Ad Widget .

ಬೆಳ್ತಂಗಡಿ: ಪತಿ-ಪತ್ನಿಯನ್ನು ಒಂದೇ ದಿನ ಬಲಿ ತೆಗೆದುಕೊಂಡ ಕೊರೊನಾ

ಬೆಳ್ತಂಗಡಿ: ಗಂಡ ಹೆಂಡತಿ ಇಬ್ಬರೂ ಒಂದೇ ದಿನ ಕೊರೊನಾ ಹೆಮ್ಮಾರಿಗೆ ತುತ್ತಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಗ್ರಾಮದ ದಂಪತಿ ನಿನ್ನೆ ಒಂದೇ ದಿನ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುನ್ನತ್ ನಾಥ್ ನಿವಾಸಿ ವಗೀ೯ಸ್ (74ವ) ಹಾಗೂ ಅವರ ಪತ್ನಿ ಮೇರಿ ವಗೀ೯ಸ್ (73ವ) ಮೃತ ಪಟ್ಟ ದುದೈ೯ವಿಗಳು.

Ad Widget . Ad Widget .

Ad Widget . Ad Widget .

ಮೃತ ದಂಪತಿಗೆ ಕಳೆದ ತಿಂಗಳು ಜ್ವರ ಕಾಣಿಸಿಕೊಂಡಿತ್ತು. ಅವರು ಔಷದಿ ತೆಗೆದುಕೊಂಡು ಗುಣಮುಖರಾಗಿದ್ದರು. ಬಳಿಕ ಮನೆಯಲ್ಲಿದ್ದ ದಂಪತಿಗೆ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದಾಗ ದಂಪತಿಗೆ ಕೋವಿಡ್ ದೃಢಪಟ್ಟಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ನಿನ್ನೆ ಮದ್ಯಾಹ್ನ ಮೃತಪಟ್ಟರೆ, ಪತಿ ರಾತ್ರಿ ಮೃತಪಟ್ಟಿದ್ದಾರೆ.

Leave a Comment

Your email address will not be published. Required fields are marked *