ಮಡಿಕೇರಿ : ಹಾಲಿ ಸೈನಿಕನ ಮತ್ತು ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದರೂ ಆರೋಪಿಗಳು ಅರೆಸ್ಟ್ ಮಾಡಿ ಒಂದೇ ದಿನದಲ್ಲಿ ಅವರಿಗೆ ಜಾಮೀನು ನೀಡಿದ ಹಿನ್ನಲೆ ಸಾರ್ವಜನಿಕರು ಇಂದು “ಮಡಿಕೇರಿ ಚಲೋ” ಎಂಬ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ಜು. 26 ರಂದು ಕುಟುಂಬ ಸಮೇತ ಹಾಲಿ ಸೈನಿಕರೋರ್ವರು ಕಾರಿನಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇದರಿಂದ ಯೋಧ ಮತ್ತು ಕುಟುಂಬದವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.
ಇದಾದ ಬಳಿಕ ನ್ಯಾಯಾಲಯ ಒಂದೇ ದಿನದಲ್ಲಿ ಆರೋಪಿಗಳಿಗೆ ಜಾಮೀನು ನೀಡಲಾಗಿದೆ.
ಇದರಿಂದ ಆಕ್ರೋಶಗೊಂಡಿರುವ ನಾಗರೀಕರು ‘ಸಮಾಜದಲ್ಲಿ ಸೈನಿಕರ ಕುಟುಂಬಕ್ಕೆ ಯಾರೂ ಕೂಡ ಗೌರವವನ್ನು ನೀಡುತ್ತಿಲ್ಲ, ನಾವು ದೇವರು ಎಂದು ನಂಬಿರುವ ನ್ಯಾಯಾಲಯವೂ ಕೂಡ ಅನ್ಯಾಯ ಮಾಡಿದೆ. ಸೈನಿಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಕೇವಲ ಒಂದೇ ದಿನದಲ್ಲಿ ಜಾಮೀನು ನೀಡಿದೆ ,ನ್ಯಾಯಾಲಯವೇ ನಮಗೆ ನ್ಯಾಯ ಕೊಡದಿದ್ದರೆ ಬೇರೆ ನಾವು ಯಾರನ್ನ ಕೇಳೋದು ಯಾರತ್ರ ನ್ಯಾಯ ಕೇಳುವುದು’ ಪ್ರಶ್ನಿಸಿದ್ದು, ಈ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಶುಕ್ರವಾರ ಬೆಳಿಗ್ಗೆ 9:30 ಕ್ಕೆ ಮಡಿಕೇರಿಯ ತಿಮ್ಮಯ್ಯ ಸರ್ಕಲ್ ನಿಂದ ಡಿಸಿ ಆಫೀಸ್ ವರೆಗೂ ಅಖಿಲಭಾರತ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಮಾಜಿ ಸೈನಿಕ ಡಾ. ಶಿವಣ್ಣಎನ್ ಕೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ.