಾ?

ಅನೇಕ ಬಾರಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿಯಿಂದ ಕಿರಿಕಿರಿ ಉಂಟಾಗುವುದು ಇದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮೇಲಾಧಿಕಾರಿಗಳಿಗೆ ದೂರನ್ನ ಸಹ ನೀಡುತ್ತಾರೆ. ಆದರೆ ಈ ದೂರುಗಳನ್ನ ಕೆಲವರು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಆದರೆ ಇನ್ಮೇಲೆ ನೀವು ಈ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರೋದಿಲ್ಲ. ಏಕೆಂದರೆ ಸಾರ್ವಜನಿಕರು ನೇರವಾಗಿ ದೂರುಗಳನ್ನ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ತಲುಪಿಸಬಹುದಾಗಿದೆ. ನೀವು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ದೂರನ್ನ ಸಲ್ಲಿಸಬೇಕು ಎಂದುಕೊಂಡಿದ್ದರೆ ಅನಾಯಾಸವಾಗಿ ಈ ಕೆಲಸವನ್ನ ಮಾಡಬಹುದಾಗಿದೆ. ಮನೆಯಲ್ಲಿ ಕುಳಿತುಕೊಂಡೇ […]

ಸರ್ಕಾರಿ ಕೆಲಸಗಳು ವಿಳಂಬ ಆಗ್ತಿದೆಯಾ? ಮೋದಿಗೆ ಪತ್ರ ಬರೆಯಿರಿ. ಹೇಗೆ ಗೊತ್ತಾ? Read More »

ನಮ್ಮವರು ನಮ್ಮ ಗಲ್ಲಿಗಳಲ್ಲಿ ಮಾತ್ರ ಸಿಂಹ – ಸಿದ್ದು ವ್ಯಂಗ್ಯ

ಬೆಂಗಳೂರು; ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಳಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧೈರ್ಯವಿಲ್ಲ. ಯಡಿಯೂರಪ್ಪ ಹಮಾರಾ ಕುತ್ತಾ, ಹಮಾರಾ ಗಲ್ಲಿ ಮೇ ಶೇರ್ ( ನಮ್ಮ ನಾಯಿ, ನಮ್ಮ ಬೀದಿಲಿ ಸಿಂಹ) ನಂತೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಶ್ರೀನಗರದಲ್ಲಿಂದು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗವೇ ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಅನುದಾನಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಈ ಅನುದಾನವನ್ನು ರಾಜ್ಯಕ್ಕೆ

ನಮ್ಮವರು ನಮ್ಮ ಗಲ್ಲಿಗಳಲ್ಲಿ ಮಾತ್ರ ಸಿಂಹ – ಸಿದ್ದು ವ್ಯಂಗ್ಯ Read More »

ಸದ್ಯದಲ್ಲಿ ನಡೆಯುತ್ತದೆ ಸೆಮಿಸ್ಟರ್ ಪರೀಕ್ಷೆ | ಜು. ಎರಡನೇ ವಾರದಲ್ಲಿ ವೇಳಾಪಟ್ಟಿ ಪ್ರಕಟ: ಉನ್ನತ ಶಿಕ್ಷಣ ಇಲಾಖೆ

ಬೆಂಗಳೂರು: ಕೋವಿಡ್ ಕಾರಣದಿಂದ ಮುಂದೂಡಲಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದ್ಯಂತ ಹೆಚ್ಚಿನ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿತ್ತು. ಆ ಸಮಯದಲ್ಲಿ ರಾಜ್ಯದ್ಯಂತ ಲಾಕ್ಡೌನ್ ಘೋಷಣೆಯಾದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಬಳಿಕ ಎಲ್ಲ ವಿಶ್ವವಿದ್ಯಾನಿಲಯಗಳು ಆನ್ಲೈನ್ ಮೂಲಕ ಮುಂದಿನ ಸೆಮಿಸ್ಟರ್ ನ ತರಗತಿಗಳನ್ನು ಆರಂಭಿಸಿವೆ. ಈ ಕಾರಣದಿಂದ ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತವೆಯೇ ಇಲ್ಲವೇ ಎಂದು ವಿದ್ಯಾರ್ಥಿಗಳಲ್ಲಿ

ಸದ್ಯದಲ್ಲಿ ನಡೆಯುತ್ತದೆ ಸೆಮಿಸ್ಟರ್ ಪರೀಕ್ಷೆ | ಜು. ಎರಡನೇ ವಾರದಲ್ಲಿ ವೇಳಾಪಟ್ಟಿ ಪ್ರಕಟ: ಉನ್ನತ ಶಿಕ್ಷಣ ಇಲಾಖೆ Read More »

