ಪುಲ್ವಾಮದಲ್ಲಿ ಬೆಳ್ಳಂಬೆಳಗ್ಗೆ ಮೂವರು LET ಉಗ್ರರು ಫಿನಿಷ್

ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ .

Ad Widget ... ..

ಇಂದು ಮುಂಜಾನೆ ಪುಲ್ವಾಮ ನಗರದಲ್ಲಿ ಉಗ್ರರಿರುವ ಬಗ್ಗೆ ಸೇನಾಧಿಕಾರಿಗಳಿಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣ ಕಾರ್ಯಪ್ರವೃತವಾದ ಭಾರತೀಯ ಭೂ ಸೇನೆ ಉಗ್ರರಿರುವ ಸ್ಥಳವನ್ನು ಸುತ್ತುವರೆದಿದೆ. ಅದಾಗಲೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ತಕ್ಷಣ ಪ್ರತಿದಾಳಿ ನಡೆಸಿದ ಯೋಧರು ಲಷ್ಕರ್-ಇ-ತಾಯ್ಬಾ ಉಗ್ರ ಸಂಘಟನೆಯ ಓರ್ವ ಕಾಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget

ಹತನಾದ ಕಾಮಾಂಡರ್ನನ್ನು ಐಜಾಜ್ ಅಲಿಯಾಸ್ ಅಬು ಹುರೈರಾ ಎಂದು ಗುರುತಿಸಲಾಗಿದೆ. ಸ್ಥಳದಿಂದ ರೈಫಲ್ ಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *