Ad Widget .

ಹಿರಿಯ ನಟಿ‌ ಜಯಂತಿ ಇನ್ನಿಲ್ಲ

Ad Widget . Ad Widget .

ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಎಂದೇ ಜನಪ್ರಿಯರಾಗಿದ್ದ ಜಯಂತಿ(76) ಕೊನೆಯುಸಿರೆಳೆದಿದ್ದಾರೆ. ಜಯಂತಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಇವರ ಮೊದಲ ಸಿನಿಮಾ ಜೇನು ಗೂಡು.

Ad Widget . Ad Widget .

ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಮೊದಲ ಬಾರಿಗೆ ವಿಶಿಷ್ಟ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಇವರು ಕನ್ನಡ ಚಿತ್ರರಂಗದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಅಂತಲೂ ಕರೆಯಲ್ಪಡುತ್ತಿದ್ದರು. ಇವರ ಮನೋಜ್ಞ ಅಭಿನಯಕ್ಕೆ ಅಭಿನಯ ಶಾರದೆ ಎಂಬ ಬಿರುದನ್ನ ಕನ್ನಡ ಸಿನಿಮಾ ಇಂಡಸ್ಟ್ರಿ ಗೌರವಿಸಿದೆ.

ಜಯಂತಿಯವರ ಮೂಲ ಹೆಸರು ಕಮಲಕುಮಾರಿ.. ಜನವರಿ 6, 1945 ರಂದು ಜಯಂತಿ ಅವರು ಬಳ್ಳಾರಿ(ಆಗಿನ ಮಡ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ, ಈಗ ಕರ್ನಾಟಕ, ಭಾರತ)ಯಲ್ಲಿ ಜನಿಸಿದ್ದರು.
ತಾಯಿ ಸಂತಾನ ಲಕ್ಷ್ಮಿ ಹಾಗೂ ತಂದೆ ಬಾಲಸುಬ್ರಮಣ್ಯಂ. ಜಯಂತಿಯವರ ತಂದೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಪೆಕೇಟಿ ಶಿವರಾಂ ಎನ್ನುವವರನ್ನು ವರಿಸಿದ್ದ ಜಯಂತಿ ಅವರಿಗೆ ಕೃಷ್ಣ ಕುಮಾರ್ ಎಂಬ ಪುತ್ರ ಇದ್ದಾರೆ. ಸಂತಾನ ಲಕ್ಷ್ಮಿ ಹಾಗೂ ತಂದೆ ಬಾಲಸುಬ್ರಮಣ್ಯಂ ಪೋಷಕರಿಗೆ ಒಟ್ಟು ಐದು ಮಕ್ಕಳಲ್ಲಿ ಮೊಲದನೆಯವರಾಗಿ ಜಯಂತಿ ಜನಿಸಿದ್ದರು. ಜಯಂತಿ ಅವರು ಇಬ್ಬರು ಸಹೋದರಿಯರು ಮತ್ತು ಸಹೋದರರನ್ನ ಅಗಲಿದ್ದಾರೆ.

Leave a Comment

Your email address will not be published. Required fields are marked *