ಅಕ್ಕ ಬೆಳಿಗ್ಗೆ ಯೋಗ ಕಲಿಸಿದರೆ ಬಾವ ರಾತ್ರಿ ಯೋಗ ಕಲಿಸ್ತಿದ್ದಾರೆ….!! ಶರ್ಮಿತಾ ಶೆಟ್ಟಿ ಶುಭಾಶಯಕ್ಕೆ ನೆಟ್ಟಿಗರಿಂದ ಕಮೆಂಟ್.

Ad Widget ... ..

ಮುಂಬೈ ಜುಲೈ 25: ಬ್ಲೂಫಿಲ್ಮ್ ದಂಧೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದು, ರಾಜ್​ ಕುಂದ್ರಾ ಮಾಡಿದ ತಪ್ಪಿನಿಂದಾಗಿ ಅವರ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿದೆ. ಇದೀಗ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಅವರು ಮಾಡಿರುವ ಕಮೆಂಟ್ ಗೆ ನೆಟ್ಟಿಗರು ರಿ ಕಮೆಂಟ್ ಹಾಕಿ ಸಖತ್ ಟ್ರೋಲ್ ಮಾಡುತ್ತಿದ್ದಾರೆ.

Ad Widget

ಶಿಲ್ಪಾ ಶೆಟ್ಟಿ ಅಭಿನಯದ ‘ಹಂಗಾಮಾ- 2’ ಓಟಿಟಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಮೂಲಕ ರಿಲೀಸ್​ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಕ್ಕ ಶಿಲ್ಪಾ ಶೆಟ್ಟಿಗೆ ಶಮಿತಾ ಶೆಟ್ಟಿ ಶುಭ ಕೋರಿದ್ದಾರೆ.

14 ವರ್ಷಗಳ ನಂತರ ನಿನ್ನ ನಟನೆಯ ‘ಹಂಗಾಮಾ 2’ ರಿಲೀಸ್​ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೀಯ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್​ ಆಗುತ್ತಿದ್ದೀಯ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್​ ದಿ ಬೆಸ್ಟ್​’ ಎಂದು ಶಮಿತಾ ಬರೆದುಕೊಂಡಿದ್ದಾರೆ.

ಆದರೆ ಆ ಪೋಸ್ಟ್​ಗೆ ಕಮೆಂಟ್​ ಮಾಡಿರುವ ಬಹುತೇಕರು ರಾಜ್​ ಕುಂದ್ರಾ ವಿಚಾರವನ್ನು ಎಳೆದು ತಂದು ತುಂಬಾ ಕಟುವಾಗಿ ಟ್ರೋಲ್​ ಮಾಡಿದ್ದಾರೆ. ಅಂತಹ ಕೆಲವು ಕಮೆಂಟ್​ಗಳು ಈಗ ಸಖತ್​ ವೈರಲ್​ ಆಗುತ್ತಿದೆ. ‘ನಿಮ್ಮ ಅಕ್ಕ ನಮಗೆ ಬೆಳಗ್ಗಿನ ಯೋಗ ಪೋಸ್​ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಭಾವ ರಾತ್ರಿಯ ಯೋಗ ಪೋಸ್​ಗಳನ್ನು ಕಲಿಸಿಕೊಡುತ್ತಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಈ‌ ರೀತಿಯ ಹಲವಾರು ಕಮೆಂಟ್ ಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

Leave a Comment

Your email address will not be published. Required fields are marked *