Ad Widget .

‘ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ’ ಹಿರಿಯರ ಅಸಮಾಧಾನವೇ ಮೂಲ ಕಾರಣವಂತೆ! ಸಿಎಂ ಬೊಮ್ಮಾಯಿ ಹೆಸರಿಂದ ಸಿಡಿ ತನಿಖೆ ವಿಳಂಬ

Ad Widget . Ad Widget .

Ad Widget . Ad Widget .

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ಕಾರಣಕ್ಕೆ ಸಚಿವಾಕಾಂಕ್ಷಿಗಳು ನಿತ್ಯ ಸಿಎಂ ಮನೆಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನೇರವಾಗಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಕೋಪದ ಕಟ್ಟೆ ಒಡೆಯಲಿದೆ ಎನ್ನುವ ಅನುಮಾನ ಹೈಕಮಾಂಡ್‌ಗೆ ಇದೆ. ಇದೆಕ್ಕೆಲ್ಲ ಮಾಜಿ ಸಚಿವರಲ್ಲಿರುವ ಅಸಮಾಧಾನವೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಹಾಗಾಗಿ ಎಲ್ಲರ ಸಮಾಧಾನವಾದ ಬಳಿಕ ಸಚಿವ ಸಂಪುಟ ವಿಸ್ತರೆಣೆ ಮಾಡುವ ಬಗ್ಗೆ ಸಿಎಂ ನಿರ್ದರಿಸಿದ್ದಾರೆ.
ಇನ್ನೂ ಕೆಲವು ಶಾಸಕರು ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವರನ್ನಾಗಿ ಮಾಡುವಂತೆ ಮನವಿ ಮಾಡಲು ಕಸರತ್ತು ನಡೆಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ದೆಹಲಿ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯಾವಕಾಶ ನೀಡಿದರೆ ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸುತ್ತೇನೆ ಎಂದಿದ್ದಾರೆ. ಆದರೆ ಈ ಬಾರಿ ದೆಹಲಿ ಭೇಟಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ಅವಕಾಶ ಕಲ್ಪಿಸಿದರೆ ಸಿಎಂ ಆದ ಬಳಿಕ ಮೊದಲ ಬಾರಿ ಸೌಜನ್ಯಯುತ ಭೇಟಿ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಮತ್ತೊಂದು ಬಾರಿ ದೆಹಲಿಗೆ ಭೇಟಿ ನೀಡಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾಯಕರ ಜೊತೆಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಅಂದರೆ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎನ್ನುವ ಮುನ್ಸೂಚನೆ ಈ ಮೂಲಕ ಸಿಕ್ಕಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಕೋಪದಲ್ಲಿರುವ ಬಿಜೆಪಿ ಶಾಸಕರು ಎನ್ನಲಾಗ್ತಿದೆ. ಬಿ.ಎಸ್ ಯಡಿಯೂರಪ್ಪ ಆತ್ಯಪ್ತ ಬಣ ಹೈಕಮಾಂಡ್‌ಗೆ ಸಡ್ಡು ಹೊಡೆದು ಬಸವರಾಜ ಬೊಮ್ಮಾಯಿ ಸಚಿವರಾಗುವಂತೆ ನೋಡಿಕೊಂಡಿದೆ. ಪಕ್ಷನಿಷ್ಠ ಶಾಸಕರು ಏನನ್ನೂ ತೋರ್ಪಡಿಸದೆ ಪಕ್ಷದ ಒಳಿತಿಗಾಗಿ ಮೌನಕ್ಕೆ ಶರಣಾಗಿದ್ದಾರೆ. ಆದರೆ ಇದೀಗ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಕೋಪದ ಕಟ್ಟೆ ಒಡೆಯಲಿದೆ ಎನ್ನುವ ಅನುಮಾನ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ.

ಬಸವರಾಜ ಬೊಮ್ಮಾಯಿ ವಿರುದ್ಧವೇ ದೂರಿತ್ತು..!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ತನಿಖೆ ವಿಳಂಬಕ್ಕೆ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ, ವಿಜಯೇಂದ್ರ ಕಾರಣ. ಡಿ.ಕೆ ಶಿವಕುಮಾರ್ ಜೊತೆಗೆ ಸೇರಿಕೊಂಡು ತನಿಖೆ ನಿಧಾನಗತಿ ಆಗುವಂತೆ ನೋಡಿಕೊಳ್ತಿದ್ದಾರೆ ಎನ್ನುವ ಆರೋಪವನ್ನು ರಮೇಶ್ ಜಾರಕಿಹೊಳಿ ಮಾಡಿದ್ದರು. ಇದೀಗ ಬಸವರಾಜ ಬೊಮ್ಮಾಯಿಯೇ ಮುಖ್ಯಮಂತ್ರಿ ಆಗಿರುವುದು ರಮೇಶ್ ಜಾರಕಿಹೊಳಿ ಆಪ್ತವಲಯಕ್ಕೆ ನುಂಗಲಾರದ ತುತ್ತಾಗಿದೆ. ಒಂದು ವೇಳೇ ಸಚಿವ ಸಂಪುಟ ವಿಸ್ತರಣೆ ಆದರೆ ರಮೇಶ್ ಜಾರಕಿಹೋಳಿ ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಯತ್ನಾಳ್ ಎಲ್ಲಿದ್ದಾರೆ..? ಯಾಕೆ ಮೌನವಾಗಿದ್ದಾರೆ..?

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಬಿಎಸ್? ಯಡಿಯೂರಪ್ಪ ಅಭಿಮಾನಿಗಳು ಸಾಮಾಜಿಕ ಜಾಲ ತಾಣದಲ್ಲಿ ಕಿಚ್ಚಾಯಿಸುವ ಪೋಸ್ಟರ್?ಗಳನ್ನು ಹಾಕುತ್ತಿದ್ದಾರೆ. ಇಲ್ಲೀವರೆಗೂ ಒಂದು ಮಾತನ್ನೂ ಆಡದ ಬಸನಗೌಡ ಪಾಟೀಲ್ ಯತ್ನಾಳ್, ಏನು ಮಾಡುತ್ತಿದ್ದಾರೆ ಎನ್ನುವ ಶಂಕೆ ಮೂಡುತ್ತಿದೆ. ಅದೂ ಅಲ್ಲದೆ ಬಿ.ಎಸ್ ಯಡಿಯೂರಪ್ಪ ಸಂಪುಟದಲ್ಲಿ ನಾನು ಮಂತ್ರಿ ಆಗಲ್ಲ, ಮುಂದಿನ ಮುಖ್ಯಮಂತ್ರಿ ಹಿಂದುತ್ವದ ಪರವಾಗಿರುವ ಮುಖ್ಯಮಂತ್ರಿ ಆದರೆ ಸಚಿವನಾಗ್ತೇನೆ ಎಂದಿದ್ದರು. ಇದೀಗ ಸಂಪುಟ ವಿಸ್ತರಣೆ ವೇಳೆ ಮತ್ತೆ ಗೊಂದಲ ಮೂಡುವ ಅನುಮಾನ ಕೇಂದ್ರ ನಾಯಕರಲ್ಲಿದೆ. ಇಷ್ಟೆಲ್ಲಾ ಕಾರಣಗಳಿರುವ ಕಾರಣ ಕೋಪತಾಪ ಕಡಿಮೆಯಾಗಲಿ ಎನ್ನುವ ಉದ್ದೇಶ ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು.

ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದ ಬೆಲ್ಲದ್..!

ಸಿಎಂ ರೇಸ್‌ನಲ್ಲಿ ಅಂತಿಮ ಕ್ಷಣದ ತನಕ ಪೈಪೋಟಿ ನಡೆಸಿದ ಶಾಸಕ ಅರವಿಂದ ಬೆಲ್ಲದ್, ಸಂಘ ಪರಿವಾರದ ಆಯ್ಕೆಯಾಗಿದ್ದರು. ಬಿ.ಎಲ್ ಸಂತೋಷ್ ಅಥವಾ ಅರವಿಂದ್ ಬೆಲ್ಲದ್ ಸಿಎಂ ಆಗಬೇಕು ಎಂಬುದು ಸಂಘ ಪರಿವಾರದ ಸೂಚನೆ ಆಗಿತ್ತು. ಅದೇ ಕಾರಣದಿಂದ ಬಿ.ಎಲ್ ಸಂತೋಷ್ ಬೆಂಗಳೂರಿಗೆ ಬಂದಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಬಂಡಾಯದ ಮುನ್ಸೂಚನೆ ಸಿಗುತ್ತಿದ್ದ ಹಾಗೆ ಹೈಕಮಾಂಡ್ ಬಿಎಸ್ ಯಡಿಯೂರಪ್ಪ ಬಣಕ್ಕೆ ಶರಣಾಯ್ತು ಎನ್ನುವುದು ರಾಜಕೀಯ ವಲಯುದಲ್ಲಿ ಕೇಳಿ ಬರುತ್ತಿರುವ ಗುಸುಗುಸು. ಅದಕ್ಕೂ ಮೊದಲು ಅರವಿಂದ್ ಬೆಲ್ಲದ್ ಸ್ವತಃ ಬಿಜೆಪಿ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದರು. ಆಗ ಗೃಹ ಸಚಿವರಾಗಿದ್ದವರು ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಈಗ ಸ್ವತಃ ಬಸವರಾಜ ಬೊಮ್ಮಾಯಿ ಸಿಎಂ ಆಗಿರುವುದು ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವ ಆಗಿದೆ.

Leave a Comment

Your email address will not be published. Required fields are marked *