ಚೆನ್ನೈ: ಆಕಸ್ಮಿಕವಾಗಿ ನೀರಿನೊಂದಿಗೆ ಕೃತಕ ಹಲ್ಲನ್ನು ನುಂಗಿದ ಮಹಿಳೆ ಮೃತಪಟ್ಟಿರುವ ಘಟನೆ ಜುಲೈ 4 ರಂದು ಚೆನ್ನೈನಲ್ಲಿ ನಡೆದಿದ್ದು.
ವಲಸರವಕ್ಕಂನ 43 ವರ್ಷದ ಮಹಿಳೆ ರಾಜಲಕ್ಷ್ಮಿ ಎಂಬವರು ಮೃತಪಟ್ಟವರು. ಇವರು ನೀರು ಕುಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೃತಕ ಹಲ್ಲನ್ನು ನುಂಗಿದ್ದಾರೆ. ಆ ಬಳಿಕ ಮಹಿಳೆಗೆ ತಲೆತಿರುಗುವಿಕೆ ಮತ್ತು ವಾಂತಿ ಉಂಟಾಗಿತ್ತು. ಬಳಿಕ ವೈದ್ಯರು ಆಕೆಯನ್ನು ಪರೀಕ್ಷಿಸಿ ಬಿಡುಗಡೆ ಮಾಡಿದ್ದರು. ಮರುದಿನ, ಪರೀಕ್ಷಿಸಿಸಲು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ನಿಧನರಾದರು. ಶವಪರೀಕ್ಷೆ ನಡೆಸಿ ದೇಹವನ್ನು ಬಿಟ್ಟುಕೊಡಲಾಗಿದೆ.
ಕ್ರಿಮಿನಲ್ ಪ್ರೊಸಿಜರ್ನ ಕೋಡ್ನ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.