ಇಂಗ್ಲೆಂಡ್: ಬ್ರಿಟನ್ ಸೇರಿದಂತೆ ಇಲ್ಲಿನ ವಿವಿಧೆಡೆ ತಾಪಮಾನ ಹೆಚ್ಚಾಗುತ್ತಿದ್ದು, ಜನರು ಕೂಲ್ ಡ್ರಿಂಕ್ಸ್, ಸಮುದ್ರಸ್ನಾನದ ಮೊರೆ ಹೋಗುತ್ತಿದ್ದಾರೆ. ತಾಪಮಾನ ಏರಿಕೆಯಿಂದ ಜನರು ಹೊರಗಡೆ ಹೆಜ್ಜೆ ಇಡಲು ಹಿಂದೆಮುಂದೆ ನೋಡುತ್ತಿದ್ದಾರೆ. ಜನ ಅಗತ್ಯ ವಸ್ತುಗಳನ್ನು ಕೊಳ್ಳಲು ಪೇಟೆಗೆ ಬರುವಾಗ ಪರ್ಸ್ ತರದೇ ಕೈಯಲ್ಲಿ ಹಣ ತಗೊಂಡು ಬರುತ್ತಿದ್ದು, ಇದರಿಂದ ಅಂಗಡಿ ಮಾಲಿಕರಿಗೆ ಸಮಸ್ಯೆ ಎದುರಾಗಿದೆ. ಬಿಸಿಲಿಗೂ ಅಂಗಡಿಯವರಿಗೂ ಏನು ಸಂಬಂಧ, ಸಮಸ್ಯೆ ಏನು ಅಂತೀರಾ? ಮುಂದೆ ಓದಿ…
ಹೀಗೆ ಪರ್ಸ್ ತರದೇ ಅಂಗಡಿಗೆ ಬರುವ ಮಹಿಳೆಯರು ಮತ್ತು ಪುರುಷರು ಕೈಯಲ್ಲಿ ಅಥವಾ ಬ್ರಾದಲ್ಲಿ ಹಣ ಇಟ್ಕೊಂಡು ಬರುತ್ತಾರೆ. ಬಿಸಿಲಿನ ತಾಪಕ್ಕೆ ದೇಹ ಬೆವರುವ ಕಾರಣ ಹಣ ಒದ್ದೆಯಾಗುತ್ತದೆ. ಹೇಳಿ ಕೇಳಿ ಕೊರೊನಾ ಹಾವಳಿ ಬೇರೆ. ಈ ಒದ್ದೆಯಾಗಿರುವ ಹಣವನ್ನು ತಗೊಳ್ಳೋದು ಹೇಗೆ ಎಂಬ ಚಿಂತೆ ಅಂಗಡಿ ಮಾಲೀಕರದ್ದು. ತಲೆಕೆಡಿಸಿಕೊಂಡ ಅಂಗಡಿ ಮಾಲೀಕನೋರ್ವ ಅಂಗಡಿ ಎದುರು ಬ್ರಾದಲ್ಲಿ ಇಟ್ಟ ಹಣ ತಗೊಳ್ಳಲ್ಲ ಎಂದು ಬೋರ್ಡ್ ಹಾಕಿದ್ದು, ಈ ಫೋಟೋ ವೈರಲ್ ಆಗಿದೆ.
ನಾವು ಹಣವನ್ನು ಸ್ವೀಕರಿಸುವುದಿಲ್ಲ, ಅದರಲ್ಲೂ ಗ್ರಾಹಕರ ‘ಬ್ರಾ’ದೊಳಗೆ ಇರುವ ಹಣವನ್ನು ನಾವು ಪಡೆಯುವುದಿಲ್ಲ ಎಂದು ಬರೆದಿದ್ದಾರೆ. ಮೈಕೆಲ್ ಫ್ಲಿನ್ ಒಡೆತನದ ಮ್ಯಾಟ್ರೆಸ್ ಮಿಕ್ ಹಾಕಿದ ನೋಟಿಸ್ ವೈರಲ್ ಆಗಿದೆ. ಬ್ರಾ ಒಳಗಿರುವ ಬೆವರಿದ ಹಣವನ್ನು ಪಾವತಿಸಬೇಡಿ ಎಂದು ಗ್ರಾಹಕರನ್ನು ಕೇಳಿಕೊಂಡಿದ್ದಾರೆ.
ಹೆಚ್ಚುತ್ತಿರುವ ತಾಪಮಾನ ಮತ್ತು ನಮ್ಮ ವೈಯಕ್ತಿಕ ಸುರಕ್ಷತೆಗಾಗಿ, ನಾವು ಬ್ರಾದೊಳಗಿನ ಹಣವನ್ನು ಸ್ವೀಕರಿಸುವುದಿಲ್ಲ. ಯಾವುದೇ ಅನಾನುಕೂಲತೆಗಾಗಿ ಕ್ಷಮಿಸಿ.” ಎಂದು ಬರೆದಿದ್ದು, ಸುಮಾರು 100 ಮಂದಿ ಇದನ್ನು ಶೇರ್ ಮಾಡಿದ್ದು, ಕಮೆಂಟ್ ಮಾಡಿದ್ದಾರೆ. ಸಾಕಷ್ಟು ಮಂದಿ ಇವರ ಮನವಿಯನ್ನು ಒಪ್ಪಿದ್ದಾರೆ. ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಸುರಕ್ಷತೆ ದೃಷ್ಟಿಯಿಂದ ಹಾಕಿದ ಫೋಟೋ ಇದೀಗ ಎಲ್ಲರಿಗೂ ಹಾಸ್ಯಾಸ್ಪದವಾಗಿ ಕಾಣುತ್ತಿದೆ.