ಮಂಗಳೂರು: ಮಹಿಳೆ ಮತ್ತು ಮಗುವಿದ್ದ ಕಾರಿನ ಟಯರ್ ಪಂಕ್ಚರ್ ಆಗಿದ್ದು, ಇದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ಬೇರೆ ಟಯರ್ ಅಳವಡಿಸಿ ಮಾನವೀಯತೆ ಮೆರೆದಿದ್ದಾರೆ.
ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುವ ಸಂದರ್ಭ ಪಂಪ್ವೆಲ್ ಬಳಿ ಟಯರ್ ಪಂಕ್ಚರ್ ಆಗಿತ್ತು. ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟಯರನ್ನು ಬದಲಿಸಿ ಮಾನವೀಯತೆ ಮೆರೆದರು.
ಈ ಸಂದರ್ಭ ನಾಗುರಿ ಸಂಚಾರಿ ಠಾಣೆ ಎಎಸ್ ಐ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾಡ್೯ ಆಸೀಫ್ ಇದ್ದರು.