July 2021

ರಾಜೀನಾಮೆಗೆ ಕೌಂಟ್ ಡೌನ್| ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ| ದೆಹಲಿ-ಬೆಂಗಳೂರು ಹಾರಾಟದ ಅಸಲಿಯತ್ತೇನು?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಕ್ಷಣಗಣನೆ ಪ್ರಾರಂಭವಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.ಜುಲೈ 26ಕ್ಕೆ ಯಡಿಯೂರಪ್ಪನವರು ಸರ್ಕಾರ ರಚಿಸಿ 2 ವರ್ಷ ಪೂರೈಸಲಿದ್ದು, ಮುಂದಿನ ಆಗಸ್ಟ್ ಮೊದಲ ವಾರದಲ್ಲಿ ಪದತ್ಯಾಗಕ್ಕೆ ವೇದಿಕೆ ಸಿದ್ದವಾಗಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ರಾಘವೇಂದ್ರ-ವಿಜಯೇಂದ್ರ ಜೊತೆ ನಿನ್ನೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಖುಷಿಯಾಗೇ ಇದ್ದರು. ಇಂದು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, […]

ರಾಜೀನಾಮೆಗೆ ಕೌಂಟ್ ಡೌನ್| ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ| ದೆಹಲಿ-ಬೆಂಗಳೂರು ಹಾರಾಟದ ಅಸಲಿಯತ್ತೇನು? Read More »

ಕಂಬಳದ ಉಸೇನ್ ಬೋಲ್ಟ್ ಗೆ ಪ್ರಾಣ ಬೆದರಿಕೆ, ‘ಬೆನ್ನಿಗೆ ಹಾಳೆ ಕಟ್ಟಿಕೊಂಡು‌ ಬಾ’ ಎಂದವರಾರು?

ಮಂಗಳೂರು: ಕಂಬಳದ ಗದ್ದೆಯಲ್ಲಿ ಅತಿವೇಗವಾಗಿ ಓಡಿ ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ಧ ಪಡೆದ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್ ಕರೆ ಮಾಡಿ, ಬೆದರಿಕೆ ಹಾಕಿ ನಿಂದಿಸಿದ್ದು, ಇದರ ಧ್ವನಿಮುದ್ರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆದರಿಕೆ ಒಡ್ಡಿದ ವ್ಯಕ್ತಿ ಕರೆ ಮಾಡಿ, ‘ನಾನು ಪ್ರಶಾಂತ್ ಬಂಗೇರ, ಶ್ರೀರಾಮ ಸೇನೆಯಲ್ಲಿದ್ದೇನೆ ಎಂದು ಪರಿಚಯಿಸಿಕೊಂಡು ಮಂಗಳೂರು ಕಾರ್ ಸ್ಟ್ರೀಟ್‌ನಲ್ಲಿ ರಿಯಲ್ ಎಸ್ಟೇಟ್ ಕಚೇರಿ ಇದೆ ಅಲ್ಲಿಗೆ ಬನ್ನಿ ಕಂಬಳದ ಇತಿಹಾಸ

ಕಂಬಳದ ಉಸೇನ್ ಬೋಲ್ಟ್ ಗೆ ಪ್ರಾಣ ಬೆದರಿಕೆ, ‘ಬೆನ್ನಿಗೆ ಹಾಳೆ ಕಟ್ಟಿಕೊಂಡು‌ ಬಾ’ ಎಂದವರಾರು? Read More »

ಸುಳ್ಯ: ನೆರೆಮನೆಯವನ ಕಾರಲ್ಲಿ ಪತ್ನಿಯನ್ನು ತವರು ಮನೆಗೆ ಕರೆದೊಯ್ದ| ಅದೇ ಕಾರು ಮಾರಿ ಅರಗಿಣಿ ಜೊತೆಗೆ ಎಸ್ಕೇಪ್ ಆದ| ಹೀಗೊಬ್ಬ ಮಹಾಕಳ್ಳ…!

ಸುಳ್ಯ: ಇಲ್ಲಿನ ಜಟ್ಟಿಪಳ್ಳ ಬೊಳಿಯಮಜಲು ಎಂಬಲ್ಲಿ ವಾಸವಿದ್ದ ಅಶ್ರಫ್ ಯಾನೆ ಅಪ್ಪಿ ಎಂಬಾತ ಪತ್ನಿಯನ್ನು ತವರು ಮನೆಗೆ ಬಿಟ್ಟು ಬರಲೆಂದು ಪಕ್ಕದ ಮನೆಯ ಕಾರು ಪಡೆದುಕೊಂಡು ಹೋಗಿ ಅದೇ ಕಾರನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ, ಮುಂಬೈಗೆ ಹುಡುಗಿಯೊಂದಿಗೆ ಪಲಾಯನಗೈದ ಘಟನೆ ನಡೆದಿದೆ. ಅಶ್ರಪ್ ವಾಸವಿದ್ದ ಮನೆಯ ಪಕ್ಕದ ಬಾಡಿಗೆ ರೂಂನಲ್ಲಿ ವಾಸವಿದ್ದ ಕಲಂದರ್ ಎಂಬವರ ಕಾರನ್ನು ಅಶ್ರಫ್ ಯಾನೆ ಅಪ್ಪಿ ತನ್ನ ಪತ್ನಿಯನ್ನು ವಿರಾಜಪೇಟೆಯಲ್ಲಿರುವ ಆಕೆಯ ತವರು ಮನೆಗೆ ಬಿಡಲೆಂದು ಪಡೆದುಕೊಂಡು ಹೋಗಿದ್ದಾನೆ. ಆತ ಹಿಂತಿರುಗಿ ಬಾರದಿದ್ದಾಗ

ಸುಳ್ಯ: ನೆರೆಮನೆಯವನ ಕಾರಲ್ಲಿ ಪತ್ನಿಯನ್ನು ತವರು ಮನೆಗೆ ಕರೆದೊಯ್ದ| ಅದೇ ಕಾರು ಮಾರಿ ಅರಗಿಣಿ ಜೊತೆಗೆ ಎಸ್ಕೇಪ್ ಆದ| ಹೀಗೊಬ್ಬ ಮಹಾಕಳ್ಳ…! Read More »

ಮೊಬೈಲ್ ಬ್ಯಾಟರಿ ಸ್ಪೋಟ: ಬಾಲಕನ ಕೈ ಛಿದ್ರ | ಪಾಲಕರೇ ಮಕ್ಕಳ ಆಟಿಕೆ ವಸ್ತುಗಳ ಮೇಲಿರಲಿ ಗಮನ

ಹಾವೇರಿ: ಆಟವಾಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಸಿಡಿದು ಮೂರು ವರ್ಷದ ಬಾಲಕನ ಕೈ ಛಿದ್ರಗೊಂಡ ಘಟನೆ ತಾಲೂಕಿನ ಸವಣೂರು ಎಂಬಲ್ಲಿ ನಡೆದಿದೆ. ಗಾಯಗೊಂಡ ಬಾಲಕ ಇತರೆ ಮಕ್ಕಳೊಂದಿಗೆ ಮನೆಯಲ್ಲಿ ಹಳೆ ವಸ್ತುಗಳೊಂದಿಗೆ ಆಟವಾಡುತ್ತಿದ್ದ. ಆಟಿಕೆ ವಸ್ತುಗಳೊಂದಿಗೆ ಹಳೆಯ ಮೊಬೈಲ್ ಬ್ಯಾಟರಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳಿದ್ದವು. ಆಟವಾಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಘರ್ಷಣೆಯಾಗಿ ಸ್ಪೋಟಗೊಂಡಿದೆ. ಪರಿಣಾಮ ಬಾಲಕನ ಕೈಯ ಮೂರು ಬೆರಳುಗಳು ತುಂಡಾಗಿವೆ. ಬ್ಯಾಟರಿ ರಾಸಾಯನಿಕಯುಕ್ತ ವಸ್ತು ಆದ ಕಾರಣ ಅದರ ಸ್ಪೋಟದಿಂದ ಮಗುವಿನ ಮುಖ ಮತ್ತು ದೇಹದ ಕೆಲವು

ಮೊಬೈಲ್ ಬ್ಯಾಟರಿ ಸ್ಪೋಟ: ಬಾಲಕನ ಕೈ ಛಿದ್ರ | ಪಾಲಕರೇ ಮಕ್ಕಳ ಆಟಿಕೆ ವಸ್ತುಗಳ ಮೇಲಿರಲಿ ಗಮನ Read More »

ನೆಲ್ಯಾಡಿ: ಅಪರಿಚಿತ ವಾಹನ ಡಿಕ್ಕಿ | ಬೈಕ್ ಸವಾರ ಸಾವು ಸಹಸವಾರ ಗಂಭೀರ

ಬೆಳ್ತಂಗಡಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವ ಬೈಕ್ ಸವಾರ ಮೃತಪಟ್ಟು ಸಹಸವಾರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ. ಗುಂಡ್ಯದಿಂದ ನೆಲ್ಯಾಡಿ ಕಡೆ ತೆರಳುತ್ತಿದ್ದ ಬೈಕ್ ಗೆ ನೆಲ್ಯಾಡಿ ಕಡೆಯಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರ ಗಾಯಗೊಂಡ ಸಹಸವಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೇಯಾಗಬೇಕಿದೆ. ಗಾಯಗೊಂಡವರನ್ನು ಸಕಲೇಶಪುರದ ಮೋಹನ್ ಎಂದು ಗುರುತಿಸಲಾಗಿದೆ. ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದ್ದು,

ನೆಲ್ಯಾಡಿ: ಅಪರಿಚಿತ ವಾಹನ ಡಿಕ್ಕಿ | ಬೈಕ್ ಸವಾರ ಸಾವು ಸಹಸವಾರ ಗಂಭೀರ Read More »

ರಾಷ್ಟ್ರಧ್ವಜ ನಿಯಮ ಉಲ್ಲಂಘನೆ ಮಾಡಿದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ

ತುರುವೇಕೆರೆ: ರಾಷ್ಟ್ರಧ್ವಜವನ್ನು ಮಧ್ಯಾಹ್ನ ಸುಮಾರು 3:00 ಗಂಟೆಗೆ ಇಳಿಸಿ ನಿಯಮ ಉಲ್ಲಂಘಟನೆ ಮಾಡಿ ರಾಷ್ಟ್ರಧ್ವಜಕ್ಕೆ ಅಗೌರವ ಸೃಷ್ಟಿಸಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಯಿತಿಯಲ್ಲಿ ಗುರುವಾರ ನಡೆದಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯತ್ , ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿ ಆವರಣದ ಧ್ವಜ ಸ್ತಂಭದ ಮೇಲೆ ರಾಷ್ಟ್ರಧ್ವಜ ಕಡ್ಡಾಯವಾಗಿ ಹಾರಿಸುವಂತೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸುತ್ತೋಲೆ ಹೊರಡಿಸಿ ಸೂಚಿಸಲಾಗಿದೆ. ಆದರೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಸೂಚನೆಯನ್ನೆ

ರಾಷ್ಟ್ರಧ್ವಜ ನಿಯಮ ಉಲ್ಲಂಘನೆ ಮಾಡಿದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ Read More »

ಬೆಳ್ತಂಗಡಿ: ಪತಿ-ಪತ್ನಿಯನ್ನು ಒಂದೇ ದಿನ ಬಲಿ ತೆಗೆದುಕೊಂಡ ಕೊರೊನಾ

ಬೆಳ್ತಂಗಡಿ: ಗಂಡ ಹೆಂಡತಿ ಇಬ್ಬರೂ ಒಂದೇ ದಿನ ಕೊರೊನಾ ಹೆಮ್ಮಾರಿಗೆ ತುತ್ತಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಗ್ರಾಮದ ದಂಪತಿ ನಿನ್ನೆ ಒಂದೇ ದಿನ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುನ್ನತ್ ನಾಥ್ ನಿವಾಸಿ ವಗೀ೯ಸ್ (74ವ) ಹಾಗೂ ಅವರ ಪತ್ನಿ ಮೇರಿ ವಗೀ೯ಸ್ (73ವ) ಮೃತ ಪಟ್ಟ ದುದೈ೯ವಿಗಳು. ಮೃತ ದಂಪತಿಗೆ ಕಳೆದ ತಿಂಗಳು ಜ್ವರ ಕಾಣಿಸಿಕೊಂಡಿತ್ತು. ಅವರು ಔಷದಿ ತೆಗೆದುಕೊಂಡು ಗುಣಮುಖರಾಗಿದ್ದರು. ಬಳಿಕ ಮನೆಯಲ್ಲಿದ್ದ ದಂಪತಿಗೆ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿದೆ.

ಬೆಳ್ತಂಗಡಿ: ಪತಿ-ಪತ್ನಿಯನ್ನು ಒಂದೇ ದಿನ ಬಲಿ ತೆಗೆದುಕೊಂಡ ಕೊರೊನಾ Read More »

ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಸುಪ್ರೀಮ್ ಕೋರ್ಟ್

ನವದೆಹಲಿ: ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾಟ್ಸಪ್ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. 2016 ರ ಡಿಸೆಂಬರ್ ನಲ್ಲಿ ನಡೆದ ಎರಡು ವ್ಯಾಪಾರಿ ಕಂಪನಿಗಳ ನಡುವಿನ ಒಪ್ಪಂದದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ವ್ಯಾಪಾರ ಒಪ್ಪಂದಗಳಲ್ಲಿ ವಾಟ್ಸಪ್ ಮೆಸೇಜ್ ಗಳನ್ನು ಸಾಕ್ಷಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟಿಸ್ ಎನ್ ವಿ ರಮಣ, ಜಸ್ಟಿಸ್ ಎ ಎಸ್ ಬೋಪಣ್ಣ ಮತ್ತು ಋಷಿಕೇಶ್ ರಾಯ್ ಅವರುಗಳ ಪೀಠ ಹೇಳಿದೆ. ಇಂದಿನ ಕಾಲದಲ್ಲಿ ವಾಟ್ಸಪ್

ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಸುಪ್ರೀಮ್ ಕೋರ್ಟ್ Read More »

ಪುತ್ತೂರು: ಮಾಜಿ ಪ್ರಿಯಕರ ಕಳಿಸಿದ ಬೆಡ್ ರೂಂ ವಿಡಿಯೋದಿಂದ ಒಡೆದ ಸಂಸಾರ | ಅಂದು ಸುಖ ಪಡೆದವಳಿಂದ ಈಗ ಅತ್ಯಾಚಾರದ ದೂರು…!

ಪುತ್ತೂರು: ಮಾಜಿ ಪ್ರಿಯಕರನೋರ್ವ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಹಳೆಯ ವೀಡಿಯೊವೊಂದನ್ನು ಆಕೆಯ ಪತಿಯ ಮೊಬೈಲ್ ಫೋನ್ ಗೆ ರವಾನಿಸಿದ್ದಾನೆ. ವೀಡಿಯೋ ನೋಡಿದ ಪತಿ ವಿಚ್ಛೇದನಕ್ಕೆ ಮುಂದಾದಾಗ ಯುವತಿ ಅದು ಅತ್ಯಾಚಾರವೆಂದು ಯೂ ಟರ್ನ ಹೊಡೆದ ಪ್ರಕರಣಯೊಂದು ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ವಿಜೇಶ್ ಹಾಗೂ ಸುಬ್ರಹ್ಮಣ್ಯದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ಉತ್ಕಟಕ್ಕೆ ಏರಿದ್ದು ಪರಿಣಾಮ ದೈಹಿಕ ಸಂಪರ್ಕ ನಡೆಸಿದ್ದಾರೆ. ಹಾಗಾಗಿ 2016ರ ನವೆಂಬರ್‌ನಲ್ಲಿ ಆಕೆ ಪುತ್ತೂರಿನ ದರ್ಬೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದು ದಿನ ಚಹಾ

ಪುತ್ತೂರು: ಮಾಜಿ ಪ್ರಿಯಕರ ಕಳಿಸಿದ ಬೆಡ್ ರೂಂ ವಿಡಿಯೋದಿಂದ ಒಡೆದ ಸಂಸಾರ | ಅಂದು ಸುಖ ಪಡೆದವಳಿಂದ ಈಗ ಅತ್ಯಾಚಾರದ ದೂರು…! Read More »

ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಕಾರ್ಯಾಚರಣೆ ವೇಳೆ 40 ಮಂದಿ ಬಾವಿಯೊಳಗೆ….!

ಮಧ್ಯಪ್ರದೇಶ: ಇಲ್ಲಿನ ವಿದಿಶಾ ಜಿಲ್ಲೆಯಲ್ಲಿ ಗುರುವಾರ ಸಂಜೆ ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸುವ ವೇಳೆ 40 ಮಂದಿ ಬಾವಿಯೊಳಗೆ ಬಿದ್ದ ಘಟನೆ ನಡೆದಿದೆ. ಗುರುವಾರ ಸಂಜೆ ಆಟವಾಡುತ್ತಿದ್ದಾಗ ಬಾಲಕಿ ಒಬ್ಬಳು ಬಾವಿಗೆ ಬಿದಿದ್ದಾಳೆ. ವಿಷಯ ತಿಳಿದು ಹಲವಾರು ಜನರು ಬಾವಿಗೆ ಬಳಿ ತೆರೆಳಿದ್ದರು. ಈ ವೇಳೆ ಈ ಅನಾಹುತ ಸಂಭವಿಸಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ 19 ಜನರನ್ನು ರಕ್ಷಿಸಲಾಗಿದೆ, ಒಟ್ಟು 40 ಜನರು ಬಾವಿಯಲ್ಲಿ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಾವಿಯಿಂದ ಮೇಲೆತ್ತಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾವಿಯಿಂದ

ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ ಕಾರ್ಯಾಚರಣೆ ವೇಳೆ 40 ಮಂದಿ ಬಾವಿಯೊಳಗೆ….! Read More »