July 2021

ದೇವಸ್ಥಾನಗಳಲ್ಲಿ ಅನ್ನದಾನ ನಡೆಸಲು ಶೀಘ್ರದಲ್ಲೇ ತೀರ್ಮಾನ- ಸಚಿವ ಕೋಟ

ಉಡುಪಿ: ದೇವಸ್ಥಾನಗಳು ಈಗಾಗಲೇ ಭಕ್ತರಿಗೆ ಮುಕ್ತವಾಗಿವೆ. ದೂರದಿಂದ ಭರುವ ಭಕ್ತರಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಸೀಮಿತ ಭಕ್ತರಿಗೆ ದೇವಾಲಯದಲ್ಲಿ ಅನ್ನದಾಸೋಹ ನಡೆಸಲು ಚರ್ಚಿಸಲಾಗಿದೆ. ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ತೀರ್ಮಾನ ತಗೆದುಕೊಳ್ಳಲಾಗುವುದು ಎಂದು ಹಿಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕುಂದಾಪುರ ಕಾಳವರಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ದೇವಸ್ಥಾನಗಳ ಮೇಳಗಳ ಕಲಾವಿದರಿಗೆ ಪೂರ್ಣ ಸಂಭಾವನೆ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಬಹುತೇಕ ದೇವಸ್ಥಾನಗಳಲ್ಲಿ […]

ದೇವಸ್ಥಾನಗಳಲ್ಲಿ ಅನ್ನದಾನ ನಡೆಸಲು ಶೀಘ್ರದಲ್ಲೇ ತೀರ್ಮಾನ- ಸಚಿವ ಕೋಟ Read More »

ಕ್ಯಾಡ್ ಬರಿ ಚಾಕೋಲೇಟ್ ನಲ್ಲಿ ದನದ ಮಾಂಸ ಬಳಕೆ!? ಭಾರತದಲ್ಲಿ ಅಗ್ರ ಮಾರುಕಟ್ಟೆ ಹೊಂದಿರುವ ಕಂಪನಿ ಏನ್ ಹೇಳ್ತು ಗೊತ್ತಾ?

Cadbury Chocolate ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರ ಫೇವರೆಟ್​​​ ಚಾಕ್​ಲೇಟ್​​. ಬಾಯಿ ಸಿಹಿ ಮಾಡೋಣ ಎಂಬ ಜಾಹೀರಾತು ಕಂಡೊಡನೆ ತಿನ್ನಬೇಕು ಅನಿಸದೆ ಇರಲ್ಲ. ಬಾಯಲ್ಲಿ ಇಟ್ಟೊಡನೆ ಕರಗುವ ಚಾಕ್​​ಲೇಟ್​​​ಗೆ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಯಲ್ಲಿ ಎಷ್ಟೇ ಬ್ರ್ಯಾಂಡ್​ಗಳ ಚಾಕ್​ಲೇಟ್​ ಬಂದರೂ ಕ್ಯಾಡ್​ಬರಿ ಡೈರಿ ಮಿಲ್ಕ್​​ ಡಿಮ್ಯಾಂಡ್​ ಎಂದಿಗೂ ಕುಗ್ಗಿಲ್ಲ. ಇನ್ನು ಪ್ರಪೋಸ್ ಮಾಡಲು ಕ್ಯಾಡ್​​ಬರಿ ಚಾಕ್​​ಲೇಟ್ ಗಳೇ ಬೇಕು. ಹುಡುಗಿಯರು ಸೇರಿದಂತೆ ಈ ರಸವತ್ತಾದ ಕಪ್ಪುಸುಂದರಿಗೆ ಮರುಳಾಗದವರು ಯಾರೂ ಇಲ್ಲವೇ ಇಲ್ಲ. ಆದರೆ

ಕ್ಯಾಡ್ ಬರಿ ಚಾಕೋಲೇಟ್ ನಲ್ಲಿ ದನದ ಮಾಂಸ ಬಳಕೆ!? ಭಾರತದಲ್ಲಿ ಅಗ್ರ ಮಾರುಕಟ್ಟೆ ಹೊಂದಿರುವ ಕಂಪನಿ ಏನ್ ಹೇಳ್ತು ಗೊತ್ತಾ? Read More »

