ಮೊಬೈಲ್ ಬ್ಯಾಟರಿ ಸ್ಪೋಟ: ಬಾಲಕನ ಕೈ ಛಿದ್ರ | ಪಾಲಕರೇ ಮಕ್ಕಳ ಆಟಿಕೆ ವಸ್ತುಗಳ ಮೇಲಿರಲಿ ಗಮನ

ಹಾವೇರಿ: ಆಟವಾಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಸಿಡಿದು ಮೂರು ವರ್ಷದ ಬಾಲಕನ ಕೈ ಛಿದ್ರಗೊಂಡ ಘಟನೆ ತಾಲೂಕಿನ ಸವಣೂರು ಎಂಬಲ್ಲಿ ನಡೆದಿದೆ.

Ad Widget ... ..

ಗಾಯಗೊಂಡ ಬಾಲಕ ಇತರೆ ಮಕ್ಕಳೊಂದಿಗೆ ಮನೆಯಲ್ಲಿ ಹಳೆ ವಸ್ತುಗಳೊಂದಿಗೆ ಆಟವಾಡುತ್ತಿದ್ದ. ಆಟಿಕೆ ವಸ್ತುಗಳೊಂದಿಗೆ ಹಳೆಯ ಮೊಬೈಲ್ ಬ್ಯಾಟರಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳಿದ್ದವು. ಆಟವಾಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಘರ್ಷಣೆಯಾಗಿ ಸ್ಪೋಟಗೊಂಡಿದೆ. ಪರಿಣಾಮ ಬಾಲಕನ ಕೈಯ ಮೂರು ಬೆರಳುಗಳು ತುಂಡಾಗಿವೆ.

Ad Widget

ಬ್ಯಾಟರಿ ರಾಸಾಯನಿಕಯುಕ್ತ ವಸ್ತು ಆದ ಕಾರಣ ಅದರ ಸ್ಪೋಟದಿಂದ ಮಗುವಿನ ಮುಖ ಮತ್ತು ದೇಹದ ಕೆಲವು ಭಾಗಗಳಿಗೆ ಸುಟ್ಟ ಗಾಯಗಳಾಗಿವೆ. ತಕ್ಷಣ ಗಾಯಗೊಂಡ ಬಾಲಕ ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದ್ದಾರೆ.

Leave a Comment

Your email address will not be published. Required fields are marked *