Ad Widget .

ಕ್ಯಾಡ್ ಬರಿ ಚಾಕೋಲೇಟ್ ನಲ್ಲಿ ದನದ ಮಾಂಸ ಬಳಕೆ!? ಭಾರತದಲ್ಲಿ ಅಗ್ರ ಮಾರುಕಟ್ಟೆ ಹೊಂದಿರುವ ಕಂಪನಿ ಏನ್ ಹೇಳ್ತು ಗೊತ್ತಾ?

Cadbury Chocolate ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರ ಫೇವರೆಟ್​​​ ಚಾಕ್​ಲೇಟ್​​. ಬಾಯಿ ಸಿಹಿ ಮಾಡೋಣ ಎಂಬ ಜಾಹೀರಾತು ಕಂಡೊಡನೆ ತಿನ್ನಬೇಕು ಅನಿಸದೆ ಇರಲ್ಲ. ಬಾಯಲ್ಲಿ ಇಟ್ಟೊಡನೆ ಕರಗುವ ಚಾಕ್​​ಲೇಟ್​​​ಗೆ ಎಲ್ಲಿಲ್ಲದ ಬೇಡಿಕೆ. ಮಾರುಕಟ್ಟೆಯಲ್ಲಿ ಎಷ್ಟೇ ಬ್ರ್ಯಾಂಡ್​ಗಳ ಚಾಕ್​ಲೇಟ್​ ಬಂದರೂ ಕ್ಯಾಡ್​ಬರಿ ಡೈರಿ ಮಿಲ್ಕ್​​ ಡಿಮ್ಯಾಂಡ್​ ಎಂದಿಗೂ ಕುಗ್ಗಿಲ್ಲ. ಇನ್ನು ಪ್ರಪೋಸ್ ಮಾಡಲು ಕ್ಯಾಡ್​​ಬರಿ ಚಾಕ್​​ಲೇಟ್ ಗಳೇ ಬೇಕು. ಹುಡುಗಿಯರು ಸೇರಿದಂತೆ ಈ ರಸವತ್ತಾದ ಕಪ್ಪುಸುಂದರಿಗೆ ಮರುಳಾಗದವರು ಯಾರೂ ಇಲ್ಲವೇ ಇಲ್ಲ. ಆದರೆ ಇತ್ತೀಚಿನ ಈ ಚಾಕಲೇಟ್ ಉತ್ಪಾದನೆಯಲ್ಲಿ ದನದ ಮಾಂಸ ಬಳಕೆಯಾಗುತ್ತದೆ ಎಂಬ ಸಂದೇಶಗಳು ಜಾಲತಾಣಗಳಲ್ಲಿ ಹರಿದಾಡ್ತಿವೆ. ಈ ಬಗ್ಗೆ ಕಂಪನಿ ಹೇಳೋದು ಹೀಗೆ….

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಾವೆಲ್ಲಾ ತಿನ್ನುತ್ತಿರುವ ಕ್ಯಾಡ್​ಬರಿ ತಯಾರಿಕೆಯಲ್ಲಿ ದನದ ಮಾಂಸ ಬಳಸಲಾಗುತ್ತಿದೆ. ಇದು ಹಿಂದೂಗಳ ಭಾವನೆಗೆ ಧಕ್ಕೆ ತರುವ ವಿಚಾರ. ಹೀಗಾಗಿ ಭಾರತದಲ್ಲಿ ಕ್ಯಾಡ್​ಬರಿ ಚಾಕ್​ಲೇಟ್​ಗಳನ್ನು ಬ್ಯಾನ್​​ ಮಾಡಬೇಕು ಎಂದು boycottCadburyChocolate ಹ್ಯಾಷ್​​ಟ್ಯಾಗ್​ನಲ್ಲಿ ಅಭಿಯಾನ ಶುರುವಾಗಿತ್ತು. ಕ್ಯಾಡ್​ಬರಿಯಲ್ಲಿ ದನಸ ಮಾಂಸ ಬಳಸುತ್ತಿದ್ದಾರೆ ಎಂದು ವೆಬ್​ಸೈಟ್​ವೊಂದರಲ್ಲಿ ವರದಿ ಪ್ರಕಟವಾಗಿತ್ತು.

Ad Widget . Ad Widget . Ad Widget .

ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಎಚ್ಚೆತ್ತುಕೊಂಡ ಕ್ಯಾಡ್​ಬರಿ ಕಂಪನಿ ಸ್ಪಷ್ಟನೆ ನೀಡಿದೆ. ಹೌದು ಕ್ಯಾಡ್​ಬರಿ ಚಾಕ್​ಲೇಟ್​ನಲ್ಲಿ ದನದ ಮಾಂಸ ಬಳಸಲಾಗಿದೆ. ಆದರೆ ಭಾರತದಲ್ಲಿ ನಾವು ಮಾರಾಟ ಮಾಡುತ್ತಿರುವ ಎಲ್ಲಾ ಚಾಕ್​ಲೇಟ್​ಗಳು ಶೇ.100ರಷ್ಟು ಶುದ್ಧ ಸಸ್ಯಹಾರಿ. ದನದ ಮಾಂಸ ಬಳಸಿ ಮಾಡಿರುವ ಚಾಕ್​ಲೇಟ್​ಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿಲ್ಲ. ಆಸ್ಟ್ರೇಲಿಯಾ ಸೇರಿದಂತೆ ಕೆಲ ವಿದೇಶಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಭಾರತದ ಕ್ಯಾಡ್​ಬರಿ ಕಂಪನಿ ಟ್ವೀಟ್​ ಮೂಲಕ ತಿಳಿಸಿದೆ.

ಭಾರತದಲ್ಲಿ ಬಿಕರಿಯಾಗುವ ಎಲ್ಲಾ ವಿಧದ ಚಾಕೊಲೇಟ್ ನಲ್ಲೂ ಹಸಿರು ಗುರುತಿದೆ. ಹೀಗಿದ್ದರೆ ಅದು‌ ಸಂಪೂರ್ಣ ಸಸ್ಯಾಹಾರಿ. ಕೆಂಪು ಗುರುತಿರುವ ಚಾಕೊಲೇಟ್ ‌ಮಾತ್ರ ಮಾಂಸಹಾರಿ. ಆದ್ದರಿಂದ ಭಾರತದ ಜನರಿಗೆ ನಾವು ಮೋಸ ಮಾಡಿಲ್ಲ. ಇದರಲ್ಲಿ ಅನುಮಾನ ಬೇಡ ಎಂದು ಕಂಪನಿ ತಿಳಿಸಿದೆ.

Leave a Comment

Your email address will not be published. Required fields are marked *