July 2021

75 ರ ಬಳಿಕ ಗದ್ದುಗೆಯಲ್ಲಿರುವ ನಿಯಮ ಬಿಜೆಪಿ ಯಲ್ಲಿಲ್ಲ | ಪಕ್ಷವನ್ನು ಮುಂದೆಯೂ ಅಧಿಕಾರಕ್ಕೆ ತರುವುದೇ ನನ್ನ ಗುರಿ: ಬಿಎಸ್ ವೈ

ಬೆಂಗಳೂರು: ಸಿಎಂ ಕುರ್ಚಿಯಿಂದ ಈ ಮಾಸಾಂತ್ಯಕ್ಕೆ ಕೆಳಗಿಳಿಯುವ ಬಗ್ಗೆ ಇದೇ ಮೊದಲ ಬಾರಿಗೆ ಸ್ವತಃ ಪ್ರತಿಕ್ರಿಯಿಸಿರುವ ಬಿಎಸ್ವೈ, ರಾಜ್ಯದಲ್ಲಿ ಮುಂದಿನ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದಿದ್ದಾರೆ. ಇದು ಪದತ್ಯಾಗಕ್ಕೆ ಯಡ್ಡಿ ಮಾನಸಿಕವಾಗಿ ತಯಾರಾಗಿರುವ ಸೂಚನೆ ನೀಡಿದಂತಾಗಿದೆ. ಈ ಬಗ್ಗೆ ಇಂದು ಸುದ್ದಿಗರರೊಂದಿಗೆ ಮಾತನಾಡಿದ ಸಿಎಂ, 26 ರವರೆಗೆ ರಾಜ್ಯಕ್ಕಾಗಿ ಶ್ರಮಿಸುತ್ತಿದ್ದೇನೆ. ಆ ಬಳಿಕ ಪಕ್ಷದ ವರಿಷ್ಟರ ನಿರ್ಧಾರಕ್ಕೆ ತಲೆಬಾಗಿ ಅವರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದಿದ್ದಾರೆ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಜುಲೈ […]

75 ರ ಬಳಿಕ ಗದ್ದುಗೆಯಲ್ಲಿರುವ ನಿಯಮ ಬಿಜೆಪಿ ಯಲ್ಲಿಲ್ಲ | ಪಕ್ಷವನ್ನು ಮುಂದೆಯೂ ಅಧಿಕಾರಕ್ಕೆ ತರುವುದೇ ನನ್ನ ಗುರಿ: ಬಿಎಸ್ ವೈ Read More »

ಭೂಕುಸಿತ- ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್

ಹಾಸನ: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್‌ ಬಳಿ ಭೂ ಕುಸಿತ ಉಂಟಾಗಿ ಶಿರಾಡಿ ಘಾಟ್‌ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಮಂಗಳೂರಿಗೆ ತೆರಳುವವರು ಬೇಲೂರು ಮೂಲಕ ಚಾರ್ಮಾಡಿ ಘಾಟ್‌ನಲ್ಲಿ ತೆರಳುವಂತೆ ಸೂಚನೆ ನೀಡಲಾಗಿದ್ದು. ಮೂಡಿಗೆರೆ, ಹಾನುಬಾಳು, ಕೊಟ್ಟಗೆಹಾರದ ಮೂಲಕ ಬದಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೆಳಿಗ್ಗೆ ಭೂಕುಸಿತವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಸಂಚಾರ ಬಂದ್‌ ಮಾಡಲಾಗಿದೆ. ಸ್ಥಳಕ್ಕೆ

ಭೂಕುಸಿತ- ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ Read More »

‘ನನ್ನವರೇ ನನಗೆ ಕಂಟಕ..:’ ಬಿಎಸ್‍ವೈ

ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬೆನ್ನಲ್ಲೇ ಬಿಎಸ್‍ವೈ ಭಾವುಕದ ಮಾತುಗಳನ್ನು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ನನ್ನವರೇ ನನಗೆ ಶತ್ರುವಾದರು ಎಂದು ಬಿಎಸ್‍ವೈ ಅವರು ತಮ್ಮ ಆಪ್ತರ ಬಳಿ ಭಾವುಕರಾಗಿದ್ದಾರೆ. ತಾವೇ ಕರೆತಂದ ಮೂವರಿಂದ ಬಿಎಸ್‍ವೈ ಕುರ್ಚಿಗೆ ಕಂಟಕವಾಗಿದೆಯಂತೆ. ತನ್ನ ಬೆನ್ನಿಗೆ ನಿಲ್ತಾರೆ ಅಂದುಕೊಂಡಿದ್ದವರಿಂದಲೇ ಸಿಎಂಗೆ ಸಂಕಷ್ಟ ಎದುರಾಗಿದೆ.ಸಿ. ಪಿ ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್, ಸಿ. ಪಿ ಯೋಗೇಶ್ವರ್, ಹೆಚ್. ವಿಶ್ವನಾಥ್ ಹೀಗೆ ಮೂವರು ವ್ಯಕ್ತಿಗಳು

‘ನನ್ನವರೇ ನನಗೆ ಕಂಟಕ..:’ ಬಿಎಸ್‍ವೈ Read More »

ವಾಹನ ಸವಾರರಿಗೆ ಗುಡ್ ನ್ಯೂಸ್| ಇಳಿಕೆಯಾಗಲಿದೆ ಪೆಟ್ರೋಲ್, ಡೀಸೆಲ್‌ ರೇಟ್|

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕೇಂದ್ರವು ಕಡಿತಗೊಳಿಸದಿದ್ದರೂ ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಮತ್ತು ಅದರ ಮಿತ್ರರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿರುವುದು ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಕುಸಿಯುತ್ತಿರುವುದರಿಂದ ಇಂಧನ ಬೆಲೆಗಳು ಇನ್ನೂ ಕಡಿಮೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ತೈಲ ಬೆಲೆಯಲ್ಲಿ ಬುಧವಾರ ಇಳಿಕೆಯಾಗಿದೆ. ಮಂಗಳವಾರ ಶೇ. 1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಬ್ರೆಂಟ್

ವಾಹನ ಸವಾರರಿಗೆ ಗುಡ್ ನ್ಯೂಸ್| ಇಳಿಕೆಯಾಗಲಿದೆ ಪೆಟ್ರೋಲ್, ಡೀಸೆಲ್‌ ರೇಟ್| Read More »

ಸಪ್ತಪದಿಗೆ ಮತ್ತೆ ಕೂಡಿಬಂತು ಮುಹೂರ್ತ| ಶೀಘ್ರದಲ್ಲೇ ಯೋಜನೆ ಪುನರಾರಂಭ-ಸಚಿವ ಕೋಟ|

ಶಿವಮೊಗ್ಗ: ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಕೊರೋನಾ ಸೋಂಕಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರಾರಂಭಗೊಳಿಸಲು ಉದ್ದೇಶಿಸಿದ್ದು, ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದಲೇ ಸರಳ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ರಾಜ್ಯ ಮುಜರಾಯಿ ಮತ್ತು ದಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಶಿವಮೊಗ್ಗ ನಗರದ ಕೋಟೆ ಶ್ರೀರಾಮಾಂಜನೇಯ ದೇವಸ್ಥಾನಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಭೇಟಿ ನೀಡಿ

ಸಪ್ತಪದಿಗೆ ಮತ್ತೆ ಕೂಡಿಬಂತು ಮುಹೂರ್ತ| ಶೀಘ್ರದಲ್ಲೇ ಯೋಜನೆ ಪುನರಾರಂಭ-ಸಚಿವ ಕೋಟ| Read More »

ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೆ ಸಂಭ್ರಮ | ಪರಸ್ಪರ ಸಿಹಿ ಹಂಚಿಕೊಂಡ ಇಂಡೋ-ಪಾಕ್ ಯೋಧರು

ನವದೆಹಲಿ: ಭಾರತ ಪಾಕಿಸ್ತಾನ ನಡುವಿನ ಗಡಿಯಲ್ಲಿ ಇಂದು ಎರಡೂ ದೇಶಗಳ ಯೋಧರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಮೂಲಕ ಎರಡು ರಾಷ್ಟ್ರಗಳ ಯೋಧರು ಬ್ರಾತೃತ್ವ ಸಾರುವ ಈದ್ ಮಿಲಾದ್ ಹಬ್ಬವನ್ನು ಆಚರಿಸಿದ್ದಾರೆ. ಎರಡು ವರ್ಷಗಳ ಹಿಂದೆಯೂ ಈ ರೀತಿಯ ಸಂಭ್ರಮ ಗಡಿಯಲ್ಲಿ ಕಂಡು ಬರುತ್ತಿತ್ತು. ಭಾರತದ ಸ್ವಾತಂತ್ರ್ಯ ದಿನಾಚರಣೆ, ಪಾಕಿಸ್ತಾನ ದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ದೀಪಾವಳಿ, ಈದ್ ಇತ್ಯಾದಿ ಹಬ್ಬಗಳ ಸಂದರ್ಭದಲ್ಲಿ ಗಡಿಯಲ್ಲಿ ಯೋಧರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಆದರೆ 2019 ರ

ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೆ ಸಂಭ್ರಮ | ಪರಸ್ಪರ ಸಿಹಿ ಹಂಚಿಕೊಂಡ ಇಂಡೋ-ಪಾಕ್ ಯೋಧರು Read More »

ಕೋವಿಡ್ ನಿಂದ ಸಾಯುತ್ತಿರುವ ಗಂಡನ ವೀರ್ಯ ಸಂಗ್ರಹಿಸಲು ಒಪ್ಪದ ಆಸ್ಪತ್ರೆ | ಪತ್ನಿಯ ಪರವಾಗಿ ತೀರ್ಪು ನೀಡಿದ ಹೈಕೋರ್ಟ್

ಗುಜರಾತ್: ಸಾವಿನಂಚಿನಲ್ಲಿರುವ ಪತಿಯ ವೀರ್ಯ ದಿಂದ ನಾನು ಮಗುಹೊಂದಲು ಬಯಸುತ್ತೇನೆ ಎಂದ ಪತ್ನಿಯ ಮಾತನ್ನು ಒಪ್ಪದಿದ್ದಾಗ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆಕೆಯ ಪರವಾಗಿ ನ್ಯಾಯಧೀಶರು ತೀರ್ಪು ನೀಡಿದ ಘಟನೆ ರಾಜ್ಯದಲ್ಲಿ ನಡೆದಿದೆ. ಗುಜರಾತ್ ಮೂಲದ ಈ ದಂಪತಿ ನಾಲ್ಕು ವರ್ಷಗಳ ಹಿಂದೆ ಕೆನಡದಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಅಲ್ಲೇ ವಾಸಿಸುತ್ತಿದ್ದರು. ಆದರೆ ಪತಿಯ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ನೋಡಿಕೊಳ್ಳಲು ಸ್ವದೇಶಕ್ಕೆ ಮರಳಿದ್ದರು. ಈ ದಂಪತಿ ಈ ವರೆಗೆ ಮಕ್ಕಳನ್ನು ಹೊಂದಿಲ್ಲ. ಈ ನಡುವೆ ಕಳೆದ

ಕೋವಿಡ್ ನಿಂದ ಸಾಯುತ್ತಿರುವ ಗಂಡನ ವೀರ್ಯ ಸಂಗ್ರಹಿಸಲು ಒಪ್ಪದ ಆಸ್ಪತ್ರೆ | ಪತ್ನಿಯ ಪರವಾಗಿ ತೀರ್ಪು ನೀಡಿದ ಹೈಕೋರ್ಟ್ Read More »

ಬಿಡುಗಡೆಗೆ ಮೊದಲೇ ಸುದ್ದಿಯಾಗುತ್ತಿದೆ ‘ಒನ್ ಪ್ಲಸ್’ ಹೇಗಿದೆ ಗೊತ್ತಾ ಹೊಸ ಫೀಚರ್ಸ್ ನ ಮೊಬೈಲ್?

Oneplus nord 2ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ರೆಡ್ಮಿ, ಎಂಐ, ಸ್ಯಾಮ್​ಸಂಗ್ ಮೊಬೈಲ್​ಗಳ ನಡುವೆ ತನ್ನದೆ ಆದ ವಿಶೇಷ ಸ್ಥಾನ ಕಾಪಾಡಿಕೊಂಡಿರುವ ಒನ್​ಪ್ಲಸ್ (OnePlus) ಕಂಪೆನಿ ಸದ್ಯ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಜುಲೈ 22 ರಂದು ಸಾಕಷ್ಟು ರೋಚಕತೆ ಸೃಷ್ಟಿಸಿರುವ ಒನ್​ಪ್ಲಸ್ ನಾರ್ಡ್​ 2 ಸ್ಮಾರ್ಟ್​ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಇ ಕಾಮರ್ಸ್ ತಾಣ ಅಮೆಜಾನ್ (Amazon) ಇಂಡಿಯಾ ಒನ್‌ಪ್ಲಸ್ ನಾರ್ಡ್ 2ಗಾಗಿಯೇ ಪ್ರತ್ಯೇಕವಾದ ಮೈಕ್ರೋಸೈಟ್‌ಗಳನ್ನು ಸೃಷ್ಟಿಸಿವೆ. ವಿಶೇಷ ಏನೆಂದರೆ, ನಾರ್ಡ್​ 2

