Ad Widget .

ಫೀಸ್ ಕಟ್ಟಲಿಲ್ಲ ಎಂದು SSLC ಪರೀಕ್ಷೆಗೆ ಅವಕಾಶ ಕಲ್ಪಿಸದ ಆಳ್ವಾಸ್ | ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಿಕ್ಷಣ ಸಚಿವರು

ತುಮಕೂರು: ಫೀಸ್ ಕಟ್ಟಲಿಲ್ಲ ಎಂಬ ಕಾರಣಕ್ಕೆ SSLC ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

Ad Widget . Ad Widget .

ಕಳೆದ ಬಾರಿಯ ಶಾಲಾ ಮತ್ತು ಹಾಸ್ಟೆಲ್ ಇತ್ಯಾದಿ ಶುಲ್ಕಗಳನ್ನು ಪಾವತಿಸಿಲ್ಲ ಎಂದು, ಮೂಡಬಿದಿರೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಆಳ್ವಾಸ್, ತನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಈ ವರ್ಷ SSLC ಪರೀಕ್ಷೆಗೆ ಅವಕಾಶ ಕಲ್ಪಿಸಲು ನಿರಾಕರಿಸಿತ್ತು. ಹಣದ ಕೊರತೆ ಇರುವುದರಿಂದ ಪರೀಕ್ಷೆಯ ಬಳಿಕ ಬಾಕಿ ಶುಲ್ಕ ಪಾವತಿಸುವುದಾಗಿ ಮನವಿ ಮಾಡಿಕೊಂಡರೂ ಸಂಸ್ಥೆ ಇದಕ್ಕೊಪ್ಪಿರಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿನಿ ದೀಕ್ಷಾ ನಾಯಕ್ ಜಿಲ್ಲೆಯ ಕೊರಟಗೆರೆಯ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸರಿಯಾದ ಸಮಯಕ್ಕೆ ಪೋಷಕರು ಗಮನಿಸಿದ ಕಾರಣ ಪ್ರಾಣಪಾಯವೇನೂ ಸಂಭವಿಸಿರಲಿಲ್ಲ.

Ad Widget . Ad Widget .

ಈ ಸುದ್ದಿ ರಾಜ್ಯಾದ್ಯಂತ ಬಿತ್ತರವಾಗಿತ್ತು. ಸರಕಾರದ ಗಮನಕ್ಕೂ ಬಂದಿತ್ತು. ಈ ಹಿನ್ನಲೆಯಲ್ಲಿ ಶಿಕ್ಷಣಸಚಿವ ಸುರೇಶ್ ಕುಮಾರ್ ಇಂದು ವಿದ್ಯಾರ್ಥಿನಿ ಮನೆಗೆ ಶಿಕ್ಷಣಾಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಈ ಬಾರಿಯೇ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಇಲಾಖೆ ವತಿಯಿಂದ ಮಾಡುವುದಾಗಿ ಭರವಸೆ ನೀಡಿದ್ದಾರೆ.

Leave a Comment

Your email address will not be published. Required fields are marked *