Ad Widget .

ನಳಿನ್ ಮನಸ್ಸು ಮಾಡಿದ್ದಲ್ಲಿ ಅಂಗಾರ ಸಿಎಂ ಆಗ್ಬಹುದು- ರಮಾನಾಥ ರೈ

Ad Widget . Ad Widget .

ಮಂಗಳೂರು: ಬಿಜೆಪಿಯವರ ಒಳ ಜಗಳದಿಂದಾಗಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ನಳಿನ್ ಕುಮಾರ್ ಕಟೀಲ್ ಮನಸ್ಸು ಮಾಡಿದ್ದಲ್ಲಿ ಸಚಿವ ಎಸ್. ಅಂಗಾರ ಅವರನ್ನು ಸಿಎಂ ಮಾಡಬಹುದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

Ad Widget . Ad Widget .

ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯವರು ನುಡಿದಂತೆ ನಡೆಯುವುದಿಲ್ಲ. ಬಿಜೆಪಿಯ ಸಂಪೂರ್ಣ ಮಂತ್ರಿ ಮಂಡಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಂದೆ ಯಾರೇ ಬಂದ್ರೂ ಸರಿಯಾಗದ ಸ್ಥಿತಿಯಲ್ಲಿದೆ. ಜನತಾ ಪರಿವಾರದಲ್ಲಿ ಇಲ್ಲಿಯ ತನಕ ದುರ್ಬಲ ವರ್ಗದವರನ್ನು ಸಿಎಂ ಮಾಡಿಲ್ಲ. ಆದರೆ, ಕಾಂಗ್ರೆಸ್ ಎಲ್ಲರಿಗೂ ಅವಕಾಶವನ್ನು ಮಾಡಿಕೊಟ್ಟಿದೆ. ಬಿಜೆಪಿ ದುರ್ಬಲ ವರ್ಗದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ. ನಳಿನ್ ಕುಮಾರ್ ಮನಸ್ಸು ಮಾಡಿದ್ದಲ್ಲಿ ಅಂಗಾರರನ್ನು ಸಿಎಂ ಮಾಡಬಹುದು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ್ ರೈ ಹೇಳಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *