Ad Widget .

ಸುಳ್ಯ: ಬೇರೊಬ್ಬರ ಖಾತೆಗೆ ಜಮೆಯಾಯ್ತು ವಸತಿ ಯೋಜನೆಯ ಒಂದು ಕಂತು | ಇನ್ನೊಂದು ಕಂತು ಮಾಯ | ಕೊಡಿಯಾಲ ಗ್ರಾ.ಪಂ., ಇಲಾಖೆ ಎಡವಟ್ಟಿಗೆ ಬಡ ಮಹಿಳೆಯ ಪರದಾಟ

ಸುಳ್ಯ: ವಸತಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರ ಕಂತಿನ ಹಣ ಅಧಿಕಾರಿಗಳ ಎಡವಟ್ಟಿನಿಂದ ಬೇರೊಬ್ಬರ ಖಾತೆಗೆ ಜಮೆಯಾಗಿದೆ. ಇದರಿಂದ ಬಡ ಮಹಿಳೆ ಮನೆ ಪೂರ್ಣಗೊಳ್ಳದೆ ಪರದಾಡುವಂತಾಗಿದೆ. ಈ ಬಗ್ಗೆ ವಿಚಾರಿಸಿದರೆ ಪಂಚಾಯತ್ ಮತ್ತು ಇಲಾಖೆ ಅಧಿಕಾರಿಗಳು ಇದು ನಮ್ಮ ತಪ್ಪಲ್ಲ ಎಂದು ಪರಸ್ಪರ ದೂರಿಕೊಂಡು ಸುಮ್ಮನಾಗುತ್ತಿದ್ದಾರೆ. ಇತ್ತ ಫಲಾನುಭವಿ ಮಹಿಳೆಗೆ ದಿಕ್ಕುತೋಚದಂತಾಗಿದೆ.

Ad Widget . Ad Widget .

2015-16 ನೇ ಸಾಲಿನ ಡಾ. ಬಿ ಆರ್ ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪನೆಯ ಪರಿಶಿಷ್ಟ ಜಾತಿಯ ಶ್ರೀಮತಿ ರಾಜೀವಿ ಎಂಬ ಬಡ ಮಹಿಳೆಗೆ ಮನೆ ಮಂಜೂರಾಗಿದ್ದು, ಅದರಂತೆ ಮನೆ ನಿರ್ಮಿಸಲಾಗಿತ್ತು. ಮನೆ ನಿರ್ಮಾಣ ಕಾರ್ಯದ ಹಣವನ್ನು ಹಂತ ಹಂತವಾಗಿ ಪಲಾಭವಿಯ ಬ್ಯಾಂಕ್ ಖಾತೆಗೆ ನಿಗಮ ವರ್ಗಾಯಿಸುತ್ತಿದ್ದು ಈಗಾಗಲೆ ಮನೆ ನಿರ್ಮಾಣದ ಎರಡು ಕಂತುಗಳು ಪಲಾನುಭವಿಯ ಖಾತೆಗೆ ಜಮಾವಣೆಯಾಗಿದೆ.

Ad Widget . Ad Widget .

ಕೇವಲ ಎರಡು ಕಂತುಗಳಷ್ಟೆ ಶ್ರೀಮತಿ ರಾಜೀವಿಯವರಿಗೆ ಸಿಕ್ಕಿದ್ದು, ಉಳಿದ ಎರಡು ಕಂತುಗಳ ಹಣ ಇನ್ನು ಪಲಾನುಭವಿಯ ಕೈ ಸೇರಿಲ್ಲ‌. ಇದರಲ್ಲಿ ಕೊನೆಯ ಕಂತಿನ ಹಣವನ್ನು ಮನೆಯ ಪೂರ್ತಿ ಕೆಲಸ ಆದ ನಂತರ ಪಲಾನುಭವಿಗೆ ನೀಡಲಾಗುತ್ತೆಯಾದರೂ ಇಲ್ಲಿ ತನಕ ಬಾಕಿ ಉಳಿದಿರುವ ಹಣ ಪಲನುಭವಿಯ ಖಾತೆಗೆ ಜಮಾವಣೆಯಾಗಿಲ್ಲ. ಇಲ್ಲಿ ತನಕ ಎರಡು ಕಂತುಗಳ 74,800 ರೂ ಹಣ ಪಲಾನುಭವಿಯ ಕೈ ಸೇರಿದೆ. ಶ್ರೀಮತಿ ರಾಜೀವಿ ರವರ ಖಾತೆ ಸೇರ ಬೇಕಾಗಿದ್ದ ಕೊನೆಯ ಕಂತಿನ ಹಣ ಪುತ್ತೂರು ತಾಲೂಕಿನ ಚಾರ್ವಕ ಗ್ರಾಮದ ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮಾವಣೆಯಾಗಿದೆ ಎಂದು ತಿಳಿದು ಬಂದಿದೆ. ಒಂದು ಕಂತು ಚಾರ್ವಕ ಗ್ರಾಮದ ಪಲಾನುಭವಿಯ ಖಾತೆಗೆ ಜಮಾವಣೆಯಾದರೆ ಉಳಿದಿರುವ ಇನ್ನೊಂದು ಕಂತಿನ ಹಣ ಯಾಕೆ ಇನ್ನು ಜಮಾವಣೆಯಾಗಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ರಾಜೀವಿ ರವರು ಕೊಡಿಯಾಲ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ವಿಚಾರಿಸಿದಾಗ ಇದು ನಮ್ಮಿಂದಾದ ತಪ್ಪಲ್ಲ ಇದಕ್ಕೆ ನಿಗಮವೇ ಮೂಲ ಕಾರಣವೆಂದು ಪಂಚಾಯತ್ ಆಡಳಿತ ಅಧಿಕಾರಿ ಹೇಳುತ್ತಿದ್ದಾರೆ ಮಾತ್ರವಲ್ಲದೆ 9/1/2020 ಕ್ಕೆ ಈ ಕುರಿತು ಉಲ್ಲೇಖವೊಂದನ್ನು ನಿಗಮಕ್ಕೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. ನಿಗಮವನ್ನು ಕೇಳಿದಾಗ ಗ್ರಾಮ ಪಂಚಾಯತ್ ನಿಂದಾಗಿರುವ ಎಡವಟ್ಟು ಎಂದಿದ್ದಾರೆ. ರಾಜೀವಿಯವರ ಮನೆ ಕೆಲಸ ಪೂರ್ಣಗೊಂಡು ಎರಡು ವರ್ಷಗಳೆ ಕಳೆದಿವೆ. ಒಟ್ಟಿನಲ್ಲಿ ಸರಕಾರದಿಂದ ಸಿಗಬೇಕಾದ ಪುಡಿಗಾಸು ಅನುದಾನದಲ್ಲಿ ಸಂಬಂಧ ಪಟ್ಟ ಇಲಾಖೆಗಳಿಂದ ಈ ರೀತಿಯ ಎಡವಟ್ಟಿಗೆ ಬಡ ಪಲಾನುಭವಿಯು ಪರದಾಡುವಂತೆ ಮಾಡಿದೆ.

Leave a Comment

Your email address will not be published. Required fields are marked *