ಕಾಸರಗೋಡು: ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಬೇಕಲಕೋಟೆ ಬಳಿ ಪತ್ತೆ

ಕಾಸರಗೋಡು: ನಿನ್ನೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ನಾಪತ್ತೆಯಾಗಿದ್ದ ಮೂರು ಜನ ಮೀನುಗಾರರ ಶವ ಪತ್ತೆಯಾಗಿದೆ. ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ ನಿನ್ನೆ ಬೆಳಿಗ್ಗೆ ತಳಂಗರೆ ಸಮೀಪದ ಕಸಬಾ ಕಡಪ್ಪುರ ಬಳಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿತ್ತು. ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಇಂದು ನಾಪತ್ತೆಯಾಗಿದ್ದ ಕಡಪ್ಪುರ ನಿವಾಸಿಗಳಾದ ಸಂದೀಪ್ (33), ರತೀಶನ್ (30) ಮತ್ತು ಕಾರ್ತಿಕ್ (29 ) ಮೃತದೇಹಗಳು ಬೇಕಲ ಕೋಟೆ ಬಳಿ ಪತ್ತೆಯಾಗಿದೆ.

ಕಾಸರಗೋಡು: ನಾಪತ್ತೆಯಾಗಿದ್ದ ಮೀನುಗಾರರ ಮೃತದೇಹ ಬೇಕಲಕೋಟೆ ಬಳಿ ಪತ್ತೆ Read More »

ಜು.8ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ, ಕೆಲವೆಡೆ ಎಲ್ಲೋ ಅಲರ್ಟ್

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 8 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶ್ರೀಲಂಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇಂದಿನಿಂದ ನಾಲ್ಕು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯಾದ್ಯಂತ ಇಂದಿನಿಂದ ಮಳೆಯ ಪ್ರಮಾಣ ಏರಿಕೆಯಾಗಲಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 7 ಮತ್ತು

ಜು.8ರವರೆಗೆ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ, ಕೆಲವೆಡೆ ಎಲ್ಲೋ ಅಲರ್ಟ್ Read More »

ಇಂದಿನಿಂದ ಕುಕ್ಕೆ, ಧರ್ಮಸ್ಥಳದಲ್ಲಿ ದೈವ ದರ್ಶನ ಭಾಗ್ಯ. ಸೇವೆಗಳಿಗಿಲ್ಲ ಅವಕಾಶ

ಲಾಕ್ ಡೌನ್ ಸಡಿಲ ಮಾಡಿ ದೇವಸ್ಥಾನಗಳ ದರ್ಶನಕ್ಕೆ ಸರಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನದಲ್ಲಿ ಇಂದಿನಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಕುಕ್ಕೆಯಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಶ್ರೀ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಕ್ಷೇತ್ರದಲ್ಲಿ ಶ್ರೀ ದೇವರ ದರುಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಯಾವುದೇ ಸೇವೆಗಳು ಸರಕಾರದ ಮುಂದಿನ ಆದೇಶದ ತನಕ ನಡೆಯುವುದಿಲ್ಲ.ಮಂಗಳಾರತಿ ಸೇವೆ ನೆರವೇರಿಸಲುಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ

ಇಂದಿನಿಂದ ಕುಕ್ಕೆ, ಧರ್ಮಸ್ಥಳದಲ್ಲಿ ದೈವ ದರ್ಶನ ಭಾಗ್ಯ. ಸೇವೆಗಳಿಗಿಲ್ಲ ಅವಕಾಶ Read More »

ಪುತ್ತೂರು: ಹನಿಟ್ರ್ಯಾಪ್ ಯುವತಿ ಬಂಧನ

ಪುತ್ತೂರು: ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂ. ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರು ನಿವಾಸಿ ಯುವಕನೋರ್ವ 7 ಮಂದಿ ವಿರುದ್ಧ ಪೊಲೀಸ್ ದೂರು ನೀಡಿದ್ದು, ಆರೋಪಿಗಳ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸಿರ್ (25) ಹನಿಟ್ರ್ಯಾಪ್‌ಗೆ ಒಳಗಾಗಿ 30 ಲಕ್ಷ ರೂ. ಕಳೆದುಕೊಂಡವರು. ಈ ಬಗ್ಗೆ ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮುಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್,

ಪುತ್ತೂರು: ಹನಿಟ್ರ್ಯಾಪ್ ಯುವತಿ ಬಂಧನ Read More »

ಕೊಡಗಿನಲ್ಲಿ ಜು.19ರವರೆಗೆ ಲಾಕ್ ಡೌನ್ ಕಂಟಿನ್ಯೂ, ಸೀಮಿತ ಸೇವೆಗಳಿಗಷ್ಟೇ ಅವಕಾಶ, ಪ್ರವಾಸಿಗರಿಗೆ‌ ನಿಷೇಧ

ಕೊಡಗು ವರದಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ರೇಟ್ ಕಡಿಮೆಯಾಗದ ಹಿನ್ನೆಲೆ ಕೆಲವು ಸಡಿಲಿಕೆಯೊಂದಿಗೆ ಲಾಕ್‌ಡೌನ್ ಜು19ರವರೆಗೆ ಮುಂದುವರೆಸಲಾಗಿದೆ.ಈ ಹಿಂದೆ ವಾರದ ಮೂರು ದಿನ ಬೆಳಿಗ್ಗೆ 6ರಿಂದ 1ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಸಡಿಲಿಕೆ ಆದೇಶದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ 2 ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.ಕಂಟೈನ್ಮೇಂಟ್ ವಲಯದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು

ಕೊಡಗಿನಲ್ಲಿ ಜು.19ರವರೆಗೆ ಲಾಕ್ ಡೌನ್ ಕಂಟಿನ್ಯೂ, ಸೀಮಿತ ಸೇವೆಗಳಿಗಷ್ಟೇ ಅವಕಾಶ, ಪ್ರವಾಸಿಗರಿಗೆ‌ ನಿಷೇಧ Read More »

ಅಪ್ಪ-ಮಗನಿಗೆ ಒಬ್ಬಳೇ ಹೆಂಡತಿ…! ಮಾಹಿತಿ ಹಕ್ಕಿನ ವರದಿ ನೋಡಿ ಇಬ್ಬರೂ ಶಾಕ್

ಲಖನೌ: ಮದುವೆಯಾಗಿದ್ದ ಹೆಂಡತಿ ದೂರವಾದ ಮೇಲೆ ಅಕೆಯನ್ನು ಮತ್ತೆ ಎಲ್ಲೇ ನೋಡಿದರೂ ತಮ್ಮ ಹಳೆ ನೆನಪುಗಳು ಕಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕನ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸದಿರದು. ತಾನು ಮದುವೆಯಾಗಿದ್ದ ಹೆಂಡತಿಯೇ ತನ್ನಿಂದ ದೂರಾಗಿ ತನ್ನ ತಂದೆಯನ್ನೇ ವರಿಸಿದ್ದಾಳೆ ಎಂದು ತಿಳಿದು ಯುವಕ ಕಂಗಾಲಾಗಿದ್ದಾನೆ. ಯುವಕನೊಬ್ಬ 2016ರಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದನಂತೆ. ಆ ವೇಳೆಗೆ ಇಬ್ಬರೂ ಅಪ್ರಾಪ್ತರಾಗಿದ್ದರಾದರೂ ಅವರು ಆರು ತಿಂಗಳ ಕಾಲ ಸಂಸಾರ ನಡೆಸಿದ್ದರು. ಅದಾದ ಮೇಲೆ ಗಂಡ ಮದ್ಯಪಾನ ಮಾಡುತ್ತಾನೆ ಎನ್ನುವ ಕಾರಣ

ಅಪ್ಪ-ಮಗನಿಗೆ ಒಬ್ಬಳೇ ಹೆಂಡತಿ…! ಮಾಹಿತಿ ಹಕ್ಕಿನ ವರದಿ ನೋಡಿ ಇಬ್ಬರೂ ಶಾಕ್ Read More »

ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ

ಮಡಿಕೇರಿ: ಪ್ರತ್ಯೇಕ ಪ್ರಕರಣಗಳಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತು ವಡ್ಡರಮಾಡು ಎಂಬಲ್ಲಿ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿದೆ. ಕುಟ್ಟ ಗ್ರಾಮದ ಪೂಜೆಕಲ್ ಎಂಬಲ್ಲಿ ಕಾಕೇರ ಕಾಳಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು 12 ವರ್ಷದ ಗಂಡು ಕಾಡಾನೆ ಕಳೇಬರ ಭಾನುವಾರ ಮುಂಜಾನೆ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ವಡ್ಡರಮಾಡು ಎಂಬಲ್ಲಿ ಹುಲಿ ದಾಳಿಗೆ 1 ತಿಂಗಳು ಪ್ರಾಯದ ಕಾಡಾನೆ ಮರಿ

ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ Read More »