ಯುವಕನ ಪ್ರಾಣ ಬಲಿ ಪಡೆದ ನವಿಲು

ಉಡುಪಿ: ದ್ವಿಚಕ್ರ ವಾಹನವೊಂದಕ್ಕೆ ನವಿಲು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ನವಿಲು ಮೃತಪಟ್ಟಿರುವ ಘಟನೆ ಕಾಪು ತಾಲೂಕಿನ ಎರ್ಮಾಳ್ ನಲ್ಲಿ ನಡೆದಿದೆ. ಬೆಳಪು ಗ್ರಾಮದ ಅಬ್ದುಲ್ಲಾ (25) ಮೃತ‌ ದುರ್ದೈವಿ.

Ad Widget ... ..

ಪಡುಬಿದ್ರೆಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದ ಈತ ಇಂದು ರಾ.ಹೆ 66 ರ ಎರ್ಮಾಳ್ ಬಳಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದಾಗ ನವಿಲೊಂದು ಢಿಕ್ಕಿಯಾಗಿದೆ.
ನವಿಲು ಡಿಕ್ಕಿಯಾದ ರಭಸಕ್ಕೆ ರಸ್ತೆಯ ಡಿವೈಡರ್ ಗೆ ಸ್ಕೂಟಿ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

Ad Widget

ಈ ವೇಳೆ ಸ್ಕೂಟಿ ಚಲಾಯಿಸುತ್ತಿದ್ದ ಅಬ್ದುಲ್ಲಾ ಬೆಳಪು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ನವಿಲು ಕೂಡಾ ಮೃತಪಟ್ಟಿದೆ.‌ ಪಡುಬಿದ್ರೆ ಸರಕಾರಿ ಆಸ್ಪತ್ರೆಯಲ್ಲಿ ಮೃತ ಅಬ್ದುಲ್ಲಾ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಾರೀಸುದಾರರಿಗೆ ಶವ ವರ್ಗಾಯಿಸಲಾಗಿದೆ.

Leave a Comment

Your email address will not be published. Required fields are marked *