Ad Widget .

ಪುತ್ತೂರು: ಮಾಜಿ ಪ್ರಿಯಕರ ಕಳಿಸಿದ ಬೆಡ್ ರೂಂ ವಿಡಿಯೋದಿಂದ ಒಡೆದ ಸಂಸಾರ | ಅಂದು ಸುಖ ಪಡೆದವಳಿಂದ ಈಗ ಅತ್ಯಾಚಾರದ ದೂರು…!

ಪುತ್ತೂರು: ಮಾಜಿ ಪ್ರಿಯಕರನೋರ್ವ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಹಳೆಯ ವೀಡಿಯೊವೊಂದನ್ನು ಆಕೆಯ ಪತಿಯ ಮೊಬೈಲ್ ಫೋನ್ ಗೆ ರವಾನಿಸಿದ್ದಾನೆ. ವೀಡಿಯೋ ನೋಡಿದ ಪತಿ ವಿಚ್ಛೇದನಕ್ಕೆ ಮುಂದಾದಾಗ ಯುವತಿ ಅದು ಅತ್ಯಾಚಾರವೆಂದು ಯೂ ಟರ್ನ ಹೊಡೆದ ಪ್ರಕರಣಯೊಂದು ಪುತ್ತೂರಿನಲ್ಲಿ ನಡೆದಿದೆ.

Ad Widget . Ad Widget .

ಪುತ್ತೂರು ತಾಲೂಕಿನ ವಿಜೇಶ್ ಹಾಗೂ ಸುಬ್ರಹ್ಮಣ್ಯದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ಉತ್ಕಟಕ್ಕೆ ಏರಿದ್ದು ಪರಿಣಾಮ ದೈಹಿಕ ಸಂಪರ್ಕ ನಡೆಸಿದ್ದಾರೆ. ಹಾಗಾಗಿ 2016ರ ನವೆಂಬರ್‌ನಲ್ಲಿ ಆಕೆ ಪುತ್ತೂರಿನ ದರ್ಬೆಯಲ್ಲಿ ಕೆಲಸ ಮಾಡುತ್ತಿದ್ದು, ಒಂದು ದಿನ ಚಹಾ ಕುಡಿಯಲು ಆಕೆಯನ್ನು ವಿಜೇಶ್ ಹೊಟೇಲ್ ಗೆ ಕರೆದಿದ್ದಾನೆ. ತಕ್ಷಣ ಆಕೆ ಕೂಡ ಬಂದಿದ್ದಾಳೆ.

Ad Widget . Ad Widget .

ಅದರೆ ಪ್ರಿಯಕರ ವಿಜೇಶ್ ಚಹಾ ಕುಡಿಯಲು ಹೊಟೇಲ್ ಗೆ ಕರೆದೊಯ್ಯದೆ, ಆಕೆಯನ್ನು ಕಾರಿನಲ್ಲಿ ನೇರವಾಗಿ ಸುರತ್ಕಲ್ ಬಳಿಯ ರೆಡ್ ರಾಕ್ ಲಾಡ್ಜ್ ಗೆ ಕರೆತಂದು ಅಲ್ಲಿ ಯುವತಿಯ ಲೈಂಗಿಕ ಸಂಪರ್ಕ ನಡೆಸಿದ್ದಲ್ಲದೆ ಅದನ್ನು ಫೋಟೋ, ವೀಡಿಯೋ ಚಿತ್ರೀಕರಿಸಿ ಇಟ್ಟುಕೊಂಡಿದ್ದ. ಇದೀಗ ಫೋಟೋ ಮತ್ತು ವಿಡೀಯೋವನ್ನು ಯುವತಿಯ ಗಂಡನಿಗೆ ಕಳುಹಿಸಿದ್ದಾನೆ. ಇದರಿಂದ ಕೋಪಗೊಂಡ ಪತಿ, ಪತ್ನಿಯ ಮುಖ ನೋಡಲು ಅಸಯ್ಯ ಪಟ್ಟು ನೇರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗಿದೆ.

ಅದರೆ ಇದೆಲ್ಲ ನಡೆಯುತ್ತಿದ್ದಂತೆ ಯುವತಿ ನೇರವಾಗಿ ಸುಬ್ರಹ್ಮಣ್ಯ ಠಾಣೆಗೆ ತೆರಳಿ ಮಾಜಿ ಪ್ರೀಯಕರನಿಂದ ನಮ್ಮ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ಅಲ್ಲದೆ ಆತ ತನ್ನನ್ನು ಬಲವಂತವಾಗಿ ಕೆರೆದು ಕೊಂಡುಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಿದ್ಧಾಳೆ ಇದೇ ರೀತಿ ಆತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದೆ.

ಅದರೆ ಇದು ಅತ್ಯಾಚಾರವಾಗಿ ಯೂ ಟರ್ನ್ ಹೊಡೆದದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಮೇಲ್ನೋಟಕ್ಕೆ ನೋಡುವುದಾದರೆ ಇಬ್ಬರ ಒಪ್ಪಿಗೆ ಮೇರೆಗೆ ಲೈಂಗಿಕ ಸಂಪರ್ಕ ನಡೆದಿದೆ ಎಂದು ಅಂದಾಜಿಸಲಾಗಿದೆ. ಅದರೆ ಆತ ಕಾನೂನಿಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕದ ವೇಳೆ ಫೋಟೋ ಮತ್ತು ವಿಡೀಯೋ ಚಿತ್ರೀಕರಿಸಿದ್ದು ಅಲ್ಲದೆ ಆ ವಿಡೀಯೋವನ್ನು ಆಕೆಯ ಈಗಿನ ಪತಿಗೆ ಕಳುಹಿಸಿ ತಪ್ಪೆಸಗಿರುವುದು ಗೋಚರವಾಗಿದೆ. ಸತ್ಯಾಂಶ ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

Leave a Comment

Your email address will not be published. Required fields are marked *