ಮಧ್ಯಪ್ರದೇಶ: ಇಲ್ಲಿನ ವಿದಿಶಾ ಜಿಲ್ಲೆಯಲ್ಲಿ ಗುರುವಾರ ಸಂಜೆ ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸುವ ವೇಳೆ 40 ಮಂದಿ ಬಾವಿಯೊಳಗೆ ಬಿದ್ದ ಘಟನೆ ನಡೆದಿದೆ. ಗುರುವಾರ ಸಂಜೆ ಆಟವಾಡುತ್ತಿದ್ದಾಗ ಬಾಲಕಿ ಒಬ್ಬಳು ಬಾವಿಗೆ ಬಿದಿದ್ದಾಳೆ. ವಿಷಯ ತಿಳಿದು ಹಲವಾರು ಜನರು ಬಾವಿಗೆ ಬಳಿ ತೆರೆಳಿದ್ದರು. ಈ ವೇಳೆ ಈ ಅನಾಹುತ ಸಂಭವಿಸಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ 19 ಜನರನ್ನು ರಕ್ಷಿಸಲಾಗಿದೆ, ಒಟ್ಟು 40 ಜನರು ಬಾವಿಯಲ್ಲಿ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾವಿಯಿಂದ ಮೇಲೆತ್ತಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾವಿಯಿಂದ ನೀರನ್ನು ಹೊರಹಾಕಲಾಗುತ್ತಿದೆ ಎಂದು ವಿದಿಷಾ ಗಾರ್ಡಿಯನ್ ಸಚಿವ ವಿಶ್ವಸ್ ಸಾರಂಗ್ ಹೇಳಿದರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನಿರ್ದೇಶನದ ನಂತರ ಘಟನಾ ಸ್ಥಳಕ್ಕೆ ಧಾವಿಸಿದ ಸಚಿವರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಪ್ರಕಾರ, ಬಾವಿ ಸುಮಾರು 50 ಅಡಿ ಆಳದಲ್ಲಿದ್ದು, ನೀರಿನ ಮಟ್ಟ ಸುಮಾರು 20 ಅಡಿಗಳಲ್ಲಿದೆ.ಮೃತರು ಮತ್ತು ಗಾಯಗೊಂಡವರು ಸೇರಿ 40 ಜನರಿದ್ದಾರೆ. ಇವರೆಲ್ಲಾ ಬಾಲಕಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವ ರಕ್ಷಕರನ್ನು ವೀಕ್ಷಿಸಲು ನೆರೆದಿದ್ದರು, ಮತ್ತು ಅವರಿಗೆ ನೆರವಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉನ್ನತ ತನಿಖೆಗೆ ಸಿಎಂ ಆದೇಶಿಸಿದ್ದಾರೆ.