Ad Widget .

ಪುತ್ತೂರು: ಕಾರಿನಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧನ

ಪುತ್ತೂರು : ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ದಲ್ಲಿ ನಡೆದಿದೆ. ಕೃತ್ಯ ಎಸಗಿದವನನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ರುಕ್ಮಯ್ಯ ಮಡಿವಾಳ (42) ಎಂದು ಗುರುತಿಸಲಾಗಿದೆ.

Ad Widget . Ad Widget .

ಮನೆಯಲ್ಲಿ ಯಾರೂ ಇರದ ಸಂದರ್ಭದಲ್ಲಿ ರುಕ್ಮಯ್ಯ ಮಡಿವಾಳ ಕಾರಿನಲ್ಲಿ ಬಂದು 16 ವರ್ಷದ ಬಾಲಕಿಯನ್ನು ಕಾರಿನಲ್ಲಿ ಬರಬೇಕು ಎಂದು ಬಲವಂತ ಮಾಡಿದ್ದಾನೆ. ಬಾಲಕಿ ಒಪ್ಪದಿದ್ದಾಗ ಕೊನೆಗೆ ಬೆದರಿಸಿ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಹಿಂಸೆ ನೀಡಲು ಯತ್ನಿಸಿದ್ದಾನೆ. ಬಾಲಕಿ ಜೋರಾಗಿ ಕಿರುಚಿದಾಗ ಆತ ಜೀವ ಬೆದರಿಕೆ ನೀಡಿ ಮನೆಗೆ ಕರೆದು ತಂದು ಬಿಟ್ಟಿದ್ದಾನೆ. ಈ ವಿಚಾರವನ್ನು ಮನೆಯವರಿಗೆ ಹೇಳಿದರೆ ಕೊಂದು ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಪ್ರಕರಣ ಬಗ್ಗೆ ಬಾಲಕಿಯ ತಂದೆ ನೀಡಿದ ದೂರಿನ ಮೇಲೆ ಉಪ್ಪಿನಂಗಡಿ ಠಾಣೆ ಪೊಲೀಸ್ ರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ

Ad Widget . Ad Widget .

Leave a Comment

Your email address will not be published. Required fields are marked *