Ad Widget .

ಉಳ್ಳಾಲ: ಹುಡುಗಿ ಸ್ನಾನ ಮಾಡುತ್ತಿದ್ದಾಗ ಕೈಚಳಕ ಪ್ರದರ್ಶಿಸಿದ ವಿಕೃತ ಕಾಮಿ | ಕಿಟಕಿ ಮೂಲಕ ವಿಡಿಯೋ ಮಾಡಿ ಯುವಕ ಪರಾರಿ

ಮಂಗಳೂರು: ಯುವತಿ ಸ್ನಾನ ಮಾಡುತ್ತಿದ್ದಾಗ ಯುವಕನೊಬ್ಬ ಬಾತ್ರೂಮ್ ಕಿಟಕಿಯಿಂದ ವಿಡಿಯೋ ಚಿತ್ರೀಕರಿಸಿದ ಘಟನೆ ನಿನ್ನೆ ನಗರ ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ಈ ಬಗ್ಗೆ ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Ad Widget . Ad Widget .

ಕೋಟೆಕಾರು ಸಮೀಪದ ಮಾಡೂರು ನಿವಾಸಿ ಯುವತಿಯೊಬ್ಬಳು ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಬಳಿಕ ಎಂದಿನಂತೆ ಮನೆಯ ಪಕ್ಕದ ಸ್ನಾನಗೃಹಕ್ಕೆ ಸ್ನಾನಕ್ಕೆ ತೆರಳಿದ್ದಾರೆ. ಯುವತಿ ಸ್ನಾನಕ್ಕೆ ತೆರಳುವ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಕಾಮಿ, ಯುವತಿ ಒಳಹೊಕ್ಕುತ್ತಿದ್ದಂತೆ ತನ್ನ ಕೈಚಳಕ ಪ್ರದರ್ಶಿಸಿದ್ದಾನೆ.

Ad Widget . Ad Widget .

ಯುವತಿ ಬಾತ್ರೂಮ್ ಒಳಗೆ ಹೋದ ಕೂಡಲೇ, ಸ್ಟೂಲ್ ಒಂದರ ಸಹಾಯದಿಂದ ಯುವಕ ಕಿಟಕಿಯ ಪಕ್ಕದಲ್ಲೆ ಮೇಲೇರಿ, ಕಿಟಕಿಯ ಮೂಲಕ ತನ್ನ ಮೊಬೈಲ್ ಒಳಗೆ ಬಿಟ್ಟಿದ್ದಾನೆ. ನಂತರ ಸ್ನಾನ ಮುಗಿಯುವ ವರೆಗೆ ಅಲ್ಲೇ ಕಾದುಕುಳಿತಿದ್ದಾನೆ. ಸ್ನಾನ ಮುಗಿಸಿದ ಯುವತಿ ಟವಲ್ ತೆಗೆಯಲು ನೋಡಿದಾಗ ಮೊಬೈಲ್ ನ ಬೆಳಕು ಗೋಚರಿಸಿದೆ. ತಕ್ಷಣ ಆಕೆ ಬೊಬ್ಬಿಟ್ಟಿದ್ದಾಳೆ. ಮನೆಯವರು ಹೊರಬರುವ ಹೊತ್ತಿಗೆ ಕಿಲಾಡಿ ಯುವಕ ತನ್ನ ಮೊಬೈಲ್ ಹಿಡಿದುಕೊಂಡು ಪರಾರಿಯಾಗಿದ್ದಾನೆ.

ಈ ಬಗ್ಗೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕೃತ ಕಾಮಿಯ ಹುಡುಕಾಟ ಆರಂಭಿಸಿದ್ದಾರೆ. ಯುವತಿ ನಿತ್ಯವೂ ಸ್ನಾನ ಮಾಡುವ ಸಮಯ ಗೊತ್ತಿದ್ದ ಯುವಕನೇ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Leave a Comment

Your email address will not be published. Required fields are marked *