Ad Widget .

ಲವರ್ ಜೊತೆ ಹೆಂಡತಿ ಪರಾರಿ : ಹುಡುಕಿ ಮದುವೆ ಮಾಡಿಸಿದ ಗಂಡ | ಪ್ರೀತಿ ಮಧುರ, ತ್ಯಾಗ ಅಮರ…!

Ad Widget . Ad Widget .

ಜಾರ್ಖಂಡ್‍: ಮದುವೆಯಾದ 17 ದಿನದಲ್ಲಿ ಹೆಂಡತಿ ಆಕೆಯ ಹಳೆ ಪ್ರಿಯಕರನ ಜೊತೆ ಪರಾರಿಯಾಗಿದ್ದು, ಬಳಿಕ ಗಂಡ ಅವರಿಬ್ಬರನ್ನು ಹುಡುಕಿ ಮದುವೆ ಮಾಡಿಸಿದ ಘಟನೆ ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ.

Ad Widget . Ad Widget .

ಯಾವ ಹುಡುಗನಿಗೆ ಯಾವ ಹುಡುಗಿ ಎಂದು ಮೊದಲೇ ದೇವರು ನಿರ್ಧರಿಸಿರುತ್ತಾನೆ. ಏನೇ ಆದರೂ ಅದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳುವ ಹಿರಿಯರ ವಾಕ್ಯಕ್ಕೂ ಈ ಘಟನೆ ಕನ್ನಡಿಯಂತಿದೆ.

ಇಬ್ಬರು ಕುಟುಂಬದವರ ಸಮ್ಮುಖದಲ್ಲಿ ಹುಡುಗ, ಹುಡುಗಿಗೆ ಮದುವೆ ಮಾಡಲಾಗಿತ್ತು. ಆದರೆ ವಧು ಮದುವೆಯಾದ 17 ದಿನಗಳ ಬಳಿಕ ಗಂಡನ ಮನೆಬಿಟ್ಟು ಹೋಗಿದ್ದಾಳೆ. ಆಗ ಗಂಡನ ಮನೆಯವರು ಆಕೆಯನ್ನು ಹುಡುಕಿದ್ದಾರೆ. ಹುಡುಗಿಯ ಮನೆಯ ಕಡೆಗೂ ವಿಷಯ ಮುಟ್ಟಿಸಿದ್ದಾರೆ. ನಂತರ ಹುಡುಗಿಯ ಮನೆಯವರು ಆಕೆ ಪ್ರೀತಿಸುತ್ತಿದ್ದ ಹುಡುಗನ ಮನೆಗೆ ವಿಚಾರಿಸಲು ಹೋದಾಗ ಆಕೆ ಅಲ್ಲಿಯೇ ಇರುವುದು ಇಬ್ಬರು ಕುಟುಂಬಸ್ಥರಿಗೆ ತಿಳಿದಿದೆ.

ನಂತರ ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ವೇಳೆ ಆಕೆಯ ಗಂಡ ಮಾಡಿದ್ದ ಕಾರ್ಯ ಮಾತ್ರ ಎಲ್ಲರನ್ನು ಅಚ್ಚರಿಗೊಳಿಸಿತ್ತು. ಮದುವೆಯಾದ ಹುಡುಗಿಯು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಇವಳ ಪ್ರೀತಿಯನ್ನು ನಿರಾಕರಿಸಿದ ಕುಟುಂಬದವರು ಬೇರೆ ಹುಡುಗನನ್ನು ನೋಡಿ ವಿವಾಹ ಮಾಡಿದ್ದರು. ಆದರೂ ಪ್ರೀತಿಯನ್ನು ಮರೆಯದ ಆಕೆ ಆತನೊಂದಿಗೆ ಫೋನ್‍ನಲ್ಲಿ ಸಂಪರ್ಕದಲ್ಲಿದ್ದಳು. ನಂತರ ಮನೆಬಿಟ್ಟು ಹೋಗಿದ್ದಾಳೆ. ಇವಳು ಓಡಿಹೋಗಿರುವುದನ್ನು ಅರಿತ ಪತಿ ಹಾಗೂ ಎರಡು ಕುಟುಂಬದವರು ಆಕೆ ಪ್ರಿಯಕರನೊಟ್ಟಿಗೆ ಬದುಕಲು ಸಮ್ಮತಿ ಸೂಚಿಸಿದ್ದಾರೆ.

ಈ ಬಗ್ಗೆ ಮಾತಾಡುವ ಪ್ರಿಯಕರ, ನಮ್ಮಿಬ್ಬರ ಪ್ರಿತಿಯ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿದಿತ್ತು. ಹಾಗಾಗಿ ಬೇರೆ ಹುಡುಗನೊಟ್ಟಿಗೆ ವಿವಾಹ ಮಾಡಿದ್ದರು ಎಂದು ತಿಳಿಸಿದ್ದಾನೆ. ಜುಲೈ 20 ರಂದು ಮಹಿಳೆ ಮತ್ತು ಆಕೆಯ ಪ್ರೇಮಿ ಇಬ್ಬರನ್ನೂ ರತು ಬ್ಲಾಕ್ ಪೊಲೀಸ್ ಪ್ರಧಾನ ಕಚೇರಿಗೆ ಕರೆಸಲಾಯಿತು. ಪತ್ನಿಯು ಆಕೆಯ ಪ್ರೇಮಿಯೊಂದಿಗೆ ಇರಲು ಸಹಿ ಮಾಡಿ ಒಪ್ಪಿಗೆಯನ್ನು ನೀಡಿದ ಒಪ್ಪಂದದ ಕಾಗದವನ್ನು ಸಿದ್ಧಪಡಿಸಲಾಯಿತು. ಅದೇ ಸಮಯದಲ್ಲಿ, ಪ್ರೇಮಿ ಸಹ ಒಪ್ಪಂದಕ್ಕೆ ಸಹಿ ಹಾಕಿದನು ಮತ್ತು ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದನು.

ಪ್ರೀತಿ ಮಧುರ, ತ್ಯಾಗ ಅಮರ, ಪ್ರೀತಿ.. ಪ್ರೀತಿಸುವ ಹೃದಯಗಳು ದೂರವಾಗಬಾರದು ಎಂಬುದನ್ನು ಅರಿತಿದ್ದ ಗಂಡ ತನ್ನ ಪತ್ನಿಯನ್ನು ಪ್ರಿಯಕರನಿಗೆ ಬಿಟ್ಟುಕೊಟ್ಟಿದ್ದಾನೆ.

Leave a Comment

Your email address will not be published. Required fields are marked *