ತುರುವೇಕೆರೆ: ರಾಷ್ಟ್ರಧ್ವಜವನ್ನು ಮಧ್ಯಾಹ್ನ ಸುಮಾರು 3:00 ಗಂಟೆಗೆ ಇಳಿಸಿ ನಿಯಮ ಉಲ್ಲಂಘಟನೆ ಮಾಡಿ ರಾಷ್ಟ್ರಧ್ವಜಕ್ಕೆ ಅಗೌರವ ಸೃಷ್ಟಿಸಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಯಿತಿಯಲ್ಲಿ ಗುರುವಾರ ನಡೆದಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯತ್ , ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿ ಆವರಣದ ಧ್ವಜ ಸ್ತಂಭದ ಮೇಲೆ ರಾಷ್ಟ್ರಧ್ವಜ ಕಡ್ಡಾಯವಾಗಿ ಹಾರಿಸುವಂತೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸುತ್ತೋಲೆ ಹೊರಡಿಸಿ ಸೂಚಿಸಲಾಗಿದೆ. ಆದರೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಸೂಚನೆಯನ್ನೆ ಗಾಳಿಗೆ ತೂರಿದ್ದಾರೆ.
ಮನ ಬಂದಂತೆ ರಾಷ್ಟ್ರ ದ್ವಜವನ್ನು ಏರಿಸುವುದು, ಇಳಿಸುವುದೇ? ಅದಕ್ಕೊಂದು ಸಮಯವಿಲ್ಲವೇ? ಮೂರು ಬಣ್ಣಗಳಿರುವ ರಾಷ್ಟ್ರ ಧ್ವಜದ ಮಹತ್ವವನ್ನೆ ಪಂಚಾಯತ್ ನ ಆಡಳಿತ ಅಧಿಕಾರಿಯವರು ಮರೆತಂತಿದೆ ಎಂದು ನಾಗರಿಕರು ಆಕ್ರೋಶಿತರಾಗಿದ್ದಾರೆ.