July 2021

ಬಂಟ್ವಾಳ: ರೈಲ್ವೆ ಹಳಿ ಮೇಲೆ ನಿಗೂಢ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ: ಇಲ್ಲಿನ ದೇವಂದಬೆಟ್ಟು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಯುವಕನೊರ್ವನ ಮೃತದೇಹ ಪತ್ತೆಯಾಗಿದ್ದು, ಸಂಶಯಕ್ಕೆ ಕಾರಣವಾಗಿದೆ. ಕಳ್ಳಿಗೆ ಗ್ರಾಮದ ಲಕ್ಷಣ ಎಂಬವರ ಮಗ ಕಾರ್ತಿಕ್ (25) ಎಂಬವರ ಮೃತದೇಹ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಮನೆಯಿಂದ ಹೋರಟ ಕಾರ್ತಿಕ್ ರಾತ್ರಿ 11 ಗಂಟೆಯಾದರು ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಆತನ‌ ಹುಡುಕಾಟ ಆರಂಭಿಸಿದ್ದು, ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಕಾರ್ತಿಕ್ ನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ […]

ಬಂಟ್ವಾಳ: ರೈಲ್ವೆ ಹಳಿ ಮೇಲೆ ನಿಗೂಢ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ Read More »

ಸಿಬಿಎಸ್ ಸಿ 12ನೇ ತರಗತಿ ಫಲಿತಾಂಶ ಇಂದು ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಇಂದು 12 ನೇ ತರಗತಿ ಫಲಿತಾಂಶವನ್ನು ಸಿಬಿಎಸ್ಸಿಯು 2 ಗಂಟೆಗೆ ಘೋಷಿಸಲಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ CBSE ಬೋರ್ಡ್ ಇಂದು ಮಧ್ಯಾಹ್ನ 2 ಗಂಟೆಗೆ ಸಿಬಿಎಸ್ಸಿ 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ. ಫಲಿತಾಂಶ ವೀಕ್ಷಣೆ ಹೇಗೆ.? ವಿದ್ಯಾರ್ಥಿಗಳು ಇಂದು ಮಧ್ಯಾಹ್ನ ಪ್ರಕಟಗೊಳ್ಳಲಿರುವಂತ ಸಿಬಿಎಸ್ಸಿ 12ನೇ ತರಗತಿಯ ಫಲಿತಾಂಶವನ್ನು ಬೋರ್ಡ್ ಅಧಿಕೃತ ಜಾಲತಾಣ cbse.nic.in ಇಲ್ಲವೇ cbseresults.nic.in ನೋಡಬಹುದಾಗಿದೆ. ಇದಲ್ಲದೇ ವಿದ್ಯಾರ್ಥಿಗಳು ಡಿಜಿಲಾಕರ್ ನಲ್ಲಿ

ಸಿಬಿಎಸ್ ಸಿ 12ನೇ ತರಗತಿ ಫಲಿತಾಂಶ ಇಂದು ಪ್ರಕಟ Read More »

ಟಿ-20 ಸರಣಿ‌ ಗೆದ್ದ ಶ್ರೀಲಂಕಾ

ಶ್ರೀಲಂಕಾ 3 ಪಂದ್ಯಗಳ ಟಿ 20 ಸರಣಿಯಲ್ಲಿ ಭಾರತವನ್ನು 2-1 ಅಂತರದಿಂದ ಸೋಲಿಸಿತು. ಕೊನೆಯ ಟಿ 20 ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸರಣಿ ವಶಪಡಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಕಳಪೆ ಆಟದಿಂದಾಗಿ ಎಂಟು ವಿಕೆಟ್‌ಗೆ 81 ರನ್ ಗಳಿಸಿತು. 15 ನೇ ಓವರ್‌ನಲ್ಲಿಯೇ ಆತಿಥೇಯರು ಈ ಗುರಿಯನ್ನು ಸಾಧಿಸಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಲೆಗ್ ಸ್ಪಿನ್ನರ್ ವಹೀಂದು ಹಸರಂಗಾ ಅವರ ಜನ್ಮದಿನದಂದು ಭಾರತದ ಅನನುಭವಿ ಬ್ಯಾಟಿಂಗ್ ಪಕ್ಕೆಲುಬು ಮುರಿದು ಎಂಟು

ಟಿ-20 ಸರಣಿ‌ ಗೆದ್ದ ಶ್ರೀಲಂಕಾ Read More »

ಮಡಿಕೇರಿ: ತರಕಾರಿ‌ ಲಾರಿಯಲ್ಲಿ ಅಕ್ರಮ‌ ಮರ ಸಾಗಾಟ, ಆರೋಪಿಗಳನ್ನು ಬಂಧಿಸಿದ ಸಂಪಾಜೆ ಅರಣ್ಯ‌ಇಲಾಖೆ ಸಿಬ್ಬಂದಿ

ಹುಣಸೂರಿನಿಂದ ಕೇರಳದ ಕಾಂಞಗಾಡ್ ಕಡೆಗೆ ತರಕಾರಿ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ಧಿಮ್ಮಿಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಸಂಪಾಜೆ ತನಿಖಾ ಠಾಣಾ ಸಿಬ್ಬಂದಿಗಳು ಮಾಲುಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೇರಳದ ತಲಚೇರಿ ಜಿಲ್ಲೆಯ ದನೇಶ್ (೨೮), ಕಣ್ಣೂರಿನ ರಾಹುಲ್ (೨೬) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಅಚ್ಚು (ಅಶ್ರಫ್) ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಅರಣ್ಯ ಇಲಾಖೆ ಬಲೆಬೀಸಿದೆ. ಒಟ್ಟು ೨೩ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ಮಡಿಕೇರಿ: ತರಕಾರಿ‌ ಲಾರಿಯಲ್ಲಿ ಅಕ್ರಮ‌ ಮರ ಸಾಗಾಟ, ಆರೋಪಿಗಳನ್ನು ಬಂಧಿಸಿದ ಸಂಪಾಜೆ ಅರಣ್ಯ‌ಇಲಾಖೆ ಸಿಬ್ಬಂದಿ Read More »

ಸೈನಿಕನ ಮೇಲೆ ಹಲ್ಲೆ ಖಂಡಿಸಿ ಇಂದು “ಮಡಿಕೇರಿ ಚಲೋ”

ಮಡಿಕೇರಿ : ಹಾಲಿ ಸೈನಿಕನ ಮತ್ತು ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ಆರೋಪಿಗಳು ಅರೆಸ್ಟ್ ಮಾಡಿ ಒಂದೇ ದಿನದಲ್ಲಿ ಅವರಿಗೆ ಜಾಮೀನು ನೀಡಿದ ಹಿನ್ನಲೆ ಸಾರ್ವಜನಿಕರು ಇಂದು “ಮಡಿಕೇರಿ ಚಲೋ” ಎಂಬ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಜು. 26 ರಂದು ಕುಟುಂಬ ಸಮೇತ ಹಾಲಿ ಸೈನಿಕರೋರ್ವರು ಕಾರಿನಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇದರಿಂದ ಯೋಧ ಮತ್ತು ಕುಟುಂಬದವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ

ಸೈನಿಕನ ಮೇಲೆ ಹಲ್ಲೆ ಖಂಡಿಸಿ ಇಂದು “ಮಡಿಕೇರಿ ಚಲೋ” Read More »

ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಹೊರಟ ಯುವಕ

ದೆಹಲಿ: ಇಲ್ಲಿನ ಇಸ್ಲಾಮಿಕ್ ಪ್ರಚಾರಕರಿಂದ ಮತಾಂತರಗೊಂಡ ನೂರಾರು ಮಂದಿಯ ಪಟ್ಟಿಯಲ್ಲಿ ಯುವಕನ ಹೆಸರಿರುವುದನ್ನು ಕಂಡು ಆತ ಕಾಲ್ನಡಿಗೆಯಲ್ಲೇ ದೆಹಲಿಗೆ ಹೊರಟು ಸುಪ್ರೀಂ ಕೋರ್ಟ್ ಮುಂದೆ ತಾವು ಮತಾಂತರಗೊಂಡಿಲ್ಲ ಎಂದು ಸಾಬೀತು ಪಡಿಸಲು ಮುಂದಾಗಿದ್ದಾರೆ.ಉತ್ತರ ಪ್ರದೇಶದ ಸಹರಾನ್ಪುರದ ಪ್ರವೀಣ್ ಕುಮಾರ್ ಕಾಲ್ನಡಿಗೆಯಲ್ಲೇ ಹೊರಟ ಯುವಕ. ಪಿಎಚ್‌ಡಿ ಪದವೀಧರರಾದ ಇವರು ಕಳೆದ ತಿಂಗಳು ವಿಧ್ವಂಸಕ ಕೃತ್ಯಗಳ ಸಂಬಂಧ ತನಿಖೆ ನಡೆಸುತ್ತಿದ್ದ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ತನಿಖೆ ವಿಚಾರಿಸಿ ಕ್ಲೀನ್ ಚಿಟ್ ಪಡೆದಿದ್ದರು. ಆರರೆ ಆತನ ಗ್ರಾಮವಾದ ಶಿಟ್ಲಾ

ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಹೊರಟ ಯುವಕ Read More »

