Ad Widget .

ದಲಿತ ಕುಟುಂಬದ ಮನೆ ನೆಲಸಮ| ನೊಂದ ಯಜಮಾನ ಆತ್ಮಹತ್ಯೆಗೆ ಯತ್ನ| ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮಿನಿ ವಿಧಾನಸೌಧದೆದರು ಪ್ರತಿಭಟನೆ

ದಲಿತ ಕುಟುಂಬದ ಮನೆ ನೆಲಸಮ| ನೊಂದ ಯಜಮಾನ ಆತ್ಮಹತ್ಯೆಗೆ ಯತ್ನ| ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮಿನಿ ವಿಧಾನಸೌಧದೆದರು ಪ್ರತಿಭಟನೆ

Ad Widget . Ad Widget .

ಪುತ್ತೂರು: ಇಲ್ಲಿನ ಒಳಗ್ರಾಮ ಗ್ರಾಮದ ದರ್ಭೆತ್ತಡ್ಕ ಶಾಲೆಯ ಸಮೀಪ 11 ವರ್ಷಗಳಿಂದ ವಾಸಿಸುತ್ತಿದ್ದ ದಲಿತ ಕುಟುಂಬದ ಮನೆಯನ್ನು ಅಕ್ರಮ ಕಟ್ಟಡ ನೆಪದಲ್ಲಿ ನೆಲ ಸಮ ಮಾಡಲಾಗಿದ್ದು, ಘಟನೆಯಿಂದ ಮನೆ ಮಾಲೀಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆ ಖಂಡಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪುತ್ತೂರು ಮಿನಿವಿಧಾನ ಸೌಧದೆದರು ಪ್ರತಿಭಟನೆ ನಡೆಸಿದ್ದಾರೆ.

Ad Widget . Ad Widget .

ಮನೆಯವರು ಕೆಲಸಕ್ಕೆ ಹೋಸ ಸಂದರ್ಭದಲ್ಲಿ ಮನೆಯನ್ನು ತೆರವುಗೊಳಿಸಿದ್ದು ಸಂಜೆ ಮನೆಯತ್ತ ಬಂದ ಮನೆ ಮಾಲಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು

ಸರಕಾರಿ ಶಾಲಾ ಜಾಗದಲ್ಲಿ ಮನೆ ನಿರ್ಮಿಸಿದ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿಯವರು ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಮನೆಯನ್ನು ತೆರವುಗೊಳಿಸಿದ್ದು ಕಂದಾಯ ಇಲಾಖೆಯ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದು ಇಂದು ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಪುತ್ತೂರು, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಹಾಗೂ ಅಂಬೇಡ್ಕರ್ ರಕ್ಷಣಾ ವೇದಿಕೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಪುತ್ತೂರಿನ ಮಿನಿ ವಿಧಾಬ ಸೌಧದ ಎದುರು ಪ್ರತಿಭಟನೆ ನಡೆಸಿದರು.

ಆತ್ಮಹತ್ಯೆಗೆ ಯತ್ನಿಸಿದ ಮನೆ ಮಾಲಿಕ ರಘುನಾಥರವರನ್ನು ಆ್ಯಂಬುಲೆನ್ಸ್ ನ ಮೂಲಕ ಮಿನಿ ವಿಧಾನ ಸೌಧದ ಆವರಣದಲ್ಲಿ ಮಲಗಿಸಿ ದಲಿತ ಸಂಘಟನೆಗಳು ಪುತ್ತೂರಿನ ತಹಸಿಲ್ದಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಪೋಲಿಸರು ರಘುನಾಥರನ್ನು ಆಸ್ಪತ್ರೆಗೆ ರವಾನಿಸುವಂತೆ ಕೇಳಿಕೊಂಡರು ಇದಕ್ಕೆ ಪ್ರತಿಭಟನೆಕಾರರು ಬಗ್ಗದೆ ತಹಸೀಲ್ದಾರ್ ಇಲ್ಲಿಗೆ ಬರಬೇಕು. ನಂತರವಷ್ಟೆ ನಾವು ಇಲ್ಲಿಂದ ತೆರಳುತ್ತೇವೆ ಮತ್ತು ರಘುನಾಥ ರನ್ನು ಆಸ್ಪತ್ರೆಗೆ ಸೇರಿಸುತ್ತೇವೆ ಒಂದು ವೇಳೆ ನಾವು ಇಲ್ಲಿಂದ ತೆರಳುವುದಿಲ್ಲವೆಂದು ಪಟ್ಟು ಹಿಡಿದರು.

ರಘುನಾಥರ ಜೀವಕ್ಕೇನಾದರೂ ತೊಂದರೆಯಾದಲ್ಲಿ ಇದಕ್ಕೆ ಮೂಲ ಕಾರಣ ಇಲಾಖಾಧಿಕಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಎಸಿ ಯತೀಶ್ ಉಳ್ಳಾಲ್ ರವರು ಪ್ರತಿಭಟನಕಾರ ಮನವಿ ಸ್ವೀಕರಿಸಿ ರಘುನಾಥರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು.

Leave a Comment

Your email address will not be published. Required fields are marked *