Ad Widget .

ಪಿಯುಸಿ ಫಲಿತಾಂಶ ಪ್ರಕಟ: ಎಲ್ಲಾ ವಿದ್ಯಾರ್ಥಿಗಳು ಪಾಸ್

ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದರೆ. ದಕ್ಷಿಣ ಕನ್ನಡದ 445 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದು ಈ ಮೂಲಕ ದ.ಕ. ಪ್ರಥಮ ಸ್ಥಾನ ಗಳಿಸಿದೆ.

Ad Widget . Ad Widget .

ಬೆಂಗಳೂರು ದಕ್ಷಿಣವೂ ದ್ವಿತೀಯ ಸ್ಥಾನದಲ್ಲಿದ್ದು, 302 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಲಭಿಸಿದೆ. 2ನೇ ಪಿಯು ಫಲಿತಾಂಶದಲ್ಲಿ ಬೆಂಗಳೂರು ಉತ್ತರ 3ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಉತ್ತರದ 261 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ದೊರಕಿದೆ. ಇನ್ನು ಕೃಷ್ಣ ನಗರಿ ಉಡುಪಿ ಜಿಲ್ಲೆಯ 149 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ದೊರಕಿದ್ದು, ಹಾಸನ 5 ನೇ ಸ್ಥಾನದಲ್ಲಿದೆ.

Ad Widget . Ad Widget .

ಇನ್ನು ಈ ಬಾರಿ 450706 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 147055 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 68729 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಲ್ಲಿ ನಿಮ್ಮ ಫಲಿತಾಂಶವನ್ನು ನೋಡಬಹುದು https://karresults.nic.in/indexpuc_2021.asp

Leave a Comment

Your email address will not be published. Required fields are marked *