ಭೂಗತ ಪಾತಕಿ ಛೋಟಾ ರಾಜನ್ ಗೆ ಅನಾರೋಗ್ಯ| ಏಮ್ಸ್‌ಗೆ ದಾಖಲು

ನವದೆಹಲಿ: ಭೂಗತ ದೊರೆ ಛೋಟಾ ರಾಜನ್ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್‌ಗೆ ಜುಲೈ 27ರಂದು ದಾಖಲಾಗಿದ್ದಾನೆ. ಛೋಟಾ ರಾಜನ್ ದೇಶದ ಕಾನೂನುಗಳನ್ನು ಗೌರವಿಸದ ಕಾರಣ ಅವರಿಗೆ ಜಾಮೀನು ನೀಡಬಾರದು ಎಂದು ಕೇಂದ್ರ ತನಿಖಾ ದಳ ಬುಧವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಇದಾದ ಒಂದು ದಿನದ ನಂತರ ರಾಜನ್ ನ ಅನಾರೋಗ್ಯದ ಸುದ್ದಿ ಬಂದಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪರದೀಪ್ ಘರತ್ ಅವರು ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಏಕೈಕ ನ್ಯಾಯಪೀಠಕ್ಕೆ ಅಂಡರ್ವರ್ಲ್ಡ್ ಡಾನ್ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ

ಭೂಗತ ಪಾತಕಿ ಛೋಟಾ ರಾಜನ್ ಗೆ ಅನಾರೋಗ್ಯ| ಏಮ್ಸ್‌ಗೆ ದಾಖಲು Read More »

ಜಾಲತಾಣಗಲ್ಲಿ ವಿವಾದಕ್ಕೀಡಾದ ವಿರಾಟ್‌ ಕೊಹ್ಲಿ

ನವದೆಹಲಿ : ಟೀಮ್‌ ಇಂಡಿಯಾ ಆಟಗಾರ ವಿರಾಟ್‌ ಕೊಯ್ಲಿ ವಿಶ್ವವಿದ್ಯಾಲಯದ ಕುರಿತು ಪೋಸ್ಟ್‌ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೀಡಾಗಿದ್ದರೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ಸಿದ್ದತೆ ನಡೆಸುತ್ತಿದ್ದಾರೆ. ಅಭ್ಯಾಸದ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಕೊಹ್ಲಿ ಸಕ್ರೀಯವಾಗಿದ್ದಾರೆ. ಇಷ್ಟು ದಿನ ತಮ್ಮ ಖಾಸಗಿ ಬದುಕಿನ ಕುರಿತು ಪೋಸ್ಟ್‌ ಮಾಡುತ್ತಿದ್ದ ಕೊಹ್ಲಿ ಇದೀಗ ಖಾಸಗಿ ವಿಶ್ವವಿದ್ಯಾಲಯದ ಕುರಿತು ಪೋಸ್ಟ್‌ ಮಾಡಿದ್ದರು. ಪೋಸ್ಟ್‌ನಲ್ಲಿ,

ಜಾಲತಾಣಗಲ್ಲಿ ವಿವಾದಕ್ಕೀಡಾದ ವಿರಾಟ್‌ ಕೊಹ್ಲಿ Read More »

ಸುಳ್ಯ : ಪಾದಚಾರಿಗೆ ವಾಹನ ಢಿಕ್ಕಿ – ಮೃತ್ಯು

ಸುಳ್ಯ: ವ್ಯಕ್ತಿಯೊಬ್ಬರು ವಾಹನ ಢಿಕ್ಕಿಯಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಬುಲೆರೋ ಢಿಕ್ಕಿ ಗಂಭೀರ ಗಾಯವಾಗಿತ್ತು. ತಕ್ಷಣ ಸ್ಥಳೀಯರು ಇವರನ್ನು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಗಂಭೀರ ಗಾಯವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಇವರು ಅಪತಿಚಿತರಾಗಿದ್ದು, 45 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದ್ದು, ವ್ಯಕ್ತಿಯ ಕಿವಿಯಲ್ಲಿ ಟಿಕ್ಕಿ

ಸುಳ್ಯ : ಪಾದಚಾರಿಗೆ ವಾಹನ ಢಿಕ್ಕಿ – ಮೃತ್ಯು Read More »

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ರೈಲ್ವೆ ಇಲಾಖೆಯಲ್ಲಿ 1664 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ : ಉತ್ತರ ಮಧ್ಯ ರೈಲ್ವೆಯ (ಎನ್​ಸಿಆರ್​​) ಪ್ರಯಾಗ್​ರಾಜ್​, ಉತ್ತರ ಪ್ರದೇಶ ವಿಭಾಗದಲ್ಲಿ ಖಾಲಿ ಇರುವ ಬರೋಬ್ಬರಿ 1664 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಮಧ್ಯ ರೈಲ್ವೆ ನೇಮಕಾತಿ 2021ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಪೂರೈಸಿರಬೇಕು. ಅಲ್ಲದೆ ಕನಿಷ್ಟ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.ವೆಲ್ಡರ್, ವೈರ್​ ಮ್ಯಾನ್​ ಹಾಗೂ ಬಡಗಿ ಕೆಲಸಕ್ಕೆ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ರೈಲ್ವೆ ಇಲಾಖೆಯಲ್ಲಿ 1664 ಹುದ್ದೆಗಳಿಗೆ ಅರ್ಜಿ ಆಹ್ವಾನ Read More »