ಬೆಂಗಳೂರು: ಬಿ.ಎಸ್. ವೈ ರಾಜೀನಾಮೆಗೆ ಒತ್ತಡ ಹಾಕಿರುವುದು ಸರಿಯಲ್ಲ. ಅವರಿಗೆ ಈಗ ಮದುವೆ ಮಾಡಿದರೆ ಎರಡು ಮಕ್ಕಳು ಮಾಡುತ್ತಾರೆ. ಅಷ್ಟು ಶಕ್ತಿ ಅವರಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ರಾಜಕೀಯ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, ಹೀಗೆ ಅಧಿಕಾರ ಹಿಂಪಡೆಯುವುದು ಒಳ್ಳೇ ಸಂಪ್ರದಾಯವಲ್ಲ. ನಾನು ಅವರ ಜಿಲ್ಲೆಯವನು. ಅವರ ಜಿಲ್ಲೆಯವನಾಗಿ ನಾನು ಅವರಿಗೆ ಧೈರ್ಯ ಹೇಳಲು ಬಂದಿದ್ದೆ. ನಾನು ಕಾಂಗ್ರೆಸ್ ಪಕ್ಷದವನಾಗಿ ಬಂದಿಲ್ಲ. ಮಲೆನಾಡಿನವನಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ವಲಸಿಗರ ಸ್ಥಿತಿ ಶೋಚನೀಯಕ್ಕೆ ತಿರುಗಿದೆ. ನಾನು ಮೊದಲೇ ಹೇಳಿದ್ದೆ. ನಮ್ಮ ಮನೆಯಲ್ಲಿ ಪ್ರೆಸ್‌ಮೀಟ್ ಕರೆದಾಗ ನಾನು ತಿಳಿಸಿದ್ದೆ. ರಾಜಕೀಯ ಇತಿಹಾಸ ಬದಲಾವಣೆ ಆಗುತ್ತೆ ಎಂದರು.ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಸಹಾನುಭೂತಿ.. 75 ವರ್ಷ ಎಂದು ಕೇಶವಕೃಪ ಕಾರಣ ಕೊಡುತ್ತಾರೆ. ಆದರೆ, ಕೇರಳದಲ್ಲಿ 80 ವರ್ಷ ದಾಟಿದವರನ್ನು ಕ್ಯಾಂಡಿಡೇಟ್ ಘೋಷಣೆ ಮಾಡುತ್ತೀರಿ ಎಂದು ಕಿಡಿಕಾರಿದರು. ಈ ಸೆಪ್ಟೆಂಬರ್‌ನಲ್ಲಿ ನಾವು ಕೂಡ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಭೆ ಮಾಡುತ್ತೇವೆ. ತಮಗೆಲ್ಲರಿಗೂ ಗೊತ್ತಿದೆ. ಜೂನ್, ಜುಲೈ, ಆಗಸ್ಟ್‌ನಲ್ಲಿ ರಾಜಕೀಯ ವಿಕೇಂದ್ರೀಕೃತ ಆಗುತ್ತೆ. ರಾಜಕೀಯ ಬದಲಾಗುತ್ತೆ ಅಂತಾ ಈ ಮೊದಲೇ ಹೇಳಿದ್ದೆ. ಯಡಿಯೂರಪ್ಪ ಅವರನ್ನ ಪರಿಗಣಿಸಲ್ಲ ಎಂದರು. ಕೇಶವಕೃಪ ಎನ್ನುವುದು ಬಸವ ಕೃಪ ಆಗಿದೆ. ಆರುವರೆ ಕೋಟಿ ಜನರಿರೋ ರಾಜ್ಯದಲ್ಲಿ ಬದಲಾವಣೆ ಸಹಿಸಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಪಡೆಯೋದು ಸರಿಯಲ್ಲ. ಹೀರಾ-ಪೀರಾ ಸಭೆ ಕರೆದು, ರಾಜ್ಯದ ಹಿತಾಸಕ್ತಿ ಕಾಪಾಡಲು ಏನು ಕ್ರಮಕೈಗೊಳ್ಳಬೇಕು ಅನ್ನೋದನ್ನ ಡಿಸೈಡ್ ಮಾಡುತ್ತೇವೆ ಎಂದು ತಿಳಿಸಿದರು.