ಯುವಕನ ಪ್ರಾಣ ಬಲಿ ಪಡೆದ ನವಿಲು

ಉಡುಪಿ: ದ್ವಿಚಕ್ರ ವಾಹನವೊಂದಕ್ಕೆ ನವಿಲು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ನವಿಲು ಮೃತಪಟ್ಟಿರುವ ಘಟನೆ ಕಾಪು ತಾಲೂಕಿನ ಎರ್ಮಾಳ್ ನಲ್ಲಿ ನಡೆದಿದೆ. ಬೆಳಪು ಗ್ರಾಮದ ಅಬ್ದುಲ್ಲಾ (25) ಮೃತ‌ ದುರ್ದೈವಿ. ಪಡುಬಿದ್ರೆಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದ ಈತ ಇಂದು ರಾ.ಹೆ 66 ರ ಎರ್ಮಾಳ್ ಬಳಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದಾಗ ನವಿಲೊಂದು ಢಿಕ್ಕಿಯಾಗಿದೆ.ನವಿಲು ಡಿಕ್ಕಿಯಾದ ರಭಸಕ್ಕೆ ರಸ್ತೆಯ ಡಿವೈಡರ್ ಗೆ ಸ್ಕೂಟಿ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ವೇಳೆ ಸ್ಕೂಟಿ ಚಲಾಯಿಸುತ್ತಿದ್ದ ಅಬ್ದುಲ್ಲಾ ಬೆಳಪು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಡಿಕ್ಕಿಯಾದ

ಯುವಕನ ಪ್ರಾಣ ಬಲಿ ಪಡೆದ ನವಿಲು Read More »

ವೈಕುಂಠದ ಹಾದಿ ತುಳಿದ ಗೋಕರ್ಣ ಪರ್ತಗಾಳಿ ಮಠಾದೀಶ

ಉತ್ತರಕನ್ನಡ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಮಹಾಸ್ವಾಮಿಗಳು ಹರಿಪಾದ ಸೇರಿದ್ದಾರೆ. ಗೋವಾದಲ್ಲಿನ ಶ್ರೀ ಮಠದಲ್ಲಿ ಅವರು ಹರಿಪಾದ ಸೇರಿದ ಬಗ್ಗೆ ವರದಿಯಾಗಿದೆ. ಶ್ರೀಗಳು ತಮ್ಮ ಅವಧಿಯಲ್ಲಿ ಪರ್ತಗಾಳಿ ಮೂಲಮಠದ ಜೊತೆಗೆ ಶಾಖಾ ಮಠಗಳನ್ನು ಅಭಿವೃದ್ಧಿ ಮಾಡಿ, ಸರಳತೆ, ಸಂಯಮ, ನಿರ್ವಿ ವಾದದಿಂದ ಕೂಡಿದ್ದ ಅವರು ಅಧ್ಯಾತ್ಮಿಕ ಸಾಧನೆಯಿಂದ ಸರ್ವರ ಪ್ರೀತಿಪಾತ್ರರಾಗಿದ್ದರು. ಶ್ರೀಗಳ ನಿಧನ ಅಪಾರ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅನೇಕ ಗಣ್ಯರು ಶ್ರೀಗಳ ನಿಧನಕ್ಕೆ ಸಂತಾಪ

ವೈಕುಂಠದ ಹಾದಿ ತುಳಿದ ಗೋಕರ್ಣ ಪರ್ತಗಾಳಿ ಮಠಾದೀಶ Read More »

ಜು.20: ದ್ವಿತೀಯ ಪಿಯುಸಿ ಫಲಿತಾಂಶ

ಬೆಂಗಳೂರು: ರಾಜ್ಯದಲ್ಲಿ ನಾಳೆ ದ್ವಿತೀಯ ಪಿಯುಸಿ ಫಲಿತಾಂಶ (Second PUC Results 2021) ಪ್ರಕಟವಾಗುತ್ತದೆ. ಸಂಜೆ 4.30ಕ್ಕೆ ಸುಮಾರಿಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್ ತಿಳಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಎಸ್‌ಎಸ್‌ಎಲ್​ಸಿ ಫಲಿತಾಂಶ ಮತ್ತು ಪ್ರಥಮ ಪಿಯುಸಿ ಫಲಿತಾಂಶವನ್ನು ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶವನ್ನು ನೀಡಲಾಗುತ್ತದೆ. ಗ್ರೇಡ್ ಬದಲಿಗೆ ಅಂಕಗಳ ಆಧಾರದಲ್ಲಿ ನಾಳೆ ಫಲಿತಾಂಶ ಹೊರಬೀಳಲಿದೆ. ಫಲಿತಾಂಶ ನೋಡುವುದು ಹೇಗೆ? ಫಲಿತಾಂಶ ನೀಡಲು ಪಿಯು ಬೋರ್ಡ್ ಮುಂದೆ ಸವಾಲೊಂದು

