Ad Widget .

ಉತ್ಸವದ ಅಕ್ಕಿಗಾಗಿ ದೇವಳಕ್ಕೆ ಗದ್ದೆ ಬಿಟ್ಟು ಕೊಟ್ಟ ಮುಸ್ಲಿಂ ಕುಟುಂಬ: ಪುತ್ತೂರಿನಲ್ಲೊಂದು‌ ಕೋಮು ಸಾಮರಸ್ಯದ ನಡೆ

ಪುತ್ತೂರು: ದೇವಳದ ಉತ್ಸವಕ್ಕೆ ಅಕ್ಕಿಗಾಗಿ ತಮ್ಮ ಬೇಸಾಯದ ಗದ್ದೆಯನ್ನು ಅಬ್ಬಾಸ್, ಅಬೂಬಕ್ಕರ್, ಪುತ್ತು ಎಂಬವರು ಬಿಟ್ಟುಕೊಟ್ಟು ಧರ್ಮ ಸಾಮರಸ್ಯ‌ ಮೆರೆದ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಎಲಿಯ ಎಂಬಲ್ಲಿ ನಡೆದಿದೆ.

Ad Widget . Ad Widget .

ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ‘ಎಲಿಯ ಗದ್ದೆ ಕೃಷಿ ಕ್ಷೇತ್ರ’ ಎಂಬ ಹೆಸರಿನಲ್ಲಿ ನಡೆಯಲಿರುವ ಭತ್ತ ಕೃಷಿಗಾಗಿ ಇಲ್ಲಿನ ಮೂವರು ತಮ್ಮ ಸ್ವಂತ ಗದ್ದೆಯನ್ನು ಬಿಟ್ಟುಕೊಟ್ಟಿದ್ದಾರೆ.

Ad Widget . Ad Widget .

ಇಲ್ಲಿನ ಮಜಲುಗದ್ದೆ ಪ್ರದೇಶದ ನಿವಾಸಿಗಳಾದ ಒಂದೇ ಕುಟುಂಬಸ್ಥರಾಗಿರುವ ಪುತ್ತು ಮಜಲುಗದ್ದೆ, ಅಬ್ಬಾಸ್ ಮಜಲುಗದ್ದೆ ಮತ್ತು ಕೂಡುರಸ್ತೆ ಅಬೂಬಕ್ಕರ್ ಮಜಲುಗದ್ದೆ ಅವರು ತಮ್ಮ ಬೇಸಾಯದ ಗದ್ದೆಯನ್ನು ಬಿಟ್ಟುಕೊಟ್ಟಿದ್ದು, ಈ ಮೂವರು ತಮ್ಮ ಎರಡೂವರೆ ಎಕ್ರೆಯಷ್ಟು ಬೇಸಾಯದ ಗದ್ದೆಯನ್ನು ತಮ್ಮೂರಿನ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದು ಈಗ ದೇವಳದ ವತಿಯಿಂದ ಗದ್ದೆ ಕೃಷಿ ಮಾಡಲಾಗುತ್ತಿದೆ.

ದೇವಳದ ಬ್ರಹ್ಮಕಲಶೋತ್ಸವಕ್ಕೆ ದೇವಳದ ವತಿಯಿಂದಲೇ ಬೇಸಾಯ ಮಾಡಿದ ಗದ್ದೆಯಲ್ಲಿ ಬೆಳೆದ ಭತ್ತದಿಂದ ಅನ್ನಸಂತರ್ಪಣೆ ಮಾಡುವ ದೇವಳದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಯ ಮನವಿಗೆ ಸ್ಪಂದನೆ ನೀಡಿದ ಗ್ರಾಮದ ಅವರು ಸುಮಾರು ಮೂರು ಮುಡಿ ಗದ್ದೆ ಅಂದರೆ ಸುಮಾರು ಎರಡೂವರೆ ಎಕರೆ ಗದ್ದೆಯನ್ನು ಬಿಟ್ಟುಕೊಟ್ಟದ್ದು ಅಲ್ಲದೆ ಸ್ವತಃ ಗದ್ದೆಗಿಳಿದು ನೇಜಿ ನಾಟಿ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ದೇವಳದ ಉತ್ಸವಕ್ಕೆ ಬಳಸುವ ಅಕ್ಕಿ ತಯಾರಿಸಲು ತಮ್ಮ ಬೇಸಾಯದ ಗದ್ದೆಯನ್ನು ಬಿಟ್ಟುಕೊಟ್ಟಿದ್ದು ಇದೀಗ ಸಾಕಷ್ಟು ಸುದ್ದಿಯಾಗಿದೆ.

ಗ್ರಾಮದ ಅತೀ ಪ್ರಾಚೀನ ದೇವಾಲಯವಾಗಿರುವ ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಮುಂದಿನ ವರ್ಷದ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ಮಾಡಲು ದೇವಳದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ. ಉತ್ಸವದ ಸಮಯದಲ್ಲಿ ಅನ್ನ ಸಂತರ್ಪಣೆಗೆ ಬೇಕಾದ ಅಕ್ಕಿಯನ್ನು ಸ್ವತಃ ಈ ಪರಿಸರದ ಗದ್ದೆಯಿಂದಲೇ ಬೆಳೆಸಬೇಕು ಎಂಬ ಜೀರ್ಣೋದ್ಧಾರ ಸಮಿತಿಯ ಚಿಂತನೆಗೆ ಸ್ಥಳೀಯರಾದ ವೆಂಕಪ್ಪ ನಾಯ್ಕ ಎಂಬವರು ಮೊದಲಿಗೆ ತಮ್ಮ ಹಡೀಲು ಬಿದ್ದ ಗದ್ದೆಯನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಅದರಂತೆ ಸಮಿತಿಯವರು ಗದ್ದೆ ಕೃಷಿಗೆ ಮುಂದಾದರು. ಬಳಿಕ ಹೆಚ್ಚು ಗದ್ದೆ ಬೇಸಾಯದ ಅಗತ್ಯತೆಯ ಬಗ್ಗೆ ಅರಿತ ಮಜಲುಗದ್ದೆ ಪರಿಸರದ ಮೂವರು ತಮ್ಮ ಗದ್ದೆಯನ್ನು ಈ ಬಾರಿಯ ಬೆಳೆಗಾಗಿ ದೇವಳಕ್ಕೆ ಬಿಟ್ಟು ಕೊಡಲು ಮುಂದಾಗಿದ್ದಾರೆ.

Leave a Comment

Your email address will not be published. Required fields are marked *