ಬಿಡುಗಡೆಗೆ ಮೊದಲೇ ಸುದ್ದಿಯಾಗುತ್ತಿದೆ ‘ಒನ್ ಪ್ಲಸ್’ ಹೇಗಿದೆ ಗೊತ್ತಾ ಹೊಸ ಫೀಚರ್ಸ್ ನ ಮೊಬೈಲ್? Read More »

ಸುಳ್ಯ : ಪಕ್ಕದ ಮನೆ ಅಜ್ಜಿಯ ಯಾಮಾರಿಸಿ ಸಾಲ ಮಾಡಿ ಮೊಬೈಲ್ ಖರೀದಿಸಿದ | ಮನೆಯವರ ಜೊತೆ ಯುವಕನೂ ನಾಪತ್ತೆ

ಸುಳ್ಯ: ಅಂಗಡಿಯಲ್ಲಿ ಪಕ್ಕದ ಮನೆ ಅಜ್ಜಿ ಹೆಸರಿನಲ್ಲಿ ಸಾಲ ಮಾಡಿ ಮೊಬೈಲ್ ಖರೀದಿಸಿ ಕಂತು ಪಾವತಿಸದೆ ಯುವಕ ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ನಗರದ ನಾವೂರು ನಿವಾಸಿ ಹ್ಯಾರಿಸ್ ಎಂಬ ಯುವಕ ಅಜ್ಜಿಯನ್ನು ಯಾಮಾರಿಸಿದವ. ಈತ ತನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಕದೀಜ ಎಂಬ ಅಜ್ಜಿಯನ್ನು ನಂಬಿಸಿ ನಗರದ ಮೊಬೈಲ್ ಅಂಗಡಿ ಕರೆದೊಯ್ದಿದ್ದಾನೆ. ಅಲ್ಲಿ ಅಜ್ಜಿಯಿಂದ ಬ್ಯಾಂಕ್ ಅಕೌಂಟ್ ಬುಕ್, ಆಧಾರ್ ಕಾರ್ಡ್, ಫೋಟೋ ಇನ್ನಿತರ ದಾಖಲೆ ಪತ್ರಗಳನ್ನು ನೀಡಿ, ಅಜ್ಜಿಯನ್ನು ತನ್ನ ತಾಯಿಯೆಂದು ಮೊಬೈಲ್ ಅಂಗಡಿಯವರಿಗೆ

ಸುಳ್ಯ : ಪಕ್ಕದ ಮನೆ ಅಜ್ಜಿಯ ಯಾಮಾರಿಸಿ ಸಾಲ ಮಾಡಿ ಮೊಬೈಲ್ ಖರೀದಿಸಿದ | ಮನೆಯವರ ಜೊತೆ ಯುವಕನೂ ನಾಪತ್ತೆ Read More »

ದೇಶದಲ್ಲಿ ‌ಹಕ್ಕಿಜ್ವರ ಭೀತಿ| ದೆಹಲಿಯಲ್ಲಿ ಬಾಲಕ ಬಲಿ…!

ನವದೆಹಲಿ: ದೇಶದಲ್ಲಿ ಮತ್ತೆ ಹಕ್ಕಿಜ್ವರದ ಭೀತಿ ಎದುರಾಗಿದ್ದು, ದೆಹಲಿಯ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್​ (AIIMS)ನಲ್ಲಿ ಹಕ್ಕಿಜ್ವರ (Bird Flu)ದಿಂದ 12ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹಕ್ಕಿ ಜ್ವರದಿಂದ ಸತ್ತ ಮೊದಲ ಪ್ರಕರಣ ಇದಾಗಿದ್ದು, ಆತಂಕ ಮೂಡಿಸಿದೆ. ಏಮ್ಸ್​ನ ಮಕ್ಕಳ ವಿಭಾಗದಲ್ಲಿ ಅಡ್ಮಿಟ್ ಆಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ H5N1 (ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ. ಇನ್ನು ಹಕ್ಕಿ ಜ್ವರ ಸಾಂಕ್ರಾಮಿಕ ಆಗಿರುವ ಕಾರಣಕ್ಕೆ ಬಾಲಕನ ಸಂಪರ್ಕಕ್ಕೆ ಬಂದ ದೆಹಲಿ

ದೇಶದಲ್ಲಿ ‌ಹಕ್ಕಿಜ್ವರ ಭೀತಿ| ದೆಹಲಿಯಲ್ಲಿ ಬಾಲಕ ಬಲಿ…! Read More »