Ad Widget .

ಯುವತಿ ಕೈಗೆ ಮಗುನೀಡಿ‌ ಮೋಸ ಮಾಡಿದ ಕಿರುತೆರೆ ನಟ

ಬೆಂಗಳೂರು: ಕನ್ನಡದ ಕಿರುತೆರೆ ನಟ (ವಿಲನ್ ಪಾತ್ರಧಾರಿ) ಚಿಕ್ಕಮಗಳೂರು ಜಿಲ್ಲೆ ತಾಲೂಕಿನ ಕಳಸಾಪುರ ನಿವಾಸಿ ಉಮೇಶ್, ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ಉಮೇಶನ ಬಣ್ಣದ ಮಾತುಗಳಿಗೆ ಮರುಳಾದ ಯುವತಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ.

Ad Widget . Ad Widget .

ಹಾಸನ ಜಿಲ್ಲೆ ಚನ್ನರಾಯಪಟ್ಟಣ ಯುವತಿ ಉಮೇಶ್ ನಿಂದ ಮೋಸಕ್ಕೊಳಗಾಗಿದ್ದಾಳೆ. ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಒಂದು ಮಗುವಿಗೆ ಕಾರಣನಾಗಿದ್ದಾನೆ

Ad Widget . Ad Widget .

ವಂಚಕನಿಂದ ಮೋಸಹೋಗಿರುವ ಯುವತಿ ಆತನ ಮನೆ ಎದುರು ತನ್ನ 5 ತಿಂಗಳ ಮಗುವಿನ ಜೊತೆ ಧರಣಿ ಕುಳಿತಿದ್ದಾಳೆ. ಆತನೊಂದಿಗೆ ಮದುವೆ ಮಾಡಿಸಿ ಎಂದು ಒತ್ತಾಯಿಸಿದ್ದಾಳೆ. “ಮಗು ಹುಟ್ಟುವ ಮುಂಚೆ ತೆಗೆಸು ಎಂದು ಕೇಳಿಕೊಂಡರು ಏನೂ ಮಾಡಲಿಲ್ಲ. ಇಂದು ಮಗು ಇಟ್ಟುಕೊಂಡು ನಾನು ಎಲ್ಲಿಗೆ ಹೋಗಲಿ. ಮಗು ಆದಮೇಲೆ ಸಹ ನನ್ನ ಮಗುವನ್ನು ಮಹಿಳೆಯೊಬ್ಬಳ ಜೊತೆ ಸೇರಿ ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದ್ದ” ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾಳೆ ಯುವತಿ.

ಪ್ರತಿಭಟನಾ ನಿರತ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ ಉಮೇಶನ ಮೊದಲ ಹೆಂಡತಿ. ”ಅವನಿಗೂ ನಮಗೂ ಸಂಬಂಧವೇ ಇಲ್ಲ. ಅವನು ನಿನಗೆ ಮೋಸ ಮಾಡಿದ್ದರೆ ಹೋಗಿ ಅವನನ್ನೇ ಕೇಳು” ಎಂದು ದಬಾಯಿಸಿದ್ದಾರೆ. ಯುವತಿಗೆ ಪೊಲೀಸರು ಸಮಾಧಾನಪಡಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *