July 2021

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..!

ಮುಂಬೈ: ಮುಂಬೈನಲ್ಲಿರುವ ನೋಟು ಮುದ್ರಾಣಾಲಯದಿಂದ ಐದು ಬಂಡಲ್ 500 ರೂ ನೋಟು ನಾಪತ್ತೆಯಾಗಿದೆ. ಈ ಬಗ್ಗೆ ನಾಸಿಕ್ ಪೊಲೀಸ್ ಠಾಣೆಯಲ್ಲಿ ಮುದ್ರಣಾಲಯದ ಅಧಿಕಾರಿಗಳು ದೂರು ನೀಡಿದ್ದಾರೆ. ಝೆಡ್ ಪ್ಲಸ್ ಸೆಕ್ಯೂರಿಟಿ ನಡುವೆಯೂ 5 ಲಕ್ಷ ಮೌಲ್ಯದ ನೋಟು ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ ಮತ್ತು ಅನುಮಾನಕ್ಕೆ ಕಾರಣವಾಗಿದೆ. ವರ್ಷಕ್ಕೆ ಎರಡರಿಂದ ಎರಡೂವರೆ ಸಾವಿರ ಮಿಲಿಯನ್ ರೂಪಾಯಿ ಮೌಲ್ಯದ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತದೆ. ಆದರೆ ಇಲ್ಲಿಯ ವರೆಗೆ ಇಂತಹ ಪ್ರಕರಣಗಳು ವರದಿಯಾಗಿಲ್ಲ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ದಿನಕ್ಕೆ ಕೋಟಿ-ಕೋಟಿ ಮೌಲ್ಯದ […]

RBI ಮುದ್ರಣಾಲಯದಿಂದಲೇ ಬಂಡಲ್ ಬಂಡಲ್ ಬಿಸಿ ಬಿಸಿ ನೋಟು ಮಾಯ…..! Read More »

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ

ಮಂಗಳೂರು: ಮುಂಬೈಯಿಂದ ಬಂದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಸೂರಿಂಜೆ ಬಳಿಯ ಪುಚ್ಚಾಡಿ ನಿವಾಸಿ ಪುಷ್ಪ (40) ಎಂದು ಗುರುತಿಸಲಾಗಿದೆ. ಇವರು ಮುಂಬೈಯಿಂದ ಆಗಮಿಸಿದ್ದು ಜು. 13 ರ ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಸಂಬಂಧಿಕರು ಹುಡುಕಾಡಿದಾಗ ಇವರ ಪಾದರಕ್ಷೆಗಳು ಮನೆಯ ಬಳಿ ಇರುವ ಶಿಬರೂರು ಹೊಳೆಯ ಪಕ್ಕದಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಿಂದ ಅಗ್ನಿಶಾಮಕ ದಳದವರು ನದಿಯಲ್ಲಿ ಶೋಧ ಕಾರ್ಯ

ಮಂಗಳೂರು: ಮುಂಬೈಯಿಂದ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ Read More »

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ

ಉಡುಪಿ: ಬಾಲಕನ ಅಪಹರಣದ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ದಾಂಡೇಲಿಯ ಪರಶುರಾಮ‌ ಭೀಮಪ್ಪನನ್ನು ಭಾನುವಾರ ಕುಮಟಾದಲ್ಲಿ ಬಂಧಿಸಿದ್ದರು. ಸೋಮವಾರ ಉಡುಪಿಗೆ ಕರೆತರಲಾದ ಪರಶುರಾಮನನ್ನು ಮೂರ್ಚೆ ರೋಗದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ವೈದ್ಯರ ಸಲಹೆಯಂತೆ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಂಗ ಬಂಧನಕ್ಕೆ ಒಳಗಾದ ಈತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಈತನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅದರಂತೆ ಆತನನ್ನು ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು

ಬಾಲಕನ ಅಪಹರಣ ಪ್ರಕರಣ : ಆರೋಪಿಗೆ ನ್ಯಾಯಾಂಗ ಬಂಧನ Read More »

ಗೋಲಿ ನುಂಗಿ ಒಂದು ವರ್ಷದ ಮಗು ಮೃತ್ಯು

ದಾವಣಗೆರೆ: ಆಟವಾಡುತ್ತಿದ್ದ ವೇಳೆ ಮಗು ಆಕಸ್ಮಿಕವಾಗಿ ಗೋಲಿ ನಂಗಿ ಸಾವನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹರೀಶ್ ಎಂಬುವರ ಪುತ್ರ ಮನವೀರ್ (1) ಮೃತಪಟ್ಟ ದುರ್ದೈವಿ ಮಗು. ಮನವೀರ್ ನಿತ್ಯ ಮನೆಯಂಗಳದಲ್ಲಿ ಗಾಜಿನ ಗೋಲಿಯಿಂದ ಅಕ್ಕ ಪಕ್ಕದ ಮನೆ ಮಕ್ಕಳೊಂದಿಗೆ ಆಟವಾಡುತ್ತಿದ್ದನು. ಇದೇ ವೇಳೆ ಗೋಲಿ ಬಾಯಲ್ಲಿ ಹಾಕಿಕೊಂಡು ಕ್ಷಣದಲ್ಲಿ ನುಂಗಿ ಬಿಟ್ಟಿದ್ದಾನೆ. ಮಗು ಗೋಲಿ ನುಂಗಿದನ್ನ ಗಮನಿಸಿದ ಜೊತೆಗಿದ್ದ ಬಾಲಕ ಪಾಲಕರಿಗೆ ಹೇಳಿದ್ದು, ಪಾಲಕರು ಆಸ್ಪತ್ರೆಗೆ ಹೋಗುವಷ್ಟರಲ್ಲಿ 10 ರಿಂದ 15 ನಿಮಿಷದಲ್ಲಿ ಮಗು ಮನವೀರ್ ಸಾವನ್ನಪ್ಪಿದೆ.

ಗೋಲಿ ನುಂಗಿ ಒಂದು ವರ್ಷದ ಮಗು ಮೃತ್ಯು Read More »

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್

ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ . ಇಂದು ಮುಂಜಾನೆ ಪುಲ್ವಾಮ ನಗರದಲ್ಲಿ ಉಗ್ರರಿರುವ ಬಗ್ಗೆ ಸೇನಾಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣ ಕಾರ್ಯಪ್ರವೃತವಾದ ಭಾರತೀಯ ಭೂ ಸೇನೆ ಉಗ್ರರಿರುವ ಸ್ಥಳವನ್ನು ಸುತ್ತುವರೆದಿದೆ. ಅದಾಗಲೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ತಕ್ಷಣ ಪ್ರತಿದಾಳಿ ನಡೆಸಿದ ಯೋಧರು ಲಷ್ಕರ್-ಇ-ತಾಯ್ಬಾ ಉಗ್ರ ಸಂಘಟನೆಯ ಓರ್ವ ಕಾಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್ Read More »

ಟೋಕಿಯೋ ಒಲಿಂಪಿಕ್ ‌ನಿಂದ ಹಿಂದೆ ಸರಿದ ಪೆಡರರ್

ಸ್ವೀಸ್ ಮೇಸ್ಟ್ರೋ ರೋಜರ್ ಫೆಡರರ್ ‘ಟೋಕಿಯೊ ಒಲಿಂಪಿಕ್ಸ್ʼನಿಂದ ಹಿಂದೆ ಸರಿಯುವ ನಿರ್ಧಾರವನ್ನ ಮಂಗಳವಾರ ಘೋಷಿಸಿದ್ದಾರೆ ಸ್ವಿಟ್ಜರ್ಲೆಂಡ್ ಒಲಿಂಪಿಕ್ಸ್ ತಂಡದಲ್ಲಿ ಹೆಸರಿಸಲ್ಪಟ್ಟ ಕೆಲವು ದಿನಗಳ ನಂತರ ಈ ನಿರ್ಧಾರ ಪ್ರಕಟಿಸಿರುವ ಅವರು ಮೊಣಕಾಲು ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. 20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಫೆಡರರ್ ಈ ವರ್ಷದ ಆರಂಭದಲ್ಲಿ ಅನೇಕ ಮೊಣಕಾಲು ಶಸ್ತ್ರಚಿಕಿತ್ಸೆಗಳಿಂದಾಗಿ 2020ರ ಹೆಚ್ಚಿನ ಭಾಗವನ್ನು ಕಳೆದುಕೊಂಡ ನಂತರ ಮತ್ತೆ ಆಟಕ್ಕೆ ಮರಳಿದ್ದರು.ಅಂದ ಹಾಗೆ,ಮಾರ್ಚ್ʼನಲ್ಲಿ ದೋಹಾ ಓಪನ್ʼನಲ್ಲಿ ಮರಳಿದ್ದು, ಅಲ್ಲಿ ಅವರು 2ನೇ ಸುತ್ತಿನಲ್ಲಿ

ಟೋಕಿಯೋ ಒಲಿಂಪಿಕ್ ‌ನಿಂದ ಹಿಂದೆ ಸರಿದ ಪೆಡರರ್ Read More »

ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…?

ಸುಳ್ಯ: ‘ದೇವಸ್ಥಾನದ ಮೈದಾನದಲ್ಲಿ ಹಿಂದೂಗಳು ಅಲ್ಲದೆ ಬೇರೆ ಧರ್ಮದವರಿಗೆ ಇಲ್ಲಿ ಅವಕಾಶವಿಲ್ಲ, ಇಲ್ಲಿಂದ ಹೊರಗೆ ನಿಂತು ಮಾತನಾಡು, ಇಲ್ಲಿ ನೀನು ಆಡಬಾರದು, ನಿನಗೆ ಚರ್ಚ್ ಆವರಣ ಇಲ್ಲವೇ?’ ಗದರಿದ ದೇವಸ್ಥಾನ ಆಡಳಿತ ಕಮಿಟಿಯ ಪ್ರತಿನಿಧಿಯೋರ್ವ ಹೇಳಿ ಆಟವಾಡುತ್ತಿದ್ದ ಅನ್ಯಕೋಮಿನ ಯುವಕನೋರ್ವನನ್ನು ಮೈದಾನದಿಂದ ಹೊರಗಟ್ಟಿದ ಘಟನೆ ಸುಳ್ಯದ ಜಯನಗರದಲ್ಲಿ ನಡೆದಿದ್ದು ಜಾಲತಾಣಗಳಲ್ಲಿ ವಿಡೀಯೋ ವೈರಲ್ ಆಗಿದೆ. ಹೊರಗಟ್ಟಿದವನನ್ನು ಜಯನಗರ ಕೊರಂಬಡ್ಕದ ಆದಿಮೊಗೇರ್ಕಳ ದೈವಸ್ಥಾನದ ಪದಾಧಿಕಾರಿ ಪ್ರವೀಣ್ ಕುಮಾರ್ ಜಯನಗರ ಎಂದು ತಿಳಿದುಬಂದಿದೆ. ದೈವಸಾನಿಧ್ಯದಲ್ಲಿ ಸುಮಾರು ಎರಡು ವರ್ಷದಿಂದ ಸ್ಥಳೀಯ

ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…? Read More »

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ

ಬೆಂಗಳೂರು: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿದ್ದು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 10 ಜಿಲ್ಲೆಗಳನ್ನು ರೇಡ್’ಝೋನ್ ನಲ್ಲಿರಿಸಿ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ದೇಶದಲ್ಲಿ ಕೋವಿಡ್ ಎರಡನೆಯ ಅಲೆ ಕೊಂಚ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಮೂರನೆ ಅಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವ ಸಲುವಾಗಿ ದೇಶದ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಕೆಲವು ಜೋನ್ ಗಳಾಗಿ ವಿಂಗಡಿಸಿದೆ. ಇದರಲ್ಲಿ ಎರಡನೆಯ ಅಲೆಯಲ್ಲಿ ತೀವ್ರವಾಗಿ ತತ್ತರಿಸಿರುವ ಜಿಲ್ಲೆಗಳನ್ನು ರೆಡ್’ಜೋನ್’ನಲ್ಲಿ ಗುರುತಿಸಲಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ

ಕೋವಿಡ್ ಮೂರನೇ ಅಲೆ ಭೀತಿ | ಕೇಂದ್ರದಿಂದ ಎಚ್ಚರಿಕೆ | ದ ಕ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ರೆಡ್’ಜೋನ್’ಗೆ Read More »

ಎಷ್ಟೇ ಗೋಗರೆದರೂ ಕರಗದ ಪ್ರಿಯಕರನ ಮನ | ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಅಂಗಲಾಚಿದ ಪ್ರೇಯಸಿ | ಇಲ್ಲಿದೆ ಮನಕರಗಿಸುವ ವಿಡಿಯೋ

ಮಧ್ಯಪ್ರದೇಶ: ತನ್ನನ್ನು ಪ್ರೀತಿಸಿದ ಯುವಕ ಬೇರೊಬ್ಬಳು ಯುವತಿಯೊಂದಿಗೆ ವಿವಾಹವಾಗುತ್ತಿರುವ ವಿಷಯ ತಿಳಿದ ಯುವತಿಯೊಬ್ಬಳು ಮನನೊಂದು ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಗೋಗರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ರಾಜ್ಯದ ಹೋಶಂಗಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕ ಮತ್ತು ಕಾನ್ಪುರ ಮೂಲದ ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬೊರನ್ನೊಬ್ಬರು ಬಿಟ್ಟಿರದ ಇಬ್ಬರೂ, ಬಹಳ ಅನ್ಯೋನ್ಯವಾಗಿದ್ದರು. ಆದರೆ ಕೊನೆಯಲ್ಲಿ ಯುವಕ ಕೈಕೊಟ್ಟಿದ್ದಾನೆ. ಯುವಕ ತನಗೆ ಮೋಸ ಮಾಡಿ ಬೇರೊಬ್ಬಳ ಜೊತೆ ಮದುವೆಯಾಗುತ್ತಿರುವ ವಿಷಯ ಇತ್ತೀಚೆಗೆ

ಎಷ್ಟೇ ಗೋಗರೆದರೂ ಕರಗದ ಪ್ರಿಯಕರನ ಮನ | ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಅಂಗಲಾಚಿದ ಪ್ರೇಯಸಿ | ಇಲ್ಲಿದೆ ಮನಕರಗಿಸುವ ವಿಡಿಯೋ Read More »

ಬಂಟ್ವಾಳ: ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!

ಬಂಟ್ವಾಳ: ಯುವಕನನ್ನು ಉಸಿರು ಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!ಬಂಟ್ವಾಳ: ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ವಿಷ ಅನಿಲ ಯುವಕನ ಪ್ರಾಣಕ್ಕೆ ಕುತ್ತು ತಂದ ಘಟನೆ ಫರಂಗಿಪೇಟೆಯ ಮಾರಿಪಳ್ಳ ಎಂಬಲ್ಲಿ ಜು.12 ರ ಸೋಮವಾರ ಸಂಜೆ ನಡೆದಿದೆ.ಮೃತ ಯುವಕನನ್ನು ಇಸ್ಮಾಯಿಲ್ ಅವರ ಪುತ್ರ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿಯ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದು ಸೋಮವಾರ ಸಂಜೆ ಗ್ಯಾಸ್ ಗೀಸರ್ ಬಳಸಿ

ಬಂಟ್ವಾಳ: ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!! Read More »