Ad Widget .

ಇಶಾನ್, ಪೃಥ್ವಿ ಶಾ ಅಬ್ಬರ, ಶ್ರೀಲಂಕಾ ತತ್ತರ|ಶುಭಾರಂಭ ಮಾಡಿದ ಭಾರತ|

ಕೊಲಂಬೋ: ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ- ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಗೆಲುವು ಸಾಧಿಸಿದೆ.
ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್, ಪೃಥ್ವಿ ಶಾ ದಿಟ್ಟ ಆರಂಭ, ಶಿಖರ್ ಧವನ್ ನಾಯಕತ್ವದ ಆಟಕ್ಕೆ ಶ್ರೀಲಂಕಾ ತಲೆ ಬಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ಭರ್ಜರಿ ವಿಕೆಟ್ ಗೆಲುವು ಕಂಡಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ

Ad Widget . Ad Widget .

ಶ್ರೀಲಂಕಾ ನೀಡಿದ 263 ಟಾರ್ಗೆಟ್ ಚೇಸ್ ಮಾಡಿದ ಭಾರತ ಯಾವ ಹಂತದಲ್ಲೂ ಆತಂಕ ಎದುರಿಸಲಿಲ್ಲ. ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಪೃಥ್ವಿ ಶಾ 43 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ಜೋಡಿ 58 ರನ್ ಸಿಡಿಸಿತು.

Ad Widget . Ad Widget .

ಶಿಖರ್ ಧವನ್ ಹಾೂ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕಿಶನ್ ಕೇವಲ 33 ಎಸೆತದಲ್ಲಿ ಹಾಫ್ ಸೆಂಚರಿ ಸಿಡಿಸಿ ಮಿಂಚಿದರು. ಇಶಾನ್ ಕಿಶನ್ 42 ಎಸೆತದಲ್ಲಿ 59 ರನ್ ಸಿಡಿಸಿ ಔಟಾದರು.
ಇತ್ತ ಮನೀಶ್ ಪಾಂಡೆ 26 ರನ್ ಸಿಡಿಸಿ ನಿರಾಸೆ ಅನುಭವಿಸಿದರು.

ಸೂರ್ಯಕುಮಾರ್ ಜೊತೆ ಸೇರಿದ ಧವನ್ ಬ್ಯಾಟಿಂಗ್ ಮುಂದುವರಿಸಿದರು. ಧವನ್ ಅಜೇಯ 86 ರನ್ ಸಿಡಿಸಿದರೆ, ಸೂರ್ಯಕುಮಾರ್ ಅಜೇಯ 31 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು ಗೆಲುವು ಕಂಡಿತು. 7 ವಿಕೆಟ್ ಭರ್ಜರಿ ಗೆಲುವು ಕಂಡ ಟೀಂ ಇಂಡಿಯಾ ಸರಣಿಯಲ್ಲಿ 1- 0 ಮುನ್ನಡೆ ಸಾಧಿಸಿದೆ.

Leave a Comment

Your email address will not be published. Required fields are marked *