ಜು.20: ದ್ವಿತೀಯ ಪಿಯುಸಿ ಫಲಿತಾಂಶ Read More »

ಹೊಸ ಟೀಂ ರೆಡಿಯಾಗ್ತಿದೆ, ಯಾರಿಗೂ ಹೇಳ್ಬೇಡಿ- ಸಂಚಲನ ಸೃಷ್ಟಿಸಿದ ನಳಿನ್ ಅಡಿಯೋ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಹಿರಂಗವಾಗಿದ್ದು, ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್‌ ದೊರೆಯುವ ಸಾಧ್ಯತೆ ಇದೆ. ತಮ್ಮ ಅಪ್ತರ ಬಳಿ ಮಾತುಕತೆ ನಡೆಸಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು, ಈ ಸಂಗತಿಯನ್ನು ಬಹಿರಂಗ ಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆ. ಅಲ್ಲದೆ ಸದ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬುದನ್ನು ಖಚಿತಪಡಿಸಿದಂತಾಗಿದೆ. ಕಟೀಲ್‌ ಅವರು ತುಳುವಿನಲ್ಲಿ ಮಾತನಾಡಿದ್ದು, ‘ಯಾರಿಗೂ ಹೇಳಬೇಡಿ. ಶೆಟ್ಟರ್‌, ಈಶ್ವರಪ್ಪ

ಹೊಸ ಟೀಂ ರೆಡಿಯಾಗ್ತಿದೆ, ಯಾರಿಗೂ ಹೇಳ್ಬೇಡಿ- ಸಂಚಲನ ಸೃಷ್ಟಿಸಿದ ನಳಿನ್ ಅಡಿಯೋ Read More »

ಇಶಾನ್, ಪೃಥ್ವಿ ಶಾ ಅಬ್ಬರ, ಶ್ರೀಲಂಕಾ ತತ್ತರ|ಶುಭಾರಂಭ ಮಾಡಿದ ಭಾರತ|

ಕೊಲಂಬೋ: ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ- ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಗೆಲುವು ಸಾಧಿಸಿದೆ.ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್, ಪೃಥ್ವಿ ಶಾ ದಿಟ್ಟ ಆರಂಭ, ಶಿಖರ್ ಧವನ್ ನಾಯಕತ್ವದ ಆಟಕ್ಕೆ ಶ್ರೀಲಂಕಾ ತಲೆ ಬಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ಭರ್ಜರಿ ವಿಕೆಟ್ ಗೆಲುವು ಕಂಡಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ ಶ್ರೀಲಂಕಾ ನೀಡಿದ 263

ಇಶಾನ್, ಪೃಥ್ವಿ ಶಾ ಅಬ್ಬರ, ಶ್ರೀಲಂಕಾ ತತ್ತರ|ಶುಭಾರಂಭ ಮಾಡಿದ ಭಾರತ| Read More »

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…?

ಮಂಗಳೂರು: ಹೌದು, ಕಳೆದ ವಾರ ಸುಳ್ಯದ ಜಾಲ್ಸೂರು ಗ್ರಾಮದ ಮರಸಂಕದ ವೃದ್ದೆಯೊಬ್ಬರನ್ನು ತುಂಬಿದ ಹೊಳೆಯಲ್ಲಿ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದ ಎಲ್ಲಾ ಮಾಧ್ಯಮಗಳು ಇದನ್ನು ಸುದ್ದಿ ಮಾಡಿದ್ದು, ಕ್ಷೇತ್ರದ ಶಾಸಕರೂ, ಸದ್ಯ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರರನ್ನು ತರಾಟೆಗೆ ತೆಗೆದುಕೊಂಡಿದ್ದವು. ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕಿದ್ದರು. ಆದರೆ ಈ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಈ ಭಾಗದ ರೋಗಿಯೊಬ್ಬರು ಬಿದ್ದಾಗ‌ ಚಯರ್ ಮೂಲಕ ಎತ್ತಿಕೊಂಡು ಹೋದ

ಈಗಲ್ಲ, ನಾಲ್ಕು ವರ್ಷದ ಹಿಂದೆಯೇ ರೋಗಿಯನ್ನು ಹೊತ್ತೊಯ್ಯಲಾಗಿತ್ತು…! ಮರಸಂಕದ ಪರಿಸ್ಥಿತಿ ಗೊತ್ತಿದ್ದರೂ ಶಾಸಕರೇನು ಮಾಡ್ತಿದ್ರು…? Read More »

ಮಡಿಕೇರಿ: ಕಾಮಗಾರಿ ಸ್ಥಳದಲ್ಲಿ ಮಗುಚಿದ ಕಾಂಕ್ರೀಟ್ ಲಾರಿ | ಕಾರ್ಮಿಕರಿಬ್ಬರ ದಾರುಣ ಸಾವು

ಮಡಿಕೇರಿ: ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸುತ್ತಿದ್ದ ಸಂದರ್ಭ ಕಾಂಕ್ರೀಟ್ ಲಾರಿ ಮಗುಚಿ ಬಿದ್ದು, ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚೇರಂಬಾಣೆ ಕೊಳಗದಾಳು ಬಳಿಯ ಪಾಕ ಎಂಬಲ್ಲಿ ನಡೆದಿದೆ. ಗದಗ ಮೂಲದ ಸಂತೋಷ್ ಬಂಡಾರಿ(27) ಮತ್ತು ಪ್ರವೀಣ್(21) ಮೃತ ದುರ್ದೈವಿ ಕಾರ್ಮಿಕರು. ಕಳೆದ 2 ದಿನಗಳಿಂದ ಮಳೆ ಅಲ್ಪ ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಚೇರಂಬಾಣೆ ಪಾಕ ಬಳಿ ಗುತ್ತಿಗೆದಾರರೊಬ್ಬರು ರಸ್ತೆಯ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದರು. ಶನಿವಾರ ಸಂಜೆ ವೇಳೆ ಮಡಿಕೇರಿಯಿಂದ ಕಾಂಕ್ರೀಟ್ ತುಂಬಿದ್ದ 10 ಚಕ್ರದ ಲಾರಿ

ಮಡಿಕೇರಿ: ಕಾಮಗಾರಿ ಸ್ಥಳದಲ್ಲಿ ಮಗುಚಿದ ಕಾಂಕ್ರೀಟ್ ಲಾರಿ | ಕಾರ್ಮಿಕರಿಬ್ಬರ ದಾರುಣ ಸಾವು Read More »

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ

ಬೆಳ್ತಂಗಡಿ: ಅಂಗಡಿಯ ಮುಂದೆ ನಿಲ್ಲಿಸಿದ್ದ ಓಮ್ನಿಯೊಂದು ಏಕಾಏಕಿ ಮುಂದೆ ಇದ್ದ ಅಂಗಡಿಗೆ ಅಪ್ಪಳಿಸಿದ ಘಟನೆ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಉಜಿರೆಯ ಶಾರ್ವರಿ ಕಾಂಪ್ಲೆಕ್ಸ್ ಮುಂಭಾಗ ಓಮ್ನಿ ನಿಲ್ಲಿಸಿ ಚಾಲಕ ಹೊರಹೋಗಿದ್ದಾನೆ. ಜೊತೆಗೆ ಮಗುವನ್ನು ಕರೆದೊಯ್ಯದೆ ವಾಹನದೊಳಗೆ ಬಿಟ್ಟು ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಓಮ್ನಿ ಸಡನ್ ಮುಂದೆ ಚಲಿಸಿದೆ. ಮುಂದೆ ಇದ್ದ ತರಕಾರಿ ಅಂಗಡಿಗೆ ಅಪ್ಪಳಿಸಿದೆ. ಅದೇ ಜಾಗದಲ್ಲಿ ಇಬ್ಬರು ಹುಡುಗಿಯರು ನಿಂತಿದ್ದರು. ಆದರೆ ಚಾಲಕನಿಲ್ಲದೆ ವಾಹನ ತಮ್ಮೆಡೆಗೆ ಬರುತ್ತಿರುವುದನ್ನು

ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ Read More »