Ad Widget .

ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೆ ಸಂಭ್ರಮ | ಪರಸ್ಪರ ಸಿಹಿ ಹಂಚಿಕೊಂಡ ಇಂಡೋ-ಪಾಕ್ ಯೋಧರು

ನವದೆಹಲಿ: ಭಾರತ ಪಾಕಿಸ್ತಾನ ನಡುವಿನ ಗಡಿಯಲ್ಲಿ ಇಂದು ಎರಡೂ ದೇಶಗಳ ಯೋಧರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಮೂಲಕ ಎರಡು ರಾಷ್ಟ್ರಗಳ ಯೋಧರು ಬ್ರಾತೃತ್ವ ಸಾರುವ ಈದ್ ಮಿಲಾದ್ ಹಬ್ಬವನ್ನು ಆಚರಿಸಿದ್ದಾರೆ.

Ad Widget . Ad Widget .

ಎರಡು ವರ್ಷಗಳ ಹಿಂದೆಯೂ ಈ ರೀತಿಯ ಸಂಭ್ರಮ ಗಡಿಯಲ್ಲಿ ಕಂಡು ಬರುತ್ತಿತ್ತು. ಭಾರತದ ಸ್ವಾತಂತ್ರ್ಯ ದಿನಾಚರಣೆ, ಪಾಕಿಸ್ತಾನ ದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ದೀಪಾವಳಿ, ಈದ್ ಇತ್ಯಾದಿ ಹಬ್ಬಗಳ ಸಂದರ್ಭದಲ್ಲಿ ಗಡಿಯಲ್ಲಿ ಯೋಧರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಆದರೆ 2019 ರ ಬಳಿಕ ಪುಲ್ವಾಮ ದಾಳಿ ಮತ್ತು ಜಮ್ಮು ಕಾಶ್ಮೀರ ದ 370 ನೇ ವಿಧಿ ರದ್ದುಗೊಂಡ ಬಳಿಕ ಉಭಯ ರಾಷ್ಟ್ರಗಳ ನಡುವೆ ವೈರತ್ವ ಹೆಚ್ಚಾಗಿ ಸಿಹಿ ಹಂಚಿಕೊಳ್ಳುವ ಸಂಪ್ರದಾಯ ಮುರಿದುಕೊಂಡಿತ್ತು.

Ad Widget . Ad Widget .

ಇದೀಗ ಎರಡು ವರ್ಷಗಳ ಬಳಿಕ ಇಂದು ಮತ್ತೆ ಸಿಹಿ ಹಂಚಿ ಪರಸ್ಪರ ಖುಷಿ ಹಂಚಿಕೊಳ್ಳುವ ಮೂಲಕ ಗಡಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಭಾರತ, ಜಮ್ಮು-ಕಾಶ್ಮೀರ ದಿಂದ ಪಂಜಾಬ್ ರಾಜಸ್ಥಾನ್ ಮೂಲಕ ಗುಜರಾತ್ ವರೆಗೆ ಪಾಕಿಸ್ಥಾನದೊಂದಿಗೆ ಬರೋಬ್ಬರಿ 2,290 ಕಿಮೀ ಉದ್ದದ ಗಡಿ ಹೊಂದಿದೆ. ಇದರುದ್ದಕ್ಕೂ ಇಂದು ಅಲ್ಲಲ್ಲಿ ದೇಶದ ಗಡಿ ಕಾಯುವ ಭಾರತದ ಬಿಎಸ್ಎಫ್ ಮತ್ತು ಪಾಕಿಸ್ಥಾನ್ ರಂಜರ್ಸ್ ಯೋಧರ ನಡುವೆ ಪರಸ್ಪರ ಸಿಹಿ ವಿನಿಮಯ ನಡೆದಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *