Ad Widget .

ಸಂಪಾಜೆ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತ ಲಾರಿಗಳು ದ.ಕ ಜಿಲ್ಲಾಡಳಿತದಿಂದ ಚಾಲಕರಿಗೆ ಮಾಹಿತಿ ಇಲ್ಲವೆ?

Ad Widget . Ad Widget .

ಸುಳ್ಯ : ಸಂಪಾಜೆ ಮಡಿಕೇರಿ ರಸ್ತೆ ಕುಸಿತಗೊಂಡಿದ್ದು ಈ ರಸ್ತೆಯಲ್ಲಿ ಘನ ವಾಹನ ಸಂಚಾರವನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದ ಹಿನ್ನಲೆಯಲ್ಲಿ ಸಂಪಾಜೆ ಚೆಕ್ ಪೋಸ್ಟ್ ಬಳಿ ಘನವಾಹನಗಳು ಕಿ.ಮೀ ದೂರ ಸಾಲುಗಟ್ಡಿ ನಿಂತಿವೆ.
ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ವಾಹನ ಸಂಚಾರಿಸದಂತೆ ಯಾವುದೇ ಮಾಹಿತಿ ನೀಡದಿರುವುದರಿಂದ ನಮಗೆ ಸಮಸ್ಯೆಯಾಗಿದೆ ಎಂದು ಘನ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘನ ವಾಹನಗಳನ್ನು ತಡೆದಿರುವುದರಿಂದ ನಮಗೆ ಮೂಲಭೂತ ವ್ಯವಸ್ಥೆಗಳಿಲ್ಲದೆ ನಾವು ಸಮಸ್ಯೆಗೊಳಗಾಗಿದ್ದೇವೆ ಎಂದು ಚಾಲಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಚೆಕ್ ಪೋಸ್ಟ್ ನಲ್ಲಿ
ಎರಡು ದಿವಸದ ಹಿಂದೆ ಕೊಡಗು ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಘನವಾಹನ ಚಾಲಕರಿಂದ ಹಣ ಪಣಪಡೆದುಕೊಂದು ಘನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಸ್ಥಳೀಯರು ದೂರು ನೀಡಿರುವ ಹಿನ್ನಲೆಯಲ್ಲಿ ಆರ್.ಟಿ.ಒ ಆಧಿಕಾರಿಗಳು ಚೆಕ್ ಪೋಸ್ಟ್ ಗೆ ಬಂದು ಮಾಹಿತಿ ಪಡೆದುಕೊಂಡಿದ್ದರು.ಈ ಹಿನ್ನಲೆಯಲ್ಲಿ ಸೋಮವಾರ ರಾತ್ರಿಯಿಂದ ಯಾವುದೇ ಘನವಾಹನಗಳು ಸಂಪಾಜೆ ಮಡಿಕೇರಿ ರಸ್ತೆಯಲ್ಲಿ ಸಂಚಾರಿಸಲು ಅವಕಾಶವಾಗಿಲ್ಲ.ಇದರಿಂದ ಇಂದು ಘನವಾಹ‌ನಗಳು ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *