Ad Widget .

ಚಹಾರ್ ಪರಾಕ್ರಮ, ಭಾರತಕ್ಕೆ ಸರಣಿ ಕೈವಶ

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

Ad Widget . Ad Widget .

ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ದೀಪಕ್ ಚಾಹರ್ (ಅಜೇಯ 69 ರನ್ ಹಾಗೂ 2 ವಿಕೆಟ್) ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

Ad Widget . Ad Widget .

ಸೂರ್ಯಕುಮಾರ್ ಯಾದವ್ (53), ಮನೀಶ್ ಪಾಂಡೆ (37), ಕೃಣಾಲ್ ಪಾಂಡ್ಯ (35) ಹಾಗೂ ಭುವನೇಶ್ವರ್ ಕುಮಾರ್ (19*) ಉಪಯುಕ್ತ ನೆರವು ನೀಡಿದ್ದರು. ಈ ಮೊದಲು ಬೌಲಿಂಗ್‌ನಲ್ಲಿ ಭುವಿ ಹಾಗೂ ಯಜುವೇಂದ್ರ ಚಾಹಲ್ ತಲಾ ಮೂರು ವಿಕೆಟ್‌ ಕಬಳಿಸಿದ್ದರು.
276 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 18 ಓವರ್‌ಗಳಲ್ಲೇ 116 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಅಲ್ಲದೆ 35.1 ಓವರ್‌ಗಳಲ್ಲಿ 193 ರನ್ನಿಗೆ ಏಳು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಗೂಡಿದ ಚಾಹರ್ ಹಾಗೂ ಭುವಿ ಮುರಿಯದ ಎಂಟನೇ ವಿಕೆಟ್‌ಗೆ 84 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿ ತಂಡಕ್ಕೆ ಸ್ಮರಣೀಯ ಗೆಲುವು ಒದಗಿಸಿಕೊಟ್ಟರು.

Leave a Comment

Your email address will not be published. Required fields are marked *