Ad Widget .

ಸುಳ್ಯ: ನೆರೆಮನೆಯವನ ಕಾರಲ್ಲಿ ಪತ್ನಿಯನ್ನು ತವರು ಮನೆಗೆ ಕರೆದೊಯ್ದ| ಅದೇ ಕಾರು ಮಾರಿ ಅರಗಿಣಿ ಜೊತೆಗೆ ಎಸ್ಕೇಪ್ ಆದ| ಹೀಗೊಬ್ಬ ಮಹಾಕಳ್ಳ…!

ಸುಳ್ಯ: ಇಲ್ಲಿನ ಜಟ್ಟಿಪಳ್ಳ ಬೊಳಿಯಮಜಲು ಎಂಬಲ್ಲಿ ವಾಸವಿದ್ದ ಅಶ್ರಫ್ ಯಾನೆ ಅಪ್ಪಿ ಎಂಬಾತ ಪತ್ನಿಯನ್ನು ತವರು ಮನೆಗೆ ಬಿಟ್ಟು ಬರಲೆಂದು ಪಕ್ಕದ ಮನೆಯ ಕಾರು ಪಡೆದುಕೊಂಡು ಹೋಗಿ ಅದೇ ಕಾರನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ, ಮುಂಬೈಗೆ ಹುಡುಗಿಯೊಂದಿಗೆ ಪಲಾಯನಗೈದ ಘಟನೆ ನಡೆದಿದೆ.

Ad Widget . Ad Widget .

ಅಶ್ರಪ್ ವಾಸವಿದ್ದ ಮನೆಯ ಪಕ್ಕದ ಬಾಡಿಗೆ ರೂಂನಲ್ಲಿ ವಾಸವಿದ್ದ ಕಲಂದರ್ ಎಂಬವರ ಕಾರನ್ನು ಅಶ್ರಫ್ ಯಾನೆ ಅಪ್ಪಿ ತನ್ನ ಪತ್ನಿಯನ್ನು ವಿರಾಜಪೇಟೆಯಲ್ಲಿರುವ ಆಕೆಯ ತವರು ಮನೆಗೆ ಬಿಡಲೆಂದು ಪಡೆದುಕೊಂಡು ಹೋಗಿದ್ದಾನೆ. ಆತ ಹಿಂತಿರುಗಿ ಬಾರದಿದ್ದಾಗ ಕಲಂದರ್ ಅಶ್ರಫ್‌ಗೆ ಫೋನಾಯಿಸಿದ್ದು ಈ ವೇಳೆ ರಾತ್ರಿ 10 ಗಂಟೆಗೆ ಬರುತ್ತೇನೆ ಎಂದು ಅಶ್ರಪ್ ತಿಳಿಸಿದನೆನ್ನಲಾಗಿದೆ.
ಎಷ್ಟು ಹೊತ್ತು ಕಾದರೂ ಕಾರು ವಾಪಸ್ ಬರಲಿಲ್ಲವೆಂದು ಅಶ್ರಫ್‌ನ ಮೊಬೈಲ್‌ಗೆ ಕರೆಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಬೆಳಿಗ್ಗೆ ಕಲಂದರ್ ಕಾರು ಹುಡುಕಲು ಅಶ್ರಫ್‌ನ ತಂದೆ ಹನೀಫ್‌ರೊಂದಿಗೆ ವಿರಾಜಪೇಟೆ ತೆರಳಿದರು ಅಲ್ಲಿ ಕಾರು ಮತ್ತು ಅಶ್ರಫ್ ಇರಲಿಲ್ಲ. ಅಶ್ರಫ್ ಸುಳ್ಯಕ್ಕೆ ವಾಪಸಾಗಿರುವುದಾಗಿ ಮನೆಯವರು ತಿಳಿಸಿದ್ದರಿಂದ ಬರಿಗೈಯಲ್ಲಿ ವಾಪಸಾದರು. ನಂತರ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.

Ad Widget . Ad Widget .

ಅದೇ ದಿನ ಸಂಜೆ ಬೆಂಗಳೂರಿನಿಂದ ಸಯ್ಯದ್ ಯಾಸಿಮ್ ಎಂಬವರು ಕಲಂದರ್‌ರ ಮೊಬೈಲ್ ಫೋನ್‌ಗೆ ಕರೆ ಮಾಡಿ, “ಕಾರಿನ ಆರ್.ಸಿ. ಮಾಲಕ ನೀವಾ? ಈ ಕಾರನ್ನು ನಮಗೆ 40 ಸಾವಿರಕ್ಕೆ ಅಶ್ರಫ್ ಮಾರಾಟ ಮಾಡಿದ್ದಾರೆ’ ಎಂದು ಹೇಳಿದರು. ವಿಷಯವನ್ನು ಸುಳ್ಯದ ಪೊಲೀಸರ ಮೂಲಕ ಬೆಂಗಳೂರಿನ ಪೊಲೀಸರಿಗೆ ತಿಳಿಸಿ, ಹಿಂದೆ ಸುಳ್ಯದಲ್ಲಿದ್ದ ಈಗ ಬೆಂಗಳೂರಲ್ಲಿರುವ ಎಸ್.ಐ.ಮಂಜುನಾಥರ ಮೂಲಕ ಕಾರ್ಯಾಚರಣೆ ನಡೆಸಿ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಶ್ರಫ್ ಇದು ತನ್ನ ಮಾವನ ಕಾರೆಂದು ಹೇಳಿ ಸಯ್ಯದ್ ಯಾಸಿಂರವರಿಂದ 10 ಸಾವಿರ ರೂ.ಪಡೆದುಕೊಂಡು ಕಾರು ನೀಡಿ ಹೋಗಿದ್ದಾನೆಂದು ತಿಳಿದು ಬಂದಿದೆ.

ಅಶ್ರಫ್‌ನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು ತುಮಕೂರು ಮೂಲದ ಮತ್ತೊಬ್ಬಳು ಯುವತಿಯೊಂದಿಗೆ ರೈಲಿನಲ್ಲಿ ಮುಂಬಯಿಗೆ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಈ ಮಹಾಕಳ್ಳನನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದು, ತನಿಖೆ ನಡೆಯುತ್ತಿದೆ.

Leave a Comment

Your email address will not be published. Required fields are marked *