Ad Widget .

ಪತಿಯ ಕುಚಿಕು ಜೊತೆ ಹೆಂಡತಿಯ ಕುಚುಕುಚು | ಮನೆ ಕಡೆ ಸ್ವಲ್ಪ ನೋಡಿಕೋ ಎಂದಾತನ ಹೆಂಡತಿಯನ್ನೇ ಲಪಟಾಯಿಸಿದ ಸ್ನೇಹಿತ

ಬೆಂಗಳೂರು: ಹೊರ ಊರಿನಲ್ಲಿ ಕೆಲಸದಲ್ಲಿದ್ದ ಸ್ನೇಹಿತನ ಹೊಸ ಮನೆ ಕೆಲಸ ನೋಡಿಕೊಳ್ಳಲು ಬಂದ ಗೆಳೆಯನೊಂದಿಗೆ ಮನೆ ಮಾಲೀಕನ ಪತ್ನಿಯೇ ಪರಾರಿಯಾದ ಘಟನೆ ನಗರದ ಕೋಣನಕುಂಟೆ ಎಂಬಲ್ಲಿ ನಡೆದಿದೆ.

Ad Widget . Ad Widget .

ಸ್ಥಳೀಯ ನಿವಾಸಿ ದೇವರಾಜ್ ಎಂಬವರು ನೂತನ ಮನೆ ನಿರ್ಮಾಣ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸಕ್ಕೂ ಹೋಗುತ್ತಿದ್ದರು. ಈ ಸಮಯದಲ್ಲಿ ಊರಿನಲ್ಲೇ ಇದ್ದ ಗೆಳೆಯ ಮಹೇಶನಿಗೆ ಮನೆ ಕೆಲಸದವರನ್ನು ನೋಡಿಕೊಳ್ಳುವ ಉಸ್ತುವಾರಿ ನೀಡಿದ್ದರು.

Ad Widget . Ad Widget .

ಮನೆ ನಿರ್ಮಾಣದ ಕೆಲಸದವರನ್ನು ನೋಡಿಕೊಳ್ಳಲು ಬಂದ ಮಹೇಶ, ದೇವರಾಜ್ ರ ಹೆಂಡತಿಯನ್ನೇ ನೋಡಿಕೊಂಡಿದ್ದಾನೆ. ನಿತ್ಯ ಬರುತ್ತಿದ್ದ ದೇವರಾಜ್ ಪತ್ನಿ ಲತಾ ಮತ್ತು ಮಹೇಶ್ ನಡುವೆ ಸಲುಗೆ ಬೆಳೆದಿದೆ. ಪತಿ ಮನೆಯಲ್ಲಿದ ಸಮಯದಲ್ಲಿ ಇಬ್ಬರ ನಡುವೆ ಲೈಂಗಿಕ ಮಿಲನವೂ ನಡೆದಿದೆ. ಕೊನೆಗೆ ಎರಡು ಮಕ್ಕಳ ತಾಯಿ ಲತಾ, ಮಹೇಶನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಇಬ್ಬರು ಹೆಣ್ಣು ಮಕ್ಕಳ ತಂದೆ ದೇವರಾಜ್, ಪತ್ನಿ ಸ್ನೇಹಿತನೊಂದಿಗೆ ಪರಾರಿಯಾಗಿರುವ ವಿಷಯ ತಿಳಿದು ಆಶ್ಚರ್ಯಗೊಂಡಿದ್ದಾರೆ. ವಿಷಯ ತಿಳಿದ ಹಿರಿಯರು ಲತಾಳನ್ನು ಕರೆತಂದು ದೇವರಾಜ್ ನನ್ನೂ ಕೂರಿಸಿ ಸಂಧಾನ ನಡೆಸಿದ್ದಾರೆ.

ಇದಾದ ಬೆನ್ನಲ್ಲೇ ಲತಾ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಗಂಡ ಕಿರುಕುಳ ನೀಡುತ್ತಾನೆ ಎಂದು ದೂರು ನೀಡಿದ್ದಾಳೆ. ಮತ್ತು ಮಕ್ಕಳನ್ನು ತನ್ನ ಜೊತೆ ಕಳುಹಿಸಿಕೊಡಲು ಹಠ ಹಿಡಿದಿದ್ದಾಳೆ. ಇತ್ತ ದೇವರಾಜ್ ಕೂಡ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸದ ಪೊಲೀಸರು ಸ್ಟೇಷನ್ ನಲ್ಲೇ ಒಂದು ದಿನ ಕೂರಿಸಿ ಮನೆ ಕಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರೆ ಎಂದು ದೇವರಾಜ್ ಆರೋಪಿಸಿದ್ದಾರೆ.

ಮದುವೆ ನಂತರ ಪತ್ನಿಯನ್ನು ನಂಬಿದ್ದ ದೇವರಾಜ್ ತನ್ನೆಲ್ಲ ಆಸ್ತಿಯನ್ನು ಲತಾಳ ಹೆಸರಿನಲ್ಲೇ ಮಾಡಿದ್ದಾರೆ. ಇದೀಗ ಆಸ್ತಿಯನ್ನೆಲ್ಲ ಮಾರಿ ಮಹೇಶನೊಂದಿಗೆ ಮಜಾಉಡಾಯಿಸಲು ಲತಾ ಮುಂದಾಗಿದ್ದಾಳೆ. ಈ ನಡುವೆ ದೇವರಾಜ್ ಆಸ್ತಿ ಮಾರಾಟವಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಒಟ್ಟಾರೆ ಪತ್ನಿ ಸ್ನೇಹಿತನನ್ನು ನಂಬಿದ ದೇವರಾಜ್ ಗೆ ದಿಕ್ಕುತೋಚದಂತಾಗಿದೆ.

Leave a Comment

Your email address will not be published. Required fields are marked *