Ad Widget .

ಬ್ಲೂ ಪಿಲಂ ನೇರಪ್ರಸಾರಕ್ಕೆ ಪ್ಲಾನ್ ಮಾಡಿದ್ರಾ ಕುಂದ್ರಾ…!? | ರಾಜ್’ನ ದಿನದ ಆದಾಯ ಬರೋಬ್ಬರಿ 7 ಲಕ್ಷ | ಬಗೆದಷ್ಟೂ ಹೊರಬರ್ತಿದೆ ಭಯಾನಕ ಸತ್ಯ

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್‌ ಕುಂದ್ರಾ ಕುರಿತಂತೆ ಬಗೆದಷ್ಟೂ ಭಯಾನಕ ಮಾಹಿತಿಗಳು ಹೊರಬರುತ್ತಿವೆ.

Ad Widget . Ad Widget .

ಹಲವಾರು ಸಂಸ್ಥೆ ಹೆಸರಿನಲ್ಲಿ ಬ್ಲೂ ಫಿಲ್ಮ್‌ ತಯಾರಿಸಿ ಹೊರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ರಾಜ್‌ ಕುಂದ್ರಾ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅದರ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲು ತಯಾರಿ ನಡೆಸಿರುವ ಮಾಹಿತಿ ಮತ್ತು ಆತ ಬರೀ ಅಶ್ಲೀಲ ವಿಡಿಯೋ ಮಾರಾಟ ಮಾಡಿ ದಿನಕ್ಕೆ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿದಿದೆ. ಅಷ್ಟರಲ್ಲಿಯೇ ಅವರು ಬಂಧನಕ್ಕೆ ಒಳಗಾಗಿದ್ದಾರೆ.

Ad Widget . Ad Widget .

ಮತ್ತೊಂದು ಸ್ಪೋಟಕ ಮಾಹಿತಿ ಪ್ರಕಾರ ತನ್ನ ಮೇಲೆ ಪೊಲೀಸರಿಗೆ ಅನುಮಾನ ಮೂಡುತ್ತಲೇ ಅವರು ತಮ್ಮನ್ನು ಬಂಧಿಸಬಾರದು ಎಂಬ ಕಾರಣಕ್ಕೆ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ 25 ಲಕ್ಷ ರೂ.ಲಂಚ ನೀಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.

ಅಮೆರಿಕ ಮೂಲದ ಕಂಪೆನಿಯ ಒಡೆಯ, ಬ್ಲೂ ಫಿಲ್ಮ್‌ ಪ್ರಕರಣದ ಆರೋಪಿ ಅರವಿಂದ ಶ್ರೀವಾಸ್ತವ ಅಲಿಯಾಸ್ ರಾಶ್ ಠಾಕೂರ್ ಹಾಗೂ ಪೊಲೀಸ್ ನಡುವೆ ಹಣ ವರ್ಗಾವಣೆ ಆಗಿರುವ ಕುರಿತು ಮಾರ್ಚ್‌ನಲ್ಲಿಯೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಇಮೇಲ್ ಮೂಲಕ ದೂರು ಬಂದಿತ್ತು. ಈ ಮೇಲ್ ನಲ್ಲಿ ಲಂಚದ ಕುರಿತಾದ ವಾಟ್ಸಪ್ ಸ್ಕ್ರೀನ್ ಶಾಟ್‌ಗಳಿದ್ದವು ಎನ್ನಲಾಗಿದೆ. ಆದರೆ ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಂಬೈ ಪೊಲೀಸ್ ಅಧಿಕೃತ ವಕ್ತಾರ ಡಿಸಿಪಿ ಚೈತನ್ಯ ಎಸ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *