Ad Widget .

ಶಾಲೆ ಯಾವಾಗ ಓಪನ್ ಮಾಡ್ತೀರಿ? ಇಲ್ಲದಿದ್ದರೆ ನಾವೇ ಶಾಲೆ ಓಪನ್ ಮಾಡ್ಕೋತೀವಿ. ಸರ್ಕಾರಕ್ಕೆ ರುಪ್ಸಾ ಟಕ್ಕರ್! ಆ.2ರಿಂದ ಶಾಲೆ ತೆರೆಯುವ ಎಚ್ಚರಿಕೆ.

Ad Widget . Ad Widget .

Ad Widget . Ad Widget .

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಲಾಕ್​ಡೌನ್​ ಕೂಡ ಸಡಿಲವಾಗಿದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಕೂಡ ಯಶಸ್ವಿಯಾಗಿದ್ದು, ಈಗಿರುವ ಬೇಡಿಕೆ ಶಾಲೆ ಆರಂಭ ಯಾವಾಗ ಎನ್ನೋದು. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿದ್ದು, ಶಾಲೆ ಆರಂಭಿಸುವ ಬಗ್ಗೆ ಯೋಜನೆ ಸಿದ್ಧಪಡಿಸುತ್ತಿದೆ. ಆದರೆ ಈ ವಿಚಾರವಾಗಿ ಖಾಸಗಿ ಶಾಲೆಗಳ ಒಕ್ಕೂಟ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸರ್ಕಾರ ಶಾಲೆ ಆರಂಭಿಸದೇ ಹೋದರೆ ಅಗಸ್ಟ್ 2 ರಿಂದ ಖಾಸಗಿ ಶಾಲೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿವೆ.

ಶೇ.80 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಲದೇ, ಶಾಲೆ ಆರಂಭಕ್ಕೆ ICMC, ದೇವಿಶೆಟ್ಟಿ ವರದಿ ಹಾಗೂ ಟಾಸ್ಕ್ ಫೋರ್ಸ್ ಸಭೆ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಜುಲೈ 30 ರ ಒಳಗೆ ಶಾಲೆ ಆರಂಭ ಮಾಡಬೇಕು. ಇಲ್ಲವಾದಲ್ಲಿ ನಾವೇ ಶಾಲೆ ಆರಂಭಿಸುವುದಕ್ಕೆ ಮುಂದಾಗುತ್ತೇವೆ ಎಂದು ರುಪ್ಸಾ (ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ) ಅಧ್ಯಕ್ಷ ಹಾಲನೂರು ಲೇಪಾಕ್ಷಿ ತಿಳಿಸಿದ್ದಾರೆ.

ಬೇರೆ ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಇನ್ನು ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ಹೀಗಾಗಿ ನಾವು ಕೂಡ ಆಗಸ್ಟ್ 2 ರಿಂದ ಶಾಲೆ ಆರಂಭಿಸುತ್ತೇವೆ ಎಂದು ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಕಾರಣ ಬಂದ್ ಆಗಿದ್ದ ಶಾಲೆಗಳನ್ನು ಪುನಾರಂಭಿಸುವಂತೆ ಸರ್ಕಾರಕ್ಕೆ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಒತ್ತಾಯಿಸಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಹಾಲನೂರು ಎಸ್.ಲೇಪಾಕ್ಷಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಶೇ.80 ಬಜೆಟ್ ಶಾಲೆಗಳು, 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಾಳೆಯಿಂದ ಆನ್​ಲೈನ್ ಮೂಲಕ ತರಗತಿಗಳು ಶುರುವಾಗುತ್ತಿದೆ. ಇದು ಒಳ್ಳೆಯ ವಿಚಾರ. ಆದರೆ ಶಾಲೆ ಆರಂಭದ ಬಗ್ಗೆ ಸರ್ಕಾರ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾಗಮ ಅಥವಾ ಪಾಳಿ ರೂಪದಲ್ಲಿ ಶಾಲೆ ಆರಂಭಕ್ಕೆ ಒತ್ತಾಯಿಸಿದ ರುಪ್ಸಾ ಸಂಘಟನೆ, ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದೆ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

Leave a Comment

Your email address will not be published. Required fields are marked *