Ad Widget .

ರಾಜ್ಯ ರಾಜಕೀಯದಲ್ಲಿ ‌ಧರ್ಮಯುದ್ಧ: ಎಲ್ಲ ತೊರೆದವರಿಗೇಕೆ ಈ ಆಸೆ?

Ad Widget . Ad Widget .

Ad Widget . Ad Widget .

ಬೆಂಗಳೂರು: ರಾಜ್ಯ‌ ರಾಜಕಾರಣದಲ್ಲಿ ಕ್ಷಣಕ್ಕೊಂದು ವಿದ್ಯಾಮಾನಗಳು ಘಟಿಸುತ್ತಿದ್ದು, ರಾಜಕಾರಣದ ಅಖಾಡಕ್ಕೆ ಈ ಧರ್ಮಗುರುಗಳ‌ ಎಂಟ್ರಿಯಾಗಿದೆ.
‘ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ’ ಎಂಬ ಹೆಸರಿನಲ್ಲಿ
ಬಾಳೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಸಾವಿರಕ್ಕೂ ಅಧಿಕ ಮಠಾಧೀಶರು ಸಮಾವೇಶಕ್ಕೆ ಆಗಮಿಸಿದ್ದು, ಯಡಿಯೂರಪ್ಪರವರನ್ನು ಹುದ್ದೆಯಿಂದ ‌ಕೆಳಗಿಳಿಸುವುದರ ಕುರಿತು ಚರ್ಚೆ ನಡೆಸಲಾಗುತ್ತಿದೆ ಎನ್ನುವುದು ಕೇಳಿ ಬಂದಿದೆ.

‘ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ’ ಎಂದು ಯಡಿಯೂರಪ್ಪ ಹೇಳಿಕೆಯನ್ನು ನೀಡಿದ್ದಾರೆ.

ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆಯೂ ಇದೀಗ ಮಠಾಧೀಶರು ಸಮಾವೇಶ ನಡೆಸುವ ಮೂಲಕ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ರಾಜಕೀಯ ಅಖಾಡಕ್ಕೆ ಎಂಟ್ರಿಯಾಗಿರುವ ಸ್ವಾಮೀಜಿಗಳ ಆವೇಶ ನೋಡಿ ಜನ ಎಲ್ಲಾ ಬಿಟ್ಟು ಮಠ ಸೇರಿದವರು ಇದೇಕೆ ಹೀಗ್ ಮಾಡ್ತಿದಾರೆ ಎಂದು ಕೇಳುತ್ತಿದ್ದಾರೆ.

Leave a Comment

Your email address will not be published. Required fields are marked *