Ad Widget .

ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಸುಪ್ರೀಮ್ ಕೋರ್ಟ್

ನವದೆಹಲಿ: ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾಟ್ಸಪ್ ಸಂದೇಶಗಳನ್ನು ಯಾವುದೇ ಕಾರಣಕ್ಕೂ ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

Ad Widget . Ad Widget .

2016 ರ ಡಿಸೆಂಬರ್ ನಲ್ಲಿ ನಡೆದ ಎರಡು ವ್ಯಾಪಾರಿ ಕಂಪನಿಗಳ ನಡುವಿನ ಒಪ್ಪಂದದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ವ್ಯಾಪಾರ ಒಪ್ಪಂದಗಳಲ್ಲಿ ವಾಟ್ಸಪ್ ಮೆಸೇಜ್ ಗಳನ್ನು ಸಾಕ್ಷಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟಿಸ್ ಎನ್ ವಿ ರಮಣ, ಜಸ್ಟಿಸ್ ಎ ಎಸ್ ಬೋಪಣ್ಣ ಮತ್ತು ಋಷಿಕೇಶ್ ರಾಯ್ ಅವರುಗಳ ಪೀಠ ಹೇಳಿದೆ.

Ad Widget . Ad Widget .

ಇಂದಿನ ಕಾಲದಲ್ಲಿ ವಾಟ್ಸಪ್ ಸಂದೇಶಗಳನ್ನು ಬೇಕಾದ ರೀತಿಯಲ್ಲಿ ಎಡಿಟ್ ಮಾಡಲಾಗುತ್ತದೆ. ಹೇಗೆ ಬೇಕಾದರೂ ತಿರುಚಲಾಗುತ್ತದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ.ದಕ್ಷಿಣ ದಿಲ್ಲಿಯ ಮುನ್ಸಿಪಾಲ್ ಕಾರ್ಪೋರೇಶನ್ ಮತ್ತು ಕೆಲವು ಕಂಪನಿಗಳ ನಡುವೆ, ನಾಗರದ ವಾಯುಮಾಲಿನ್ಯ ತೆಗೆಯುವ ಬಗ್ಗೆ ಒಪ್ಪಂದ ನಡೆದಿತ್ತು. ನಂತರ ಒಂದು ಕಂಪನಿಗೆ ಮಾತ್ರ ಬಿಲ್ ಪಾವತಿಸಲಾಗಿದೆ. ಇದಕ್ಕೆ ವಾಟ್ಸಾಪ್ ಸಂದೇಶದ ಸಾಕ್ಷಿಯಿದೆ ಎಂದು ಕಂಪನಿಯೊಂದು ಕಲ್ಕತ್ತಾ ಹೈ ಕೋರ್ಟ್ನಲ್ಲಿ ವಾದಿಸಿತ್ತು. ವಿಚಾರಣೆ ಬಳಿಕ ಕೋರ್ಟ್ ಸಂದೇಶ ನಕಲಿ ಎಂದಿತ್ತು. ಬಳಿಕ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ, ವಾಟ್ಸಪ್ ಸಂದೇಶಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗದು ಎಂದಿದೆ.

Leave a Comment

Your email address will not be published. Required fields are marked *