Ad Widget .

ಆ್ಯಪ್ ಮೂಲಕ ಮಹಿಳೆಯರ ಜೊತೆ ಸಲುಗೆ ಬೆಳೆಸಿ ಕಾಮದಾಟ| ಮೀಸೆ ಮೂಡದ ಈತನ ಚಳಿ ಬಿಡಿಸಿದ ಪೊಲೀಸರು|

Ad Widget . Ad Widget .

ನವದೆಹಲಿ : ಮೊಬೈಲ್ ಆಯಪ್​ನ ಮೂಲಕ ಮಹಿಳೆಯರ ಪರಿಚಯ ಬೆಳೆಸಿ, ಬೆತ್ತಲೆ ಚಿತ್ರ -ವಿಡಿಯೋಗಳನ್ನು ತರಿಸಿಕೊಂಡು ಬ್ಲಾಕ್​​ಮೇಲ್​ ಮಾಡುತ್ತಿದ್ದ ಯುವಕನೊಬ್ಬನು ದೆಹಲಿ ಪೊಲೀಸರ ವಶವಾಗಿದ್ದಾನೆ. ಖಿನ್ನತೆಯ ಸಮಸ್ಯೆ ಇರುವ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನು ಈತ ತನ್ನ ಕಾಮದಾಹಕ್ಕೆ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ.

Ad Widget . Ad Widget .

ಇಂಡೋನೇಷಿಯಾದ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ದೆಹಲಿ ನಿವಾಸಿ, 21 ವರ್ಷ ವಯಸ್ಸಿನ ಆರೋಪಿ ಜತಿನ್​ ಭಾರದ್ವಾಜ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು, ಮಾನಸಿಕ ಸಮಸ್ಯೆಯುಳ್ಳವರಿಗೆ ಬೆಂಬಲ ಒದಗಿಸುವ ವೇದಿಕೆ ಎನ್ನಲಾದ ‘ಟಾಕ್​ ಲೈಫ್’ ಮೊಬೈಲ್ ಆ್ಯಪ್​ಅನ್ನು ಬಳಸಿಕೊಂಡು, ದಕ್ಷಿಣ ಏಷಿಯಾ ದೇಶಗಳ ಮಹಿಳೆಯರನ್ನು ಆನ್​ಲೈನ್​ ಪರಿಚಯ ಮಾಡಿಕೊಳ್ಳುತ್ತಿದ್ದ.
ಅವರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಚಿತ್ರಗಳನ್ನು, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದ. ನಂತರ ಅವನ್ನು ಲೀಕ್ ಮಾಡುವುದಾಗಿ ಬೆದರಿಸಿ ಇನ್ನಷ್ಟು ಸಾಮಗ್ರಿ ಕಳುಹಿಸಲು ಬಲವಂತ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿಯು 15 ಮಹಿಳೆಯರನ್ನು ಈ ರೀತಿ ಪುಸಲಾಯಿಸಿದ್ದು, ಮೂವರಿಂದ ಬೆತ್ತಲೆ ಚಿತ್ರಗಳು ಮತ್ತು ವಿಡಿಯೋಗಳನ್ನು ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಡಿಸಿಪಿ ಆರ್​.ಸತ್ಯಸುಂದರಂ ಹೇಳಿದ್ದಾರೆ. ಅಶ್ಲೀಲ ಸಾಮಗ್ರಿಯಿದ್ದ ಆರೋಪಿಯ ಮೊಬೈಲ್​ ಫೋನನ್ನು ವಶಪಡಿಸಿಕೊಂಡಿರುವ ಪೊಲೀಸರು, ಈ ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *