Ad Widget .

ಅಶ್ಲೀಲ ವಿಡಿಯೋ ಚಿತ್ರೀಕರಣವೂ ಕೂಡ ಉದ್ಯೋಗವೇ… ಲೈಂಗಿಕ ವಿಚಾರ ಬಚ್ಚಿಟ್ಟಷ್ಟು ಅದರ ಕುತೂಹಲಗಳು ಹೆಚ್ಚಾಗುತ್ತೆ- ನಟಿ ಸೋಮಿ ಅಲಿ

Ad Widget . Ad Widget .

ಮುಂಬೈ: ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸುವುದು ಕೂಡ ಒಂದು ಉದ್ಯೋಗ ಅದು ಅಪರಾಧವಲ್ಲ ಎಂದು ಬಾಲಿವುಡ್ ನಟಿ ಸೋಮಿ ಅಲಿ ಹೇಳಿಕೆ ನೀಡಿದ್ದಾರೆ.

Ad Widget . Ad Widget .

ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಮತ್ತು ಅಂತಹ ವಿಡಿಯೋ ನಿರ್ದೇಶನ ಮಾಡುವುದು, ನಿರ್ಮಿಸುವುದು ತಪ್ಪಲ್ಲ. ಅದು ಕೂಡ ಒಂದು ಉದ್ಯಮರಂಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪೋರ್ನ್ ಉದ್ಯಮ ಎಲ್ಲ ಉದ್ಯಮಗಳಂತೆಯೇ ಒಂದು ಉದ್ಯಮವಾಗಿದೆ. ಹಾಗಾಗಿ, ಅದನ್ನು ಉದ್ಯೋಗವಾಗಿ ಸ್ವೀಕರಿಸುವ ವ್ಯಕ್ತಿಯನ್ನು ನಾನು ಕೆಟ್ಟವನು ಎಂದು ಭಾವಿಸುವುದಿಲ್ಲ. ಲೈಂಗಿಕ ದೌರ್ಜನ್ಯ, ಮೋಸ ಮಾಡುವುದು ಅಪರಾಧವಾಗಿದೆ ಎಂದು ಬಾಲಿವುಡ್ ಬಡೇಮಿಯಾ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ ಹೇಳಿದರು.

ಲೈಂಗಿಕ ವಿಚಾರಗಳನ್ನು ನಾವು ಎಷ್ಟು ಬಚ್ಚಿಡುವುದರಿಂದ ಅದರ ಬಗ್ಗೆ ಕುತೂಹಲಗಳು ಹೆಚ್ಚುತ್ತದೆ. ಲೈಂಗಿಕತೆ ಮನುಷ್ಯನ ಸಹಜ ಪ್ರಕ್ರಿಯೆ ಹಾಗಾಗಿ ಪೋರ್ನ್ ಗೆ ಸಹ ನಿರ್ಬಂಧ ಇರಕೂಡದು. ಪೋರ್ನ್ ಹೆಸರಿನಲ್ಲಿ ಯಾರ ಮೇಲೂ ಬಲವಂತ, ದೌರ್ಜನ್ಯ ಆಗದೇ ಇದ್ದಲ್ಲಿ ಪೋರ್ನ್ ಗೆ ನನ್ನ ಸಹಮತ ಇದೆ ಎಂದು ಹೇಳಿದರು.

ಇತ್ತೀಚೆಗೆ ವೆಬ್ ಸರಣಿಗಳಲ್ಲಿ, ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಸಾಮಾನ್ಯವಾಗಿದೆ. ಹಾಗೆಯೇ ಪೋರ್ನ್ ವಿಡಿಯೋಗಳು ಕೂಡ ಸಾಮಾನ್ಯವಾಗಿದೆ ಎಂದು ಸೋಮಿ ಹೇಳಿದ್ದಾರೆ.

Leave a Comment

Your email address will not be published. Required fields are marked *