ಕಾಸರಗೋಡು: ಪತಿಯಿಂದ ಪತ್ನಿಯ ಕೊಲೆ

ಕಾಸರಗೋಡು: ಪತಿಯ ಹೊಡೆತದಿಂದ ಪತ್ನಿ ಮೃತಪಟ್ಟ ದಾರುಣ ಘಟನೆ ಬೇಡಡ್ಕದಲ್ಲಿ ಜು.19ರ ಸೋಮವಾರ ರಾತ್ರಿ ನಡೆದಿದೆ. ಬೇಡಡ್ಕ ಕೊರತ್ತಿಕುಂಡು ಕಾಲನಿಯ ಸ್ಮಿತಾ (23) ಮೃತಪಟ್ಟವರು. ಕೊಲೆ ಮಾಡಿದವನನ್ನು ಆಕೆಯ ಪತಿ ಅರುಣ್ ಎಂದು ಗುರುತಿಸಲಾಗಿದೆ.

Ad Widget ... ..

ಈತ ಸೋಮವಾರ ರಾತ್ರಿ ಪತ್ನಿಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜೋರಾದ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದು ಗಾಯಗೊಂಡಿದ್ದ ಸ್ಮಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ.

Ad Widget

ಅರುಣ್ ಕುಮಾರ್ ನನ್ನು ಬೇಡಡ್ಕ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು , ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಮಿತಾಳ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Leave a Comment

Your email address will not be published. Required fields are marked *