ಬೆಳ್ತಂಗಡಿ | ಏಕಾಏಕಿ ಅಂಗಡಿಗೆ ನುಗ್ಗಿದ ಕಾರು | ತಪ್ಪಿದ ಅನಾಹುತ |ಪೋಷಕರೇ ಮಕ್ಕಳನ್ನು ವಾಹನದಲ್ಲಿ ಬಿಟ್ಟು ಹೋಗುವಾಗ ಇರಲಿ ಎಚ್ಚರ

ಬೆಳ್ತಂಗಡಿ: ಅಂಗಡಿಯ ಮುಂದೆ ನಿಲ್ಲಿಸಿದ್ದ ಓಮ್ನಿಯೊಂದು ಏಕಾಏಕಿ ಮುಂದೆ ಇದ್ದ ಅಂಗಡಿಗೆ ಅಪ್ಪಳಿಸಿದ ಘಟನೆ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

Ad Widget ... ..

ಉಜಿರೆಯ ಶಾರ್ವರಿ ಕಾಂಪ್ಲೆಕ್ಸ್ ಮುಂಭಾಗ ಓಮ್ನಿ ನಿಲ್ಲಿಸಿ ಚಾಲಕ ಹೊರಹೋಗಿದ್ದಾನೆ. ಜೊತೆಗೆ ಮಗುವನ್ನು ಕರೆದೊಯ್ಯದೆ ವಾಹನದೊಳಗೆ ಬಿಟ್ಟು ತೆರಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಓಮ್ನಿ ಸಡನ್ ಮುಂದೆ ಚಲಿಸಿದೆ. ಮುಂದೆ ಇದ್ದ ತರಕಾರಿ ಅಂಗಡಿಗೆ ಅಪ್ಪಳಿಸಿದೆ.

Ad Widget

ಅದೇ ಜಾಗದಲ್ಲಿ ಇಬ್ಬರು ಹುಡುಗಿಯರು ನಿಂತಿದ್ದರು. ಆದರೆ ಚಾಲಕನಿಲ್ಲದೆ ವಾಹನ ತಮ್ಮೆಡೆಗೆ ಬರುತ್ತಿರುವುದನ್ನು ಕಂಡು ಅವರು ಪಕ್ಕಕ್ಕೆ ಸರಿದಿದ್ದಾರೆ. ಆದ್ದರಿಂದ ಅದೃಷ್ಟವಶಾತ್ ಅಪಾಯವೇನು ಸಂಭವಿಸಿಲ್ಲ. ಈ ಘಟನೆಯ ದೃಶ್ಯ ಪಕ್ಕದ ಅಂಗಡಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಚಾಲಕ ವಾಹನದ ಕೀ ಯನ್ನು ಅಲ್ಲೇ ಬಿಟ್ಟು ಹ್ಯಾಂಡ್ ಬ್ರೇಕ್ ಹಾಕದೆ ಹೊರಹೋಗಿದ್ದರು ಎನ್ನಲಾಗಿದೆ. ಆದರೆ ಕಾರು ಚಾಲಕನ ಅಜಾಗರೂಕತೆಯಿಂದ ಚಲಿಸಿತೆ ಅಥವಾ ಆಕಸ್ಮಿಕವಾಗಿ ಚಲಿಸಿತೇ ಎಂದು ದೃಢಪಟ್ಟಿಲ್ಲ.

Leave a Comment

Your email address will not be published. Required fields are marked *