Ad Widget .

ಸುಬ್ರಹ್ಮಣ್ಯ: ಶ್ರೀ ಹೋಮ್’ಕೇರ್ ಕ್ಲಿನಿಕ್’ನಲ್ಲಿ ಇನ್ನು ಮದ್ಯಾಹ್ನದ ಬಳಿಕವೂ ವೈದ್ಯಕೀಯ ಸೇವೆ ಲಭ್ಯ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೋಮ್’ಕೇರ್ ಕ್ಲಿನಿಕ್ ನಲ್ಲಿ ಇನ್ನು ಅಪರಾಹ್ನವೂ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಕ್ಲಿನಿಕ್ ನ ವೈದ್ಯರು ತಿಳಿಸಿದ್ದಾರೆ.

Ad Widget . Ad Widget .

ಸುಬ್ರಹ್ಮಣ್ಯದ ಕಾರ್ತಿಕೇಯ ಬಿಲ್ಡಿಂಗ್ ನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಸ್ಥಳೀಯ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಹೋಮಿಯೋ ಕ್ಲಿನಿಕ್ ಇದುವರೆಗೆ ಬೆಳಿಗ್ಗೆ 9:00 ಗಂಟೆಯಿಂದ ಮದ್ಯಾಹ್ನ 1:00 ರ ವರೆಗೆ ಕ್ಲಿನಿಕ್ ತೆರೆದಿರುತ್ತಿತ್ತು. ಇದೀಗ ಜನತೆಯ ಅನುಕೂಲಕ್ಕಾಗಿ ಕ್ಲಿನಿಕ್ ನ್ನು ಅಪರಾಹ್ನವೂ ತೆರೆಯಲು ನಿರ್ಧರಿಸಲಾಗಿದೆ. ಕ್ಲಿನಿಕ್ ಇನ್ನು ಬೆಳಗಿನ ಸೇವೆಯ ಜೊತೆಗೆ ಸಂಜೆ 4:00 ಗಂಟೆಯಿಂದ 8:00 ರ ವರೆಗೆ ತೆರುದಿರುತ್ತದೆ. ಇಲ್ಲಿ ಎಲ್ಲಾ ತರಹದ ಅರೋಗ್ಯ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೈದ್ಯರಾದ ಡಾ. ಆದಿತ್ಯ ಚನಿಲ ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *