ಬೆಂಗಳೂರು: ರಾಜ್ಯದಲ್ಲಿ ನಾಳೆ ದ್ವಿತೀಯ ಪಿಯುಸಿ ಫಲಿತಾಂಶ (Second PUC Results 2021) ಪ್ರಕಟವಾಗುತ್ತದೆ. ಸಂಜೆ 4.30ಕ್ಕೆ ಸುಮಾರಿಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಎಸ್ಎಸ್ಎಲ್ಸಿ ಫಲಿತಾಂಶ ಮತ್ತು ಪ್ರಥಮ ಪಿಯುಸಿ ಫಲಿತಾಂಶವನ್ನು ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶವನ್ನು ನೀಡಲಾಗುತ್ತದೆ. ಗ್ರೇಡ್ ಬದಲಿಗೆ ಅಂಕಗಳ ಆಧಾರದಲ್ಲಿ ನಾಳೆ ಫಲಿತಾಂಶ ಹೊರಬೀಳಲಿದೆ.
ಫಲಿತಾಂಶ ನೋಡುವುದು ಹೇಗೆ?
ಫಲಿತಾಂಶ ನೀಡಲು ಪಿಯು ಬೋರ್ಡ್ ಮುಂದೆ ಸವಾಲೊಂದು ಎದುರಾಗಿದ್ದು, ನೋಂದಣಿ ಸಂಖ್ಯೆ ಇಲ್ಲದೇ ಫಲಿತಾಂಶ ನೋಡುವುದು ಹೇಗೆ ಎಂಬ ಗೊಂದಲ ಬಗೆಹರಿಸಲು ಪಿಯು ಬೋರ್ಡ್ ಸ್ಪಷ್ಟನೆ ನೀಡಿದೆ.
ಪ್ರತಿ ವರ್ಷ ಪರೀಕ್ಷೆಗೆ ಕೊಟ್ಟ ನೋಂದಣಿ ಸಂಖ್ಯೆ ಮೇಲೆ ಫಲಿತಾಂಶ ಸಿಗುತ್ತಿತ್ತು. ಈ ಬಾರಿ ಪರೀಕ್ಷೆಯಾಗದೆ ರಿಜಿಸ್ಟರ್ ನಂಬರ್ ಸಿಕ್ಕಿಲ್ಲ. ಹೀಗಾಗಿ, ಫಲಿತಾಂಶ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್ ನಂಬರ್ ಜನರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. Know my number ಆಯ್ಕೆಯನ್ನು ಪಿಯು ವೆಬ್ಸೈಟ್ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು.
ವಿದ್ಯಾರ್ಥಿಗಳಿಗೆ ಎಸ್‌ಎಂಸ್ ಮೂಲಕ ತಿಳಿಸುವುದರೊಂದಿಗೆ ಆಯಾ ಕಾಲೇಜಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ. ಫಲಿತಾಂಶ ಮುನ್ನ ತಮ್ಮ ರಿಜಿಸ್ಟರ್ ನಂಬರನ್ನು ವಿದ್ಯಾರ್ಥಿಗಳು ಖಚಿತಪಡಿಸಿಕೊಳ್ಳಬೇಕು. ಜನರೇಟ್ ಆದ ರಿಜಿಸ್ಟರ್ ನಂಬರ್ ಅನ್ನು ಚೆಕ್ ಮಾಡಿ ಖಚಿತಪಡಿಸಿಕೊಳ್ಳಬೇಕು. ಆನಂತರ ಜು.20ರಂದು ವೆಬ್ಸೈಟ್ ಮೂಲಕ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